ಮಂಗಳವಾರ, ಜನವರಿ 21, 2020
19 °C

ಶ್ರೀನಗರ: ಉಗ್ರರ ದಾಳಿಗೆ ಎಸೈ ಬಲಿ, ಇಬ್ಬರು ಪೊಲೀಸರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ (ಪಿಟಿಐ): ಕಾಶ್ಮೀರದ ಬದಗಮ್ ಜಿಲ್ಲೆಯಲ್ಲಿನ ಚದೂರ ಪೊಲೀಸ್ ಠಾಣೆಯ ಹೊರಗೆ ನೆರೆದಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಸೋಮವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ `ಸ್ಟೇಶನ್ ಹೌಸ್ ಆಫಿಸರ್' ಸಬ್ ಇನ್ಸ್‌ಪೇಕ್ಟರ್ ಶಬೀರ್ ಅಹಮ್ಮದ್ ಮೃತಪಟ್ಟು, ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಶಬೀರ್ ಕೊನೆಯುಸಿರೆಳೆದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಗಾಯಗೊಂಡಿರುವ ಪೇದೆಗಳನ್ನು ಮೊಹಮ್ಮದ್ ಶಫಿ ಮತ್ತು ಎಸ್‌ಪಿಒ ಪಿರ್ಧೊಸ್ ಅಹಮದ್ ಎಂದು ಗುರ್ತಿಸಲಾಗಿದೆ.

ಈ ದಾಳಿ ಕುರಿತಂತೆ ಇವರೆಗೆ ಯಾವುದೇ ಉಗ್ರರ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ.

ಪ್ರತಿಕ್ರಿಯಿಸಿ (+)