ಸೋಮವಾರ, ಜೂನ್ 21, 2021
30 °C
ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಸಲಹೆ

ಸಂಪಾದಿಸಿದ ಒಂದಷ್ಟು ಭಾಗ ಸಮಾಜಕ್ಕೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕನಹಟ್ಟಿ: ಮನುಷ್ಯ ಗಳಿಸಿದ ಹಣದಲ್ಲಿ ದಾನ ಧರ್ಮ ಮಾಡುವುದರಿಂದ ಸಮಾಜದ ಅಭಿವೃದ್ಧಿಯಾಗುತ್ತದೆ  ಎಂದು ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.ಇಲ್ಲಿನ ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ನಾನು 40 ವರ್ಷಗಳಿಂದ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ಇಲ್ಲಿನ ದೇವಸ್ಥಾನದ ಅಭಿವೃದ್ಧಿಗೆ ಹಲವು ಬಾರಿ ಸಹಾಯ ನೀಡಿದ್ದೇನೆ ಎಂದು ಕ್ಷೇತ್ರದೊಂದಿಗಿನ ಬಾಂಧವ್ಯವನ್ನು ತಿಳಿಸಿದರು.ಶಾಸಕ ಎಚ್.ಪಿ.ರಾಜೇಶ್‌ ಮಾತನಾಡಿ,  ಸರ್ಕಾರ ಹಾಗೂ ಭಕ್ತರ ಹಣದಿಂದ ನಿರ್ಮಿಸಿರುವ ಸಮುದಾಯ ಭವನ ಸಾರ್ವಜನಿಕ ಉಪಯೋಗಕ್ಕೆ ಮುಕ್ತವಾಗಲಿ. ಜನ ಪ್ರತಿನಿಧಿಗಳು ಜನರ ವಿಶ್ವಾಸವನ್ನು ಗಣನೆಗೆ ತೆಗೆದುಕೊಂಡರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಶಾಸಕ ನೇರ್‍ಲಗುಂಟೆ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಯಕನಹಟ್ಟಿ ಹೋಬಳಿ ಅಭಿವೃದ್ಧಿಯಿಂದ ದೂರವಿದೆ. ಭದ್ರಾ ಯೋಜನೆಯಿಂದ ವಂಚಿತವಾಗಿದ್ದು,  ಹೋಬಳಿ ಸಮಸ್ಯೆಯನ್ನು ನೀರಾವರಿ ಸಚಿವರ ಗಮನಕ್ಕೆ  ತಂದಿದ್ದೇನೆ. ನಾಯಕನಹಟ್ಟಿಯ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ದೊಡ್ಡಕೆರೆಯಿಂದ ಇಲ್ಲಿಗೆ ನೀರು ತರುವ ಕಾಮಗಾರಿಗೆ ಚಾಲನೆ ನೀಡಿಲಾಗಿದೆ. ಶೀಘ್ರದಲ್ಲೇ ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು.ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂವೈಟಿ ಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ದೇವಸ್ಥಾನ ಎರಡು ವರ್ಷಗಳಿಂದ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಮುಂದಿನ ವರ್ಷದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಭಕ್ತರ ಸಹಕಾರದೊಂದಿಗೆ ಮಾಡಲಾಗುವುದು ಎಂದು ತಿಳಿಸಿದರು.ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಸ್ವಾಮಿ ಆಶೀರ್ವಚನ ನೀಡಿ ಮಾತನಾಡಿ, ಮನುಷ್ಯನ ಆಪತ್ಕಾಲದಲ್ಲಿ ಸಹಾಯಕ್ಕೆ ಬರುವುದು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ ಎಂದು ನಿಜಗುಣ ಶಿವಯೋಗಿಗಳ ವಚನವನ್ನು ಅರ್ಥೈಸಿದರು.ಸಮಾರಂಭದಲ್ಲಿ ಮಸ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಶಾಸಕರಾದ ಟಿ.ರಘುಮೂರ್ತಿ,ರಾಜೇಶ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಯಮ್ಮ ಬಾಲರಾಜ್, ಬಾಬುರೆಡ್ಡಿ, ಲಕ್ಷ್ಮಿದೇವಿ ದೊಡ್ಡಯ್ಯ, ಎಪಿಎಂಸಿ ಅಧ್ಯಕ್ಷ ರಾಂಬಾಬು, ಉಪ ವಿಭಾಗಾಧಿಕಾರಿ ತಿಪ್ಪೇಸ್ವಾಮಿ, ತಹಶೀಲ್ದಾರ್ ವಿಜಯರಾಜು,  ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ಬೋರಮ್ಮ ಬಂಗಾರಪ್ಪ, ಬಸವರಾಜ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತಿಪ್ಪಮ್ಮ, ವಾಣಿಜ್ಯೋದ್ಯಮಿಗಳಾದ ರಾಜಶೇಖರಪ್ಪ, ರುದ್ರಮುನಿ, ಟಿ.ಎ.ಟಿ.ಪ್ರಭು, ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಹಾಲಪ್ಪ, ದೇವಸ್ಥಾನ ವ್ಯವಸ್ಥಾನ ಸಮಿತಿಯ ಸದಸ್ಯರುಗಳು ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಹಾಜರಿದ್ದರು. ಇದೇ ಸಂದರ್ಭದಲ್ಲಿ ₨ 2.7ಕೋಟಿ ವೆಚ್ಚದ ಸಮುದಾಯ ಭವನ, ಶಾಮನೂರು ಶಿವಶಂಕರಪ್ಪನವರು ನಿರ್ಮಿಸಿದ ₨ 13

ಲಕ್ಷದ ಹೊರಮಠದ ಮಹಾದ್ವಾರ, ಪಾದಗಟ್ಟೆ ಬಳಿ ಬೆಂಗಳೂರಿನ ಆರ್.ಕೆ.ಇನ್ಪ್ರೋ ನಿರ್ಮಿಸಿದ ₨ 7 ಲಕ್ಷದ ಗೋಪಾಲಸ್ವಾಮಿ ದೇವಸ್ಥಾನ, ಶುದ್ಧಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಲಾಯಿತು. ಕಾಮಗಾರಿಗಳಿಗೆ ದಾನ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.