ಶನಿವಾರ, ಜನವರಿ 25, 2020
16 °C

ಶ್ರೀನಗರ: ಹಿಮದಡಿ ಸಿಲುಕಿ ಇಬ್ಬರು ಯುವತಿಯರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಹಿಮ ಕುಸಿತದಲ್ಲಿದಡಿ ಸಿಲುಕಿ ಇಬ್ಬರು ಯುವತಿಯರು ಸಾವ­ನ್ನಪ್ಪಿದ ಘಟನೆ ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುರೆಜ್‌ ಎಂಬಲ್ಲಿ ಭಾನುವಾರ ನಡೆದಿದೆ.ಪಿಟಿಐ ವರದಿ: ಅಧಿಕ ಹಿಮಪಾತ­ದಿಂದಾಗಿ ಜಮ್ಮು – ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. 300 ಕಿ.ಮೀ ಉದ್ದದ ಈ ಮಾರ್ಗವು ಜಮ್ಮು ಕಾಶ್ಮೀರದೊಂದಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿದೆ. ಅಧಿಕ ಹಿಮಪಾತದಿಂದಾಗುವ ಅಪಾಯವನ್ನು  ಮನಗಂಡು ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.ಮಂಜು: ಜನಜೀವನ ಅಸ್ತವ್ಯಸ್ತ

ಜೈಪುರ (ಪಿಟಿಐ): ರಾಜಸ್ತಾನದ ಬಹುತೇಕ ಭಾಗಗಳಲ್ಲಿ ಭಾನುವಾರ ಸತತ ಎರಡ­ನೇ ದಿನವೂ ದಟ್ಟ ಮಂಜು ಮುಸುಕಿದ ವಾತಾ­ವರಣ ಮುಂದುವರಿದಿದ್ದು, ಜನ­ಜೀವನ ಅಸ್ತವ್ಯಸ್ತಗೊಂಡಿತ್ತು.  ಸಾರಿಗೆ ಮತ್ತು  ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಯಿತು.ಮನಾಲಿಯಲ್ಲಿ ಹಿಮಪಾತ

ಶಿಮ್ಲಾ (ಐಎಎನ್ಎಸ್): ಭಾರತದ ಜನಪ್ರಿಯ ಪ್ರವಾಸಿ ತಾಣಗಳಾದ ಶಿಮ್ಲಾ, ಮನಾಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಈ ಋತುವಿನ ಮೊದಲ ಹಿಮಪಾತವಾಗಿದೆ. ಮನಾಲಿಯಲ್ಲಿ ಕನಿಷ್ಠ ತಾಪಮಾನ- ಮೈನಸ್‌ 1.2 ಡಿಗ್ರಿ ಇತ್ತು.

ಯಾಗಿದ್ದು,  18 ಸೆ.ಮೀ. ಹಿಮಪಾತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರತಿಕ್ರಿಯಿಸಿ (+)