ಲಂಡನ್ (ಪಿಟಿಐ): ಬ್ರಿಟನ್ ಸಂಸತ್ನಲ್ಲಿ ಮೇಲ್ಮನೆ (ಹೌಸ್ ಆಫ್ ಲಾರ್ಡ್ಸ್) ಸುಧಾರಣಾ ಮಸೂದೆಗೆ ಆಡಳಿತಾರೂಢ ಮೈತ್ರಿಕೂಟದ ಅಂಗಪಕ್ಷವಾದ `ಕನ್ಸರ್ವೇಟಿವ್~ನ 91 ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರಧಾನಿ ಡೇವಿಡ್ ಕ್ಯಾಮರಾನ್ ನೇತೃತ್ವದ ಸಮ್ಮಿಶ್ರ ಸರ್ಕಾರ ಸಂಕಷ್ಟದಲ್ಲಿ ಸಿಲುಕಿದೆ.

700 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಬ್ರಿಟನ್ ಮೇಲ್ಮನೆಗೆ ಸುಧಾರಣೆ ತರಲು ಈ ಮಸೂದೆ ಮಂಡಿಸಲಾಗಿದೆ. ಶೇ 80ರಷ್ಟು ಸ್ಥಾನಗಳಿಗೆ ಚುನಾವಣೆ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂಬುದು ಸೇರಿದಂತೆ ಹಲವು ಅಂಶಗಳು ಈ ಉದ್ದೇಶಿತ ಸುಧಾರಣೆಯಲ್ಲಿದೆ.

`ಕನ್ಸ್ರ್ವೇಟಿವ್~ ಮತ್ತು `ಲಿಬರಲ್ ಡೆಮಾಕ್ರಾಟ್ಸ್~ ಪಕ್ಷಗಳ ಸಮ್ಮಿಶ್ರ ಸರ್ಕಾರ ಉದ್ದೇಶಿತ ಸುಧಾರಣೆಯಲ್ಲಿನ ಪ್ರಸ್ತಾವಗಳ ಆಧಾರದ ಮೇಲೆ ಮಸೂದೆ ತಾರ್ಕಿಕವಾಗಿ ಬೆಂಬಲ ಪಡೆದುಕೊಂಡಿದೆ. ಆದರೆ, ಈ ಮಸೂದೆ ಮೇಲಿನ ಚರ್ಚೆ ಆರಂಭವಾಗಿ, ಚರ್ಚೆಗೆ ಒಂದು ಕಾಲಮಿತಿ ನಿಗದಿ ಮಾಡಬೇಕು ಎನ್ನುವ ಹಂತದಲ್ಲಿ `ಕನ್ಸ್ರ್ವೇಟಿವ್~ ಪಕ್ಷದ 91 ಸದಸ್ಯರು ಮಸೂದೆಯನ್ನು ವಿರೋಧಿಸಿದ್ದಾರೆ. ಇದಕ್ಕೆ ಲೇಬರ್ ಪಕ್ಷದ 26 ಸಂಸದರ ಬೆಂಬಲವೂ ಇತ್ತು.

ಈ ಮಸೂದೆ ಮೇಲಿನ ಚರ್ಚೆಗೆ ಕಾಲಮಿತಿ ನಿಗದಿ ಪಡಿಸಲು ವಿಫಲವಾಗಿರುವುದರಿಂದ ಮಸೂದೆ ಬಿದ್ದುಹೋಗುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಉದ್ದೇಶಿತ ಮಸೂದೆಯ ಪ್ರಸ್ತಾವಗಳನ್ನು 338 ಸಂಸದರು ಬೆಂಬಲಿಸಿದ್ದರು ಎಂದು `ಲಿಬರಲ್ ಡೆಮಾಕ್ರಾಟ್ಸ್~ ಪಕ್ಷದ ಮುಖಂಡರೂ ಆದ ಉಪ ಪ್ರಧಾನಿ ನಿಕ್ ಕ್ಲೇಗ್ ಹೇಳಿಕೊಂಡಿದ್ದರೂ, ಅವರು ಮಸೂದೆ ಮೇಲಿನ ಚರ್ಚೆ ಆರಂಭಿಸಿದಾಗ ಮಿತ್ರಪಕ್ಷ `ಕನ್ಸ್ರ್ವೇಟಿವ್~ನ 91 ಸದಸ್ಯರ ದೊಡ್ಡ ಗುಂಪು ಮಸೂದೆಯನ್ನು ವಿರೋಧಿಸಿದೆ.
`ಮೇಲ್ಮನೆ ನಿಷ್ಪ್ರಯೋಜಕ ಸಂಸ್ಥೆಯಾಗಿದ್ದು, ಇದರ ಅಧಿಕಾರ ಔಚಿತ್ಯಪೂರ್ಣವಾದುದ್ದೇನು ಅಲ್ಲ. ಆದ್ದರಿಂದ ಈ ಸಂಸ್ಥೆಗೆ ಸುಧಾರಣೆ ತರುವ ಅಗತ್ಯ ಇದೆ~ ಎಂದು ಕ್ಲೇಗ್ ಹೇಳಿದರು.

ಉದ್ದೇಶಿತ ಮಸೂದೆಯಲ್ಲಿನ `ಪೂರ್ಣ ಮತ್ತು ಅನಿಯಂತ್ರಿತ ಪರಿಶೀಲನೆ~ಯ ಅಂಶವನ್ನು ಒಪ್ಪಲಾಗದು ಎಂದ `ಕನ್ಸ್ರ್ವೇಟಿವ್~ ಪಕ್ಷದ 91 ಸಂಸದರು, ಇದರಿಂದ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುತ್ತದೆ. ಅದು ಈಗ ತಲೆದೋರಿರುವ ಆರ್ಥಿಕ ಹಿಂಜರಿತಕ್ಕಿಂತಲೂ ಅಪಾಯಕಾರಿ ಆಗಬಹುದು ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.

`ಹೌಸ್ ಆಫ್ ಲಾರ್ಡ್ಸ್~ಗೆ ಸುಧಾರಣೆ ತರುವ ಒಪ್ಪಂದವು ಡೇವಿಡ್ ಕ್ಯಾಮರಾನ್ ಅವರು 2010ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಸಂದರ್ಭದಲ್ಲಿ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.