ಗುರುವಾರ , ಜನವರಿ 23, 2020
28 °C

ಸಂತಾನ ಭಾಗ್ಯ ನೆಪದಲ್ಲಿ ಮೋಸ: ಪೂಜಾರಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಹಿಳೆಯರಿಗೆ ಸಂತಾನ ಭಾಗ್ಯಕ್ಕಾಗಿ ಮಕ್ಕಳಾಗುವ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯರನ್ನು ಲೈಂಗಿಕವಾಗಿ ಬಳಸುತ್ತಿದ್ದ ದೇವದುರ್ಗದ ಬೆಟ್ಟದ ಹತ್ತಿರದ ಶಂಭುಲಿಂಗ ದೇವಸ್ಥಾನದ ಪೂಜಾರಿ ವೀರೇಶ ಸೂಗರಯ್ಯ­ಸ್ವಾಮಿ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ­ಧಿಕಾರಿ ಎಂ.ಎನ್‌ ನಾಗರಾಜ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿ, ಆರೋಪಿ­ಯನ್ನು ಆಂಧ್ರಪ್ರದೇಶದ ಮಕ್ತಲ್‌ ತಾಲ್ಲೂ­ಕಿನ ಚಿಂತಲಕುಂಟಾ ಗ್ರಾಮ­ದಲ್ಲಿ ಭಾನುವಾರ ಬಂಧಿಸಲಾ­ಗಿದೆ. ಆರೋಪಿ  ಬಂಧನಕ್ಕೆ ದೇವ­ದುರ್ಗ ಸಿಪಿಐ ರಮೇಶ ಸಿ.ಮೇಟಿ, ಪಿಎಸ್‌ಐ ಬಸವರಾಜ ಪುಲ್ಹಾರಿ, ರವಿ, ಪುರುಷೋತ್ತಮ ಹಾಗೂ ಸಂಚಾರಿ ಪೊಲೀಸ್‌ ಠಾಣೆಯ ಸಿಬ್ಬಂದಿ ರಾಮಣ್ಣ, ದೇವಪ್ಪ, ವಿಶ್ವನಾಥರೆಡ್ಡಿ, ಹನುಮಂತರಾಯ, ಮರಿಸ್ವಾಮಿ ಅವರನ್ನೊಳಗೊಂಡ ತಂಡ  ರಚನೆ ಮಾಡಲಾಗಿತ್ತು ಎಂದು ತಿಳಿಸಿದರು.ಈ ತಂಡದ ಸದಸ್ಯರು ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿ ಬಸವ ಅಲಿಯಾಸ್‌ ಬಸವರಾಜ ಸಿಂಧ­ನೂರು ಮತ್ತು ನಾಗರಾಜ ಕುಂಬಾರ ತಲೆ ಮರೆಸಿಕೊಂಡಿದ್ದುಬಂಧಿಸಲಾ­ಗುವುದು ಎಂದು ಹೇಳಿದರು.ಮಟ್ಕಾ ಜೂಜಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಿರವಾರ ಪಟ್ಟಣದ ನಕಲಿ ಇ– ಸ್ಟಾಂಪಿಂಗ್‌ ಸಂಬಂಧಿಸಿದಂತೆ ಆರೋಪಿ ಬಂಧಿಸಲು ಕ್ರಮ ತೆಗೆದುಕೊಳ್ಳ­ಲಾಗಿದೆ ಎಂದು ತಿಳಿಸಿದರು.ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿ­ಕಾರಿ ಅಶೋಕ ಸದಲಗಿ,  ಸಿಪಿಐ ರಮೇಶ, ಮೇಟಿ,  ಸಿಪಿಐ ಚಂದ್ರಶೇ­ಖರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)