ಶನಿವಾರ, ಮೇ 15, 2021
22 °C

ಸಂಜಯ್‌ದತ್ ಪರ ಸಹಿ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಜೈಲುವಾಸ ಅನುಭವಿಸುತ್ತಿರುವ ಸಂಜಯ್‌ದತ್ ಪರವಾಗಿ ಧ್ವನಿಯೆತ್ತಿರುವ `ಪೊಲೀಸ್‌ಗಿರಿ' ಚಿತ್ರ ತಂಡ ಇದೀಗ ಸಂಜಯ್ ಪರವಾಗಿ ಸಹಿ ಸಂಗ್ರಹ ಅಭಿಯಾನ ಕೈಗೊಳ್ಳಲು ಮುಂದಾಗಿದೆ.ಸಂಜಯ್ ಅಭಿನಯದ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ನಿರ್ಮಾಪಕ ರಾಹುಲ್ ಅಗರ್‌ವಾಲ್, ಚಿತ್ರದ ಪ್ರಚಾರ ಪ್ರವಾಸದ ವೇಳೆ ದೇಶದೆಲ್ಲೆಡೆ ನಾವು ಒಂದು ವಿನೈಲ್ ಬೋರ್ಡ್ ಬಿಡುಗಡೆ ಮಾಡಲಿದ್ದು ಅದರಲ್ಲಿ ಸಹಿ ಮಾಡಿ ಸಂದೇಶ ಬರೆಯಲು ಸಂಜಯ್ ಪರ ದನಿಯೆತ್ತಲು ಅವರ ಅಭಿಮಾನಿಗಳಿಗೆ ಅವಕಾಶ ನೀಡುವುದಾಗಿ ಪ್ರಕಟಿಸಿ, ಜೈಲಿನಲ್ಲಿರುವ ಸಂಜಯ್‌ದತ್ ಅವರಿಗೆ ಆ ಬೋರ್ಡ್ ತಲುಪಿಸುವ ಭರವಸೆಯನ್ನೂ ಕೊಟ್ಟರು.`ಪೊಲೀಸ್‌ಗಿರಿ'ಯಲ್ಲಿ ಸಂಜಯ್ ಜತೆ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಪ್ರಾಚಿ ಪ್ರಕಾರ, ಸಂಜಯ್ ಅನುಪಸ್ಥಿತಿಯಲ್ಲಿ ಇಡೀ ತಂಡ ಏಕಭಾವದಿಂದ ಚಿತ್ರದ ಪ್ರಚಾರಕ್ಕಾಗಿ ದುಡಿಯುವುದು ಅತ್ಯಗತ್ಯ. ಚಿತ್ರ ಬಿಡುಗಡೆ ವೇಳೆ ಅವರು ಇಲ್ಲದೇ ಇರುವ ಕಾರಣ ಜನರಿಗೆ ಅವರ ಗೈರು ಹಾಜರಿ ದುಃಖವನ್ನುಂಟು ಮಾಡುವುದು ಸಹಜ. ಆದರೆ ಇಂತಹುದೊಂದು ಪ್ರಯತ್ನ ಜನರಿಗೆ ಸಮಾಧಾನ ತರಬಹುದಂತೆ.`ಸಂಜಯ್, ಇಡೀ ಚಿತ್ರೀಕರಣದ ಕೊನೆಯ ದಿನದವರೆಗೂ ಅಂದರೆ ಜೈಲಿಗೆ ತೆರಳುವ ಹಿಂದಿನ ದಿನದವರೆಗೂ ಅಸಾಮಾನ್ಯವಾದ ತಾಳ್ಮೆ ಮತ್ತು ಕರ್ತವ್ಯನಿಷ್ಠೆಯಿಂದ ಶ್ರಮಿಸಿದರು. ಇಡೀ ಚಿತ್ರತಂಡಕ್ಕೆ ಇದೊಂದು ಅತ್ಯುತ್ತಮ ಪಾಠ. ಅವರ ಮನೋಬಲ ಅಪ್ರತಿಮವಾದುದು' ಎಂದು ಪ್ರಾಚಿ ಮುಕ್ತವಾಗಿ ಶ್ಲಾಘಿಸಿದರು.ಕೆ.ಎಸ್. ರವಿಕುಮಾರ್ ನಿರ್ದೇಶನದ `ಪೊಲೀಸ್‌ಗಿರಿ' ಜುಲೈ ಐದರಂದು ಬಿಡುಗಡೆಯಾಗಲಿದ್ದು, ಪ್ರಕಾಶ್‌ರಾಜ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.