ಮಂಗಳವಾರ, ಮಾರ್ಚ್ 2, 2021
29 °C

ಶ್ರೀಧರಗಡ್ಡೆ: ಶುದ್ಧ ಕುಡಿಯುವ ನೀರಿಗೆ ತತ್ವಾರ

ಸಿದ್ದಯ್ಯ ಹಿರೇಮಠ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಧರಗಡ್ಡೆ: ಶುದ್ಧ ಕುಡಿಯುವ ನೀರಿಗೆ ತತ್ವಾರ

ಬಳ್ಳಾರಿ: ವೇದಾವತಿ (ಹಗರಿ) ಹಾಗೂ ತುಂಗಭದ್ರಾ ನದಿಗೆ ಐದು ವರ್ಷಗಳ ಹಿಂದೆ ಬಂದಿದ್ದ ಭಾರಿ ಪ್ರವಾಹ ದಿಂದಾಗಿ ಸ್ಥಳಾಂತರಗೊಂಡಿರುವ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಶ್ರೀಧರಗಡ್ಡೆ ‘ನವಗ್ರಾಮ’ದ ಬಳಿ ಶುದ್ಧ ಕುಡಿಯುವ ನೀರು ಪೂರೈಸಲು ಕಟ್ಟಿಸಿರುವ ಕೆರೆಗೆ ನೀರು ಹರಿಸದ್ದರಿಂದ ಅಲ್ಲಿನ ನಿವಾಸಿಗಳು ಕೊಳವೆ ಬಾವಿ ಯಲ್ಲಿನ ಕಲುಷಿತ, ಫ್ಲೋರೈಡ್‌ ಅಂಶ ವಿರುವ ನೀರು ಕುಡಿಯುವ ಅನಿವಾ ರ್ಯತೆಗೆ ಒಳಗಾಗಿದ್ದಾರೆ.2009ರಲ್ಲಿ ಪ್ರವಾಹದಿಂದ ತತ್ತರಿ ಸಿದ್ದ ಗ್ರಾಮದ 300 ಮನೆಗಳನ್ನು ಸ್ಥಳಾಂತರಿಸಲಾಗಿದ್ದು, ಹಚ್ಚೊಳ್ಳಿ ಮುಖ್ಯರಸ್ತೆಯಲ್ಲಿ ನವಗ್ರಾಮ ನಿರ್ಮಿಸ ಲಾಗಿದೆ. ಪಕ್ಕದಲ್ಲೇ ಕುಡಿವ ನೀರಿನ ಕೆರೆ, ದೊಡ್ಡ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದೆ.

ತುಂಗಭದ್ರಾ ನದಿಯಿಂದ ಕೊಳವೆ ಮಾರ್ಗವನ್ನೂ, ಕೆರೆಯ ಪಕ್ಕದಲ್ಲಿ ಪಂಪ್‌ಹೌಸ್‌ ಅನ್ನೂ ನಿರ್ಮಿಸಲಾಗಿದೆ. ಆದರೆ, ನೀರೆತ್ತಲು ಅಗತ್ಯವಿರುವ ಸಲ ಕರಣೆಗಳನ್ನು ನದಿಯಲ್ಲಿ ಅಳವಡಿಸಲು ವಿಳಂಬ ಮಾಡುತ್ತಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.‘ಕುಡಿವ ನೀರಿನ ಸಮಸ್ಯೆ ಕುರಿತು ಪಂಚಾಯ್ತಿಯಲ್ಲಿ ಅನೇಕ ಬಾರಿ ದನಿ ಎತ್ತಿದರೂ ಪ್ರಯೋಜನ ಆಗಿಲ್ಲ. ಈ ಕುರಿತು ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಗಮನ ಸೆಳೆದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಅನು ದಾನದ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬ ಸಬೂಬು ನೀಡುತ್ತಿದ್ದಾರೆ’ ಎಂದು ಗ್ರಾಮದ ಪಂಚಾಯ್ತಿ ಸದಸ್ಯ ಬಸಾಪುರ ವೆಂಕಟೇಶ ‘ಪ್ರಜಾವಾಣಿ’ಗೆ ತಿಳಿಸಿದರು.‘ಜಲ ಸಂಪನ್ಮೂಲ ಸಚಿವರು ಕುಡಿ ಯುವ ನೀರು ಯೋಜನೆಗೆ ಸಾಕಷ್ಟು ಅನುದಾನ ಇದೆ ಎಂದು ಇತ್ತೀಚೆಗಷ್ಟೇ ಬಳ್ಳಾರಿಯಲ್ಲಿ ಸಭೆ ನಡೆಸಿ ತಿಳಿಸಿದ್ದರೂ ಅಧಿಕಾರಿಗಳು ನಮ್ಮ ಗ್ರಾಮದ ಸಮಸ್ಯೆ ನೀಗಿಸಲು ಗಮನ ಹರಿಸುತ್ತಿಲ್ಲ’ ಎಂದು ಅವರು ದೂರಿದರು.‘ನಾವೆಲ್ಲ ಗ್ರಾಮದಲ್ಲಿ ಕೊರೆಯಿಸಿ ರುವ ಕೊಳವೆ ಬಾವಿ ನೀರನ್ನು ಕುಡಿ ಯುತ್ತಿದ್ದೇವೆ. ಆ ನೀರನ್ನು ಸೇವಿಸಿದರೆ ವಾಂತಿ, ಭೇದಿ ಕಾಣಿಸಿಕೊಳ್ಳುತ್ತದೆ. ಹಗರಿ ನದಿಯಿಂದಲೂ ಕುಡಿಯಲು ನೀರು ಪೂರೈಸಲಾಗುತ್ತಿದೆ. ಆದರೆ, ಆ ನೀರು ಸಿಹಿ ಇಲ್ಲ.

ಬೇಸಿಗೆಯಲ್ಲಿ ನದಿ ಬತ್ತಿರುವುದರಿಂದ ಅಲ್ಲಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ’ ಎಂದು ಗ್ರಾಮಸ್ಥರು ದೂರಿದರು.‘ಶುದ್ಧ ನೀರಿಗಾಗಿ ಪಕ್ಕದಲ್ಲಿರುವ ಕೊತ್ತಲಚಿಂತ ಹಾಗೂ ಹೊನ್ನಾರಳ್ಳಿ ಗ್ರಾಮಕ್ಕೆ ಹೋಗ ಬೇಕಿದೆ. ಆ ಗ್ರಾಮದ ವರೂ ನೀರು ಕೊಡಲು ನಿರಾಕರಿಸುತ್ತಾರೆ. ಅದ ರಿಂದಾಗಿ ಕೊಳವೆ ಬಾವಿ ನೀರನ್ನೇ ಕುಡಿ ಯಬೇಕಾಗಿದೆ ಎಂದು ಗ್ರಾಮದ ಹಂಡಿ ನಿಂಗಮ್ಮ ಸಮಸ್ಯೆ ಹೇಳಿಕೊಂಡರು.ನೀರು ಪೂರೈಸಲು ಗ್ರಾಮದ ವಿವಿಧೆಡೆ ಅಲ್ಲಲ್ಲಿ ಟ್ಯಾಂಕ್‌ ನಿರ್ಮಿಸಿದ್ದು, ಮೂರು ತಿಂಗಳ ಹಿಂದೆ ಅವುಗಳಲ್ಲಿ ನೀರು ಬರುತ್ತಿತ್ತು. ಬೇಸಿಗೆಯಲ್ಲಿ ಸ್ಥಗಿತಗೊಂಡಿದೆ. ಇದರಿಂದಾಗಿ ಕುಡಿವ ನೀರಿನ ಸಮಸ್ಯೆ ತಲೆ ದೋರಿದೆ ಎಂದು ಅಳಲು ತೋಡಿಕೊಂಡರು.ಪಕ್ಕದಲ್ಲಿರುವ ಕುಡುದ್ರಾಳ್‌ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರುವ ಈ ಗ್ರಾಮದ ಜನರೆಲ್ಲ ಅನೇಕ ಬಾರಿ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದ್ದೇವೆ. ಕಳೆದ ವಾರ ಮಳೆ ಸುರಿದಿದ್ದು, ಪಕ್ಕ ದಲ್ಲಿರುವ ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿದೆ. ಅಲ್ಲಿಂದ ಕೆರೆಗೆ ನೀರು ತುಂಬಿಸಿ ಪೂರೈಸಿದರೆ ಅನು ಕೂಲವಾಗುತ್ತದೆ ಎನ್ನುತ್ತಾರೆ.ನೀರು ಕುಡಿದರೆ ವಾಸನೆ ಬರತ್ತೆ

ಬೋರ್‌ ನೀರಲ್ಲಿ ಕಿಲುಬು ವಾಸನೆ ಇದೆ. ಕುಡಿದರೆ ವಾಂತಿ, ಭೇದಿ ಸಮಸ್ಯೆ ತಲೆದೋರುತ್ತದೆ. ಕೆರೆಗೆ ನೀರು ತುಂಬಿಸಿ ಪೂರೈಸಿದರೆ ಸಮಸ್ಯೆ ಬಗೆಹರಿಯಲಿದೆ.

-ತಾತನವರ ದುರ್ಗಮ್ಮಬೇಸಿಗೆಯಲ್ಲಿ ಈ ನೀರೇ ಅನಿವಾರ್ಯ


ಇಷ್ಟು ದಿನ ನಾವು ಹಗರಿ ನದಿಯ ಉಪ್ಪು ನೀರನ್ನೇ ಕುಡಿದಿದ್ದೇವೆ. ಕೊಳವೆ ಬಾವಿಯಲ್ಲಿನ ನೀರನ್ನು ಬಾಯಿಗೆ ಹಾಕಿಕೊಳ್ಳುವುದಕ್ಕೆ ಯೋಗ್ಯವಿಲ್ಲ. ಆದರೂ ಬೇಸಿಗೆಯಲ್ಲಿ ಅನಿವಾರ್ಯವಾಗಿ ಆ ನೀರನ್ನೇ ಕುಡಿಯುತ್ತಿದ್ದೇವೆ.

-ಕರಿಲಿಂಗಪ್ಪನವರ ಮಲ್ಲಮ್ಮ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.