ರಾಜರಾಜೇಶ್ವರಿನಗರ: `ನಿತ್ಯ ವಿಷಯುಕ್ತ ಆಹಾರ, ನೀರು, ಗಾಳಿ ಸೇವನೆ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಾನವ ಕುಲಕ್ಕೆ ಅಪಾಯಕಾರಿ ಪರಿಸ್ಥಿತಿ ಬಂದೊದಗಲಿದೆ~ ಎಂದು ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಆತಂಕ ವ್ಯಕ್ತಪಡಿಸಿದರು.

ಸ್ನೇಹರಂಗ, ಗ್ರಾಮೀಣ ನ್ಯಾಚುರಲ್, ರಾಜರಾಜೇಶ್ವರಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ರಾಜರಾಜೇಶ್ವರಿನಗರದಲ್ಲಿ ಹಮ್ಮಿಕೊಂಡಿದ್ದ `ಸಂಕ್ರಾಂತಿ ಸಂತೆ~ಗೆ ಚಾಲನೆ ನೀಡಿ ಅವರು ಮಾತನಾಡಿದರು.

`ಮಾನವನ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಲು ಸರ್ಕಾರ ರಾಸಾಯನಿಕ ಗೊಬ್ಬರ ತಿರಸ್ಕರಿಸಿ ನೈಸರ್ಗಿಕ ಬೆಳೆಗಳನ್ನು ಬೆಳೆಯಲು ಅವಕಾಶ ಮಾಡಕೊಡಬೇಕು~ ಎಂದು ಮನವಿ ಮಾಡಿದರು.

ಪಾಲಿಕೆಯ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಚ್. ರಾಮಚಂದ್ರ, `ಯುವ ಪೀಳಿಗೆ ಗ್ರಾಮೀಣ ಸಂಸ್ಕೃತಿ, ಕಲೆ, ಹಬ್ಬಗಳನ್ನು ಮರೆಯುತ್ತಿರುವುದರಿಂದ ಎಲ್ಲ ಜನರನ್ನು ಒಟ್ಟಿಗೆ ಬೆಸೆಯುವ ಮೂಲಕ ನೈಸರ್ಗಿಕವಾಗಿ ಬೆಳೆದಿರುವ ಆಹಾರ ಪದಾರ್ಥಗಳನ್ನು ಪರಿಚಯಿಸಲು ಸಂಕ್ರಾಂತಿ ಸಂತೆ ಹಮ್ಮಿಕೊಳ್ಳಲಾಗಿದೆ~ ಎಂದರು.

ಸ್ನೇಹರಂಗ ಅಧ್ಯಕ್ಷ ಟಿ.ರಘು, ಗ್ರಾಮೀಣ ನ್ಯಾಚುರಲ್ ಮುಖ್ಯಸ್ಥ ಎಂ.ಎಸ್.ಶ್ರೀಧರಮೂರ್ತಿ, ಚಿತ್ರ ಕಲಾವಿದ ಬಾಬುರಾವ್ ಮಾರ್ಕಂಡೇಯ, ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.