ಸೋಮವಾರ, ಜೂನ್ 21, 2021
30 °C

ಸಂಕ್ಷಿಪ್ತ ಸಿನಿಮಾ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಕ್ಷಿಪ್ತ ಸಿನಿಮಾ ಸುದ್ದಿಗಳು

ಶೀಘ್ರ `ಸೈಲೆನ್ಸ್~

ಎಂ. ಕೃಷ್ಣಮೂರ್ತಿ ನಿರ್ಮಿಸುತ್ತಿರುವ `ಸೈಲೆನ್ಸ್~ ಚಿತ್ರದ ಚಿತ್ರೀಕರಣ ಮತ್ತು ನಂತರದ ಚಟುವಟಿಕೆಗಳು ಮುಗಿದಿವೆ. ಕಳೆದ ವಾರ ಸೆನ್ಸಾರ್ ಮಂಡಳಿ ಚಿತ್ರಕ್ಕೆ `ಎ~ ಪ್ರಮಾಣಪತ್ರ ನೀಡಿದೆ.ಎ. ವೇಣುಗೋಪಾಲ್ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ  ಎಂ.ಆರ್. ಚವಾಣ್ ಛಾಯಾಗ್ರಹಣ, ವಿಜಯಭಾರತಿ ಸಂಗೀತ, ಕನ್ನಡಿಗ ಶಿವು ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ, ಪ್ರಸಾದ್ ತ್ರಿಭುವನ, ಕಪಿಲ್ ನೃತ್ಯ ನಿರ್ದೇಶನ, ಶ್ಯಾಂ ಸಂಕಲನವಿದೆ. ಕುಮಾರ್, ಸುರೇಖಾ, ಪಲ್ಲವಿ, ನಿಶಾ ಶೆಟ್ಟಿ, ಥ್ರಿಲ್ಲರ್‌ಮಂಜು, ರಮೇಶ್‌ಭಟ್, ಸಂಗಮೇಶ್, ಪದ್ಮಜಾರಾವ್, ಬಿರಾದರ್ ಅಭಿನಯಿಸಿದ್ದಾರೆ.ಹಾಡಿನಲ್ಲಿ `ಪ್ರೇಮಿಗಳ ದಿನ~ 

`ಪ್ರೇಮಿಗಳ ದಿನ~ ಚಿತ್ರಕ್ಕಾಗಿ ಸುದರ್ಶನ್ ಅವರು ಬರೆದಿರುವ `ಬಚ್ಚಿಟ್ಟ ಮನಸಿದು ಕೂಡಿಟ್ಟ ವಯಸ್ಸಿದು ನಮಗಿಲ್ಲ ಯಾವ ಟೆನ್‌ಷನ್~ ಎಂಬ ಗೀತೆಗೆ ರಾಕೇಶ್ ಹಾಗೂ ರೂಪ ನಟರಾಜ್ ಸ್ನೇಹಿತರೊಂದಿಗೆ ಹೆಜ್ಜೆ ಹಾಕಿದರು.ಅರವಿಂದ್ ನೃತ್ಯ ನಿರ್ದೇಶನ ಮಾಡಿದ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ ಮೇಲು ಸೇತುವೆ ಮುಂತಾದ ಕಡೆ ನಡೆದಿದೆ.ನಿರ್ಮಾಣ ನಿರ್ದೇಶನದ ಹೊಣೆ ಸಂತೋಷ್‌ಕುಮಾರ್ ಅವರದ್ದು. ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಇವರೇ ಬರೆದಿದ್ದಾರೆ.ವಿದೇಶದಲ್ಲಿ  ಸಾಗರ್ 

ನಿರ್ಮಾಪಕ ರಾಮು ನಿರ್ಮಿಸುತ್ತಿರುವ  `ಸಾಗರ್~ ಚಿತ್ರಕ್ಕಾಗಿ ಇತ್ತೀಚೆಗೆ ವಿದೇಶದಲ್ಲಿ ಎರಡು ಗೀತೆಗಳನ್ನು ಚಿತ್ರಿಸಲಾಗಿದೆ. ಚಿನ್ನಿಪ್ರಕಾಶ್ ಚಿತ್ರದ ನೃತ್ಯ ನಿರ್ದೇಶಕರು.ಸಿಂಗಪೂರ್ ಹಾಗೂ ಆಸ್ಟ್ರೇಲಿಯಾಗಳನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ಸಂಜನಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಹಾಡಿನ ಹಲವಾರು ಸನ್ನಿವೇಶಗಳನ್ನು ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ನಿರ್ದೇಶಕ ಎಂ.ಡಿ.ಶ್ರೀಧರ್ ಚಿತ್ರಿಸಿ ಕೊಂಡರು.  `ಸಂಸಾರದಲ್ಲಿ ಗೋಲ್‌ಮಾಲ್~ ಚಿತ್ರೀಕರಣ ಪೂರ್ಣ

`ಸಂಸಾರದಲ್ಲಿ ಗೋಲ್‌ಮಾಲ್~ ಚಿತ್ರದಲ್ಲಿ ಐವರು ಸತಿಪತಿಗಳಾಗಿ ಊಮಾಶ್ರೀ-ರಾಜು ತಾಳಿಕೋಟೆ, ಮೋಹನ್-ಅನು ಪ್ರಭಾಕರ್, ಸಿಹಿಕಹಿ ಚಂದ್ರು -ತಾರಾ, ತಬಲಾ ನಾಣಿ - ಲಕ್ಷ್ಮಿ ಭಾಗವತರ್, ಸಾಧು ಕೋಕಿಲ - ನಯನಾ ಕೃಷ್ಣ ಅಭಿನಯಿಸುತ್ತಿದ್ದಾರೆ.

 

ಇತ್ತೀಚೆಗೆ ಚಿತ್ರದ ಚಿತ್ರೀಕರಣ ಮುಗಿದಿದೆ. ಹಾಸ್ಯಮಯ ಕತೆಯುಳ್ಳ ಈ ಚಿತ್ರವನ್ನು ಪ್ರಭಾಕರ್ ರೆಡ್ಡಿ ನಿರ್ಮಿಸಿದ್ದಾರೆ. ಸಾಯಿ ಪ್ರಕಾಶ್ ನಿರ್ದೇಶಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.