`ಎಕ್ಸ್ಪಿರೀಯೆನ್ಸ್ ವಿತ್ ಸಂಗೀತಾ~ ಎಂಬ ಕ್ಯಾಚಿ ಟ್ಯಾಗ್ಲೈನ್ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸಂಗೀತಾ ಮೊಬೈಲ್ ತನ್ನ ಗ್ರಾಹಕರಿಗೆ ವಿಶಿಷ್ಟ ಸೇವೆಯನ್ನು ಒದಗಿಸುವ ಮೂಲಕ ಇತರ ಮೊಬೈಲ್ ಕಂಪೆನಿಗಳಿಗಿಂತ ಭಿನ್ನವೆನಿಸಿಕೊಂಡಿದೆ. ಹೊಸ ತಂತ್ರಜ್ಞಾನದ ಅಳವಡಿಕೆ ಹಾಗೂ ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡುವ ನಿಟ್ಟಿನಲ್ಲಿ ಸಾಗುತ್ತಿದೆ.

ಸಂಗೀತಾ ಮೊಬೈಲ್ ತನ್ನ ಗ್ರಾಹಕರಿಗಾಗಿ ವಿನೂತನ ಸೇವೆಗಳನ್ನು ಜಾರಿಗೆ ತಂದಿದೆ. ಸಂಗೀತಾ ಮೊಬೈಲ್ಸ್ಟಡಿ, ಸಂಗೀತಾ ಕ್ಯಾಟಲಾಗ್ ಹಾಗೂ ಸಂಗೀತಾ ಡಿಲೈಟ್ ಸೇವೆಗಳ ಮೂಲಕ ಗ್ರಾಹಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಸಂಗೀತಾ ಮೊಬೈಲ್ಸ್ಟಡಿ: ಸ್ಪೆಕ್ಯಾಡಲ್ ಟೆಕ್ನಾಲಜಿ ಜತೆಗೂಡಿ ಸಿದ್ಧಪಡಿಸಿರುವ ಆ್ಯಂಡ್ರಾಯ್ಡ ತಂತ್ರಜ್ಞಾನ ತನ್ನ ಬಳಕೆದಾರರ `ಮೊಬೈಲ್ ಸ್ಟಡಿ~ಗೆ ನೆರವಾಗಲಿದೆ.

ಬಳಕೆದಾರರು `ಮೊಬೈಲ್ಸ್ಟಡಿ~ಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ, ಕ್ವಿಜ್, ಸಾಮರ್ಥ್ಯ ಪರೀಕ್ಷೆಗಳ ಪ್ರಶ್ನೆಗಳನ್ನು ಸರಾಗವಾಗಿ ಬಿಡಿಸಬಹುದು. ಈ ತಂತ್ರಜ್ಞಾನ ಗ್ರಾಹಕರಿಗೆ ವಿಭಿನ್ನ ಅನುಭವ ನೀಡುತ್ತಿದೆ. ಐಐಟಿ-ಜೆಇಇ, ಎಐಇಇಇ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳು ನಡೆಸುವ ಸಿಇಟಿ ಪರೀಕ್ಷೆಗೆ ಸಮರ್ಥವಾಗಿ ಸಿದ್ಧಗೊಳ್ಳಲು ಇದು ನೆರವಾಗಲಿದೆ. ಮೊದಲ ಹಂತದಲ್ಲಿ `ಮೊಬೈಲ್ಸ್ಟಡಿ~ ತಂತ್ರಜ್ಞಾನವನ್ನು ಸಂಗೀತಾ ತನ್ನ ಔಟ್ಲೆಟ್ಗಳಲ್ಲಿ ಬಳಕೆದಾರರಿಗೆ ಒದಗಿಸುತ್ತಿದೆ.

ಮೊಬೈಲ್ ಕ್ಯಾಟಲಾಗ್: ಸಂಗೀತಾ ಮೊಬೈಲ್ ಸ್ಟೋರ್ ತನ್ನ ಗ್ರಾಹಕರಿಗೆ `ಮೊಬೈಲ್ ಕ್ಯಾಟಲಾಗ್~ ಎಂಬ ಮತ್ತೊಂದು ವಿನೂತನ ಸೇವೆ ಪರಿಚಯಿಸಿದೆ. ಈ ಕ್ಯಾಟ್ಲಾಗ್ನಲ್ಲಿ ಸಂಗೀತಾದ ವಿನೂತನ ಫೋನ್ಗಳ ಮಾಹಿತಿ, ಅವುಗಳ ಗುಣಲಕ್ಷಣ ಹಾಗೂ ಬೆಲೆ, ವಿತರಣೆ ಹಾಗೂ ಮೊಬೈಲ್ ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ನಿರಂತರ ಮಾಹಿತಿ ಹೀಗೆ ವೈವಿಧ್ಯಮಯ ಮಾಹಿತಿಯಿದೆ.

ಬಳಕೆದಾರರು ಈ ತಂತ್ರಜ್ಞಾನವನ್ನು ತಮ್ಮ ಮೊಬೈಲ್ನಲ್ಲಿರುವ ಆ್ಯಂಡ್ರಾಯ್ಡ ಡಿವೈಸ್ನಲ್ಲಿ ಅಳವಡಿಸಿಕೊಂಡು ತಾವು ಪ್ರಯಾಣ ಮಾಡುವ ವೇಳೆ ಅಥವಾ ಚಹಾ ಹೀರುವ ಸಮಯದಲ್ಲಿ ಪಡೆದುಕೊಳ್ಳಬಹುದು.

ಸಂಗೀತಾ ಡಿಲೈಟ್: ಮನೆ ಬಾಗಿಲಿನಲ್ಲೇ ತನ್ನ ಸೇವೆ ಒದಗಿಸುವ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಿದೆ. ಮೊಬೈಲ್ನಲ್ಲಿ ಯಾವುದೇ ರೀತಿ ತೊಂದರೆ ಎದುರಾದರೆ ಸರಿಪಡಿಸುವ ಆನ್ಸೈಟ್ ಸೇವೆ ಒದಗಿಸಿದೆ. ಇದರಲ್ಲಿ ಬಳಕೆದಾರರ ಮನೆ ಬಾಗಿಲಿಗೆ ಕಂಪೆನಿ ಸಿಬ್ಬಂದಿ ಬಂದು ಫೋನ್ ಸರಿಪಡಿಸಿಕೊಟ್ಟು ಹೋಗುತ್ತಾರೆ.

ಬಳಕೆದಾರರನ್ನು ಖುಷಿಪಡಿಸುವುದೇ ಸಂಗೀತಾ ಡಿಲೈಟ್ನ ಮುಖ್ಯ ಉದ್ದೇಶ.
ಇದಲ್ಲದೆ ಜಿಪ್ಡಯಲ್ ಜತೆಗೂಡಿ 24/7 ಗ್ರಾಹಕ ಸೇವಾ ಕರೆ ಕೇಂದ್ರ ತೆರೆದಿದೆ. ಬಳಕೆದಾರರು ಜಿಪ್ಡಯಲ್ಗೆ ಒಂದು ಮಿಸ್ ಕಾಲ್ ನೀಡಿದರೆ ಸಾಕು. ನಿಮಗೆ ಈ ಕೇಂದ್ರದಿಂದ ವಾಪಸ್ ಕರೆ ಬರುತ್ತದೆ. ಆಗ ನಿಮಗೆ ಬೇಕಿರುವ ಮಾಹಿತಿಯನ್ನು ಶೀಘ್ರವಾಗಿ ಪಡೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.