ಶನಿವಾರ, ಮೇ 8, 2021
19 °C

ಸಂಗಕ್ಕಾರ ಶತಕ: ಗೆದ್ದು ಬೀಗಿದ ಲಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ : ಕುಮಾರ ಸಂಗಕ್ಕಾರ ಮತ್ತು ನುವಾನ್ ಕುಲಶೇಕರ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಸಂಗಕ್ಕಾರ ಅವರ ಅಜೇಯ ಶತಕ (134) ಮತ್ತು ಕುಲಸೇಕರ ಅವರ ಅಜೇಯ ಅರ್ಧ ಶತಕ (58) ನೆರವಿನಿಂದ ಇಂಗ್ಲೆಂಡ್ ನೀಡಿದ್ದ 293 ರನ್‌ಗಳ ಗೆಲುವಿನ ಗುರಿಯನ್ನು 47.1 ಓವರ್‌ಗಳಲ್ಲಿ ಬೆನ್ನತ್ತಿದ ಲಂಕಾ ಗೆಲುವಿನ ನಗೆ ಬೀರಿತು.

ಸವಾಲಿನ ಮೊತ್ತ : ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಆತಿಥೇಯ ಇಂಗ್ಲೆಂಡ್ ಅದನ್ನು ಚೆನ್ನಾಗಿ ಬಳಸಿಕೊಂಡಿತು. 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತು.294 ರನ್‌ಗಳ ಕಠಿಣ ಗುರಿ ಬೆನ್ನಟ್ಟಿರುವ ಶ್ರೀಲಂಕಾ ತಂಡ ಮೊದಲ ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ತಿಲಕರತ್ನೆ ದಿಲ್ಶಾನ್, ಸಂಗಕ್ಕಾರ, ಜಯವರ್ಧನೆ ಹಾಗೂ ಕುಲಶೇಕರ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಲಂಕನ್ನರು ಗೆಲುವು ಸಾಧಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.