ಶುಕ್ರವಾರ, ಜನವರಿ 22, 2021
28 °C

ಸಂಗೀತ:ಆಸಕ್ತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ:`ಕಲೆ ಕರಗತಗೊಳ್ಳಲು ಕುಟುಂಬದ ಹಿಂದಿನ ಪರಂಪರೆ ಅಗತ್ಯ~ ಎಂದು ಸಂಶೋಧಕ ಡಾ.ಎ.ವಿ. ಪ್ರಸನ್ನ ಅವರು ಇಲ್ಲಿನ ಕರ್ನಾಟಕ ಸಂಘದ ಸಭಾ ಭವನದಲ್ಲಿ ವಿದುಷಿ ಶ್ಯಾಮಲಾ ಪ್ರಕಾಶ್ ಅವರ ಚೊಚ್ಚಲ ಕೃತಿ `ನಾದೋಪಾಸನ~ ಅಂಕಣ ಬರಹ ಲೋಕಾರ್ಪಣೆ ಮಾಡಿ ಹೇಳಿದರು.  ಶ್ಯಾಮಲಾ ಅವರು ಸಂಗೀತಕಾರರ ಜೀವನದ ಬಗ್ಗೆ ಅರಿತು ಬರೆದ ಅಂಕಣ ಬರಹಗಳನ್ನು ಒಳಗೊಂಡ ಕೃತಿಯನ್ನು ಮತ್ತು ಅವರ ಸಾಧನೆಯನ್ನು ಶ್ಲಾಘಿಸಿದರು.`ದೊಡ್ಡ ಸಂಸ್ಕೃತಿ ಸಣ್ಣ ಸಂಸ್ಕೃತಿಯನ್ನು ನುಂಗಿ ಹಾಕುತ್ತದೆಯೋ ಎಂಬಂತೆ ಹಿಂದೂಸ್ತಾನಿ ಪರಂಪರೆಯಲ್ಲಿ ಕರ್ನಾಟಕ ಸಂಗೀತ ಮರೆಯಾಗುತ್ತಿದೆ ಎನ್ನುವ ಆತಂಕ ಕಾಡುತ್ತಿದೆ ~ ಎಂದು ಹೇಳಿದರು.

 

ಸಂಗೀತವನ್ನು ಮೈಗೂಡಿಸಲು ಅಪಾರವಾದ ಆಸಕ್ತಿ ಬೇಕು. ಮುಖ್ಯವಾಗಿ ಇನ್ನೊಬ್ಬರ ಸಂಗೀತವನ್ನು ಕೇಳುವ ಆಸಕ್ತಿ ಇರಬೇಕು. ಇದರಿಂದ ಸಂಗೀತ ಕೇಳುವ ಜತೆಗೆ ತಾವು ಮಾಡಿದ ತಪ್ಪು ತಿದ್ದಲು ಸಾಧ್ಯ ಎಂದು ಮೈಸೂರು ಅಸೋಸಿಯೇಶನ್ ಕೆ.ಮಂಜುನಾಥಯ್ಯ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.