ಯಲಹಂಕ: ಶ್ರೀ ಹರಿದಾಸ ಸಂಘ ಹಾಗೂ ಶ್ರೀವಾರಿ ಫೌಂಡೇಷನ್ ಸಂಸ್ಥೆಯ ಸಹಯೋಗದೊಂದಿಗೆ ಇಲ್ಲಿನ ಬಜಾರ್ ರಸ್ತೆಯ ಆನಂದರಾಮ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.

ಮಹೋತ್ಸವ ಅಂಗವಾಗಿ ಬೆಳಗ್ಗೆ 10.45 ಗಂಟೆಗೆ ಶ್ರೀನಿವಾಸ ದೇವರ ಮಹಾ ಅಭಿಷೇಕ, ಮಹಾಪೂಜೆ, ಶ್ರೀ ವಿಷ್ಣುಸಹಸ್ರನಾಮ ಹೋಮ, ಪೂರ್ಣಾಹುತಿ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಂಜೆ 4.30 ಗಂಟೆಗೆ ಪಟ್ಟಣದ ರಾಜಬೀದಿಗಳಲ್ಲಿ ಶ್ರೀನಿವಾಸ ದೇವರ ಉತ್ಸವ ನಡೆಯಿತು.

ಸಾಂಪ್ರದಾಯಕ ಉಡುಪನ್ನು ಧರಿಸಿದ್ದ ಊರಿನ ಗಣ್ಯರು `ಅಕ್ಷರ ಬ್ರಹ್ಮ ಗೋವಿಂದನಾಮ~ ಹೇಳಿಕೊಂಡು ಹಾಗೂ ಮಹಿಳೆಯರು `ಬಾರಯ್ಯ ಶ್ರೀನಿವಾಸ~ ಎಂಬ ಭಜನೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಉತ್ಸವದ ನಂತರ ಸಂಜೆ 7 ಗಂಟೆಗೆ ಶ್ರೀ ಹರಿದಾಸ ಸಂಘದ ಸಂಸ್ಥಾಪಕರಾದ ಹ.ರಾ.ನಾಗರಾಜಾಚಾರ್ಯ ಅವರು, ಶ್ರೀನಿವಾಸ ಕಲ್ಯಾಣ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಪ್ರವಚನ ನೀಡಿದರು. ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿದ್ದ ಶ್ರೀವಾರಿ ಫೌಂಡೇಷನ್ ಸಂಸ್ಥೆಯ ಎಸ್.ವೆಂಕಟೇಶಮೂರ್ತಿ ಅವರು, ಮಹೋತ್ಸವದ ಉದ್ದೇಶವನ್ನು ತಿಳಿಸಿದರು.

ಕರ್ನಾಟಕ ಹರಿದಾಸರ ಹಾಡುಗಳ ಆಧಾರದ ಮೇಲೆ ನೃತ್ಯ ಗೀತನದೊಂದಿಗೆ ಶ್ರೀನಿವಾಸ ಕಲ್ಯಾಣ ನೆರವೇರಿಸಲಾಯಿತು.

ತಿರುಪತಿಯ ಪಂಡಿತರಾದ ಶ್ರೀ ಶ್ರೀಕಾಂತ ಆಚಾರ್ಯ ಅವರು, ಕಲ್ಯಾಣ ಮಹೋತ್ಸವದ ಸಂಕಲ್ಪ ಮಾಡಿಸಿ ದರು. ಮಾಜಿ ನಗರಸಭಾ ಅಧ್ಯಕ್ಷ ಮು.ಕೃಷ್ಣಮೂರ್ತಿ ಮತ್ತು ಸಂಗಡಿಗರು ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಶಾಸಕ ಎಸ್.ಆರ್.ವಿಶ್ವನಾಥ್, ಬಿಬಿಎಂಪಿ ಸದಸ್ಯ ವೈ.ಎನ್.ಅಶ್ವಥ್, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ಬಾಷಾ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.