ಹಾವೇರಿ: ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲಿಸ್ಲಿದವರಿಗೆ ನೀಡಲಾಗುವು ಶಾಂತಮ್ಮ ಬಸಯ್ಯ ಸಾವಿರಮಠ ಟ್ರಸ್ಟ್ನ ಎರಡನೇ ವರ್ಷದ ಸಾವಿರಮಠ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ ವೆಂಕಟೇಶಕುಮಾರ ಅವರಿಗೆ ಪ್ರದಾನ ಮಾಡಲಾಯಿತು.

ಇಲ್ಲಿನ ಗೆಳೆಯರ ಬಳಗದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ವೆಂಕಟೇಶಕುಮಾರ ಅವರಿಗೆ ಆಕರ್ಷಕ ಪದಕ, ಹತ್ತುಸಾವಿರ ರೂಪಾಯಿ ನಗದು ಜತೆ ಪ್ರಶಸ್ತಿ ನೀಡಿ ಗೌರವಿಸಿದರು.

ಸದಾಶಿವ ಶ್ರೀಗಳು, ಸಂಗೀತದ ಮೂಲಕ ದೇವರನ್ನು ಕಂಡುಕೊಂಡ ಪುಟ್ಟರಾಜ ಕವಿ ಗವಾಯಿಗಳವರ ನೆರಳಿನಲ್ಲಿ ಬೆಳೆದ ವೆಂಕಟೇಶಕುಮಾರ ಅವರು ರಾಷ್ಟ್ರಮಟ್ಟದಲ್ಲಿ ಬೆಳಗುವ ಮೂಲಲ ರಾಜಗುರು-ಮಲ್ಲಿಕಾರ್ಜುನ ಮನ್ಸೂರರಂತಹ ದಿಗ್ಗಜರ ಸಮರ್ಥ ಪ್ರತಿನಿಧಿಯಾಗಿದ್ದಾರೆ ಎಂದು ಬಣ್ಣಿಸಿದರು.

ಶರಣರು ತಮ್ಮ ವಚನಗಳ ಮೂಲಕ ಕಂಡುಕೊಂಡ ಜೀವನ ದರ್ಶನಗಳನ್ನು ವೆಂಕಟೇಶಕುಮಾರ ತಮ್ಮ ಗಾಯನದಲ್ಲಿ ಅವುಗಳಿಗೆ ಮರುಜೀವ ಕೊಡುತ್ತಿದ್ದಾರೆ. ಅವರಿಗೆ ಪ್ರಸಕ್ತ ಸಾಲಿನ ಸಾವಿರಮಠ ಪ್ರಶಸ್ತಿ ದೊರೆತಿರುವುದು ಸಂತಸದ ಸಂಗತಿ ಎಂದರು.

ಪ್ರಶಸ್ತಿ ಸ್ವೀಕರಿಸಿದ ವೆಂಕಟೇಶಕುಮಾರ, ಒಂದು ಕಾಲಕ್ಕೆ ಪುಟ್ಟರಾಜ ಕವಿ ಗವಾಯಿಗಳವರು ಊಟ ನೀಡಿ, ಸಂಗೀತ ದೀಕ್ಷೆ ಕೊಡದಿದ್ದರೆ ಈ ಕ್ಷೇತ್ರದಲ್ಲಿ ಯಾವುದೇ ಸಾಧನೆ ಮಾಡಲಾಗುತ್ತಿರಲಿಲ್ಲ. ಈಗ ದೊರೆತ ಎಲ್ಲ ಗೌರವಾಧರಗಳು ಆ ನನ್ನ ಆರಾಧ್ಯ ದೈವ ಪುಟ್ಟರಾಜರ ಆಶೀರ್ವಾದಗಳಾಗಿವೆ ಎಂದು ಭಾವುಕರಾಗಿ ನುಡಿದರು.

ಈ ಸಂದರ್ಭದಲ್ಲಿ ವಾಣಿಜ್ಯ ಸಹಾಯಕ ಆಯುಕ್ತರಾಗಿ ಇಲಾಖಾ ಆಧುನಿಕರಣಕ್ಕೆ ರಾಜ್ಯ ಸರ್ಕಾರ ನೀಡಿದ ಪ್ರಶಸ್ತಿ ಪುರಸ್ಕೃತೆ ಹಾವೇರಿಯ ಯಾಸ್ಮಿನ್ಬೇಗಂ ಜಿ. ವಾಲಿಕಾರ ಮತ್ತು ಇನ್ನೊಬ್ಬ ಹಿರಿಯ ಸಂಗೀತಕಾರ ಸೋಮಶೇಖರ ಮರಡಿಮಠ ಅವರನ್ನು ಟ್ರಸ್ಟ್ನ ಅಧ್ಯಕ್ಷ ಜಯದೇವಯ್ಯ ಸಾವಿರಮಠ ಸನ್ಮಾನಿಸಿದರು.

ಸಮಾರಂಭದಲ್ಲಿ ಡಾ. ವೀರಮ್ಮ ಸಾವಿರಮಠ, ನೀಲಕಂಠಪ್ಪ ಬಡಿಗೇರ, ಗುರುರಾಜ ಶಿರಹಟ್ಟಿ, ವಾಣಿ ಕಣೇಕಲ್, ಪತ್ರಿ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಪತ್ರಿ, ಮಲ್ಲಿಕಾರ್ಜುನ ಸಾವಿರಮಠ, ಸಿ.ಕೆ. ಬೆಳ್ಳೇರಿ, ಶಿವಬಸವ ಸಾವಿರಮಠ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಅಶೋಕ ನವಲೆ, ಶಾರದಾ ಸಾವಿರಮಠ, ಹನುಮಂತಗೌಡ ಗೊಲ್ಲರ, ಶೋಭಾ ಚಾಗಟಗೇರಿ, ಸಿದ್ದುಮತಿ ನೆಲವಗಿ, ಎಸ್.ಆರ್. ಹಿರೇಮಠ, ಕರಿಯಪ್ಪ ಹಂಚಿನಮನಿ ಮುಂತಾದವರು ಆಗಮಿಸಿದ್ದರು.

ಶ್ರೀದೇವಿ ಮಹಾಂತ ಪ್ರಾರ್ಥನೆ ಹಾಡಿದರು. ಟ್ರಸ್ಟ್ನ ಅಧ್ಯಕ್ಷ ಜಯದೇವಯ್ಯ ಸಾವಿರಮಠ ಸ್ವಾಗತಿಸಿದರು. ಸಾಹಿತಿ ಸತೀಶ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಬಿ. ಬಸವರಾಜರವರು ವಂದಿಸಿದರು.

ನಂತರ ಸಂಗೀತ ರಾತ್ರಿ ಕಾರ್ಯಕ್ರಮದಲ್ಲಿ ಪಂಡಿತ ವೆಂಕಟೇಶಕುಮಾರ ಗೌಡಮಲ್ಲಹಾರ ರಾಗ, ವಚನ ದಾಸರ ಪದಗಳನ್ನು ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.