ಗೋಣಿಕೊಪ್ಪಲು: ಶ್ರೀಮಂಗಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಾಗರಿಕರ ಬೇಡಿಕೆಯಂತೆ ಜನರೇಟರ್ ವ್ಯವಸ್ಥೆ, ವೈದ್ಯರ ವಸತಿ ಗೃಹ ದುರಸ್ತಿ, ಸ್ತ್ರೀರೋಗ ತಜ್ಞರ ನೇಮಕ ಮೊದಲಾದ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿ.ಪಂ. ಸದಸ್ಯೆ ಚೋಡುಮಾಡ ಶರೀನ್ ಸುಬ್ಬಯ್ಯ ಹೇಳಿದರು.

ಆರೋಗ್ಯ ಕೇಂದ್ರದ್ಲ್ಲಲಿ ಈಚೆಗೆ ನಡೆದ ಸಮುದಾಯ ಆರೋಗ್ಯ ಸ್ಪಂದನ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಕೇಂದ್ರಕ್ಕೆ ತುರ್ತು ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಆಸ್ಪತ್ರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಚ್ಚಮಾಡ ಡಾಲಿ ಚಂಗಪ್ಪ ಮಾತನಾಡಿ, ರೋಗಿಗಳಿಗೆ ನೀಡಲು ಔಷಧಿಗಳ ಕೊರತೆ ಕಾಡುತ್ತಿದೆ. ಇದನ್ನು ಕೂಡಲೆ ನಿವಾರಿಸಬೇಕಾಗಿದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಕೆ.ಎಂ.ಬಾಲಕೃಷ್ಣ ಮಾತನಾಡಿ, ಹಿಂದೆ ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದ ಕರುಣಾ ಟ್ರಸ್ಟ್ ಟೆಲಿಮೆಡಿಷನ್, ಲ್ಯಾಬ್, ಅಂಬುಲೆನ್ಸ್ ಮುಂತಾದ ಸೌಲಭ್ಯ ಒದಗಿಸಿದೆ. ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿ ಆಸ್ಪತ್ರೆಯ ಸಿಬ್ಬಂದಿಗಳದ್ದಾಗಿದೆ ಎಂದು ಹೇಳಿದರು.

ವೈದ್ಯಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಎಕ್ಸರೇ ಘಟಕ ಹಾಗೂ ಮರಣೋತ್ತರ ಪರೀಕ್ಷೆ ನಡೆಸುವ ಸೌಲಭ್ಯವನ್ನು ಒದಗಿಸಲು ಎಲ್ಲ ವ್ಯವಸ್ಥೆ ನಡೆಯುತ್ತಿದೆ. ಸದ್ಯದಲ್ಲಿಯೇ ಮದ್ಯಪಾನ ಮುಕ್ತ ಶಿಬಿರ ನಡೆಸಲು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಮಲ್ಲಿಗೆ, ಉಪಾಧ್ಯಕ್ಷೆ ಪಂದ್ಯಂಡ ಮುತ್ತಮ್ಮ, ಸದಸ್ಯ ಕಾಳಿಮಾಡ ತಮ್ಮು ಮುತ್ತಣ್ಣ, ತಾ.ಪಂ. ಸದಸ್ಯ ಅರುಣ್ ಭೀಮಯ್ಯ, ಮಾಣೀರ ವಿಜಯ್ನಂಜಪ್ಪ, ನಾಗರಿಕ ಹೋರಾಟ ಸಮಿತಿ ಉಪಾಧ್ಯಕ್ಷ ಅಜ್ಜಮಾಡ ಪಿ.ಕುಶಾಲಪ್ಪ, ಬಾಚಂಗಡ ಪೂವಯ್ಯ, ವಾಣಿ ಮಾದಪ್ಪ, ನಾಲ್ಕೇರಿ ಗ್ರಾ.ಪಂ. ಸದಸ್ಯ ಅನಿಲ್ ಉತ್ತಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.