ಬುಧವಾರ, ಜನವರಿ 29, 2020
28 °C

ಸಂಕ್ಷೀಪ್ತ ರಾಷ್ಟ್ರೀಯ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ಯಾಂಕರ್ ಮುಷ್ಕರ ಅಂತ್ಯ

ಚೆನ್ನೈ:
ಸರ್ಕಾರದ ಪ್ರತಿನಿಧಿಗಳು ಮತ್ತು ಟ್ಯಾಂಕರ್ ಮಾಲೀಕರ ಸಂಘದ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಏಳು ದಿನಗಳಿಂದ ನಡೆಯುತ್ತಿದ್ದ ಅಡುಗೆ ಅನಿಲ ಸಾಗಾಟ ಟ್ಯಾಂಕರ್‌ಗಳ ಮುಷ್ಕರವನ್ನು ತಕ್ಷಣದಿಂದಲೇ ಹಿಂದಕ್ಕೆ ಪಡೆಯಲಾಗಿದೆ. ಇದರಿಂದ ಅಡುಗೆ ಅನಿಲ ತೊಂದರೆ ಅನುಭವಿಸುತ್ತಿದ್ದವರು ಸಮಾಧಾನ ಪಡುವಂತಾಗಿದೆ.ಆಂಧ್ರ: `ಪ್ರಜಾ ರಾಜ್ಯಂ~ನ ಇಬ್ಬರಿಗೆ ಸಚಿವ ಪಟ್ಟ

ಹೈದರಾಬಾದ್ (ಐಎಎನ್‌ಎಸ್):
ಆಂಧ್ರಪ್ರದೇಶ ಸಚಿವ ಸಂಪುಟವನ್ನು ವಿಸ್ತರಿಸಲಾಗಿದ್ದು ನಟ ಚಿರಂಜೀವಿ ನೇತೃತ್ವದ ಪ್ರಜಾ ರಾಜ್ಯಂ ಪಕ್ಷಕ್ಕೆ ಸೇರಿದ ಇಬ್ಬರು ಶಾಸಕರನ್ನು ಸಚಿವರಾಗಿ ನೇಮಿಸಲಾಗಿದೆ. ಪ್ರಜಾರಾಜ್ಯಂ ಕಳೆದ ವರ್ಷ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿತ್ತು.ಗುಂಡಿನ ಕಾಳಗ: ಉಗ್ರನ ಸಾವು

ಪೂಂಚ್ (ಪಿಟಿಐ):
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಉಗ್ರನೊಬ್ಬ ಮೃತಪಟ್ಟಿದ್ದಾನೆ.ಮಾವೊವಾದಿಗಳಿಂದ ಆದಿವಾಸಿ ಹತ್ಯೆ

ಮಲ್ಕನ್‌ಗಿರಿ (ಪಿಟಿಐ):
ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಮಾವೊವಾದಿಗಳು ಆದಿವಾಸಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.ಮಲ್ಕನ್‌ಗಿರಿಯಿಂದ 90 ಕಿ.ಮೀ. ದೂರದಲ್ಲಿರುವ ತಂಕಮುನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುರು ಕಿಲಾ ಎಂಬಾತದ ಕೊರಳು ಸಿಗಿದು ಕೊಂದು ಹಾಕಿರುವ ಮಾವೋವಾದಿಗಳು ಆತನ ಶವವನ್ನು ಗ್ರಾಮದ ಬಳಿ ಎಸೆದು ಹೋಗಿದ್ದಾರೆ.

ಪ್ರತಿಕ್ರಿಯಿಸಿ (+)