ಶುಕ್ರವಾರ, ಮೇ 20, 2022
26 °C

ಸಂಭ್ರಮದ ಉರುಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾವಗಲ್: ಧರ್ಮ ಸಹಿಷ್ಣುತೆಗೆ ಹೆಸರಾಗಿದ್ದ ಹಾಜಿ ಹಜರತ್ ಖಲಂದರ್ ಷಾಪೀರ್‌ವಲಿಯುಲ್ಲಾ ಖಾದ್ರಿ ಪೀರ್ ವಲಿಯುಲ್ಲಾ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಸಂದಲ್ ಮೆರವಣಿಗೆಯಲ್ಲಿ ಗುರುವಾರ ಸಹಸ್ರಾರು ಜನರು ಶ್ರೀಗಂಧದ ಅಭಿಷೇಕದ ಮೂಲಕ ಉರುಸ್ ಆಚರಿಸಿದರು.ಶ್ರೀಗಂಧವನ್ನು ತಲೆಯ ಮೇಲೆ ಹೊತ್ತುಕೊಂಡು ದರ್ಗಾದ ಒಳಗಡೆ ಸಂಭ್ರಮದ ಮೆರವಣಿಗೆ ಮೂಲಕ ದೂರದ ಊರುಗಳಿಂದ ಆಗಮಿಸಿದ ಭಕ್ತರು ಗಂಧಾಭಿಷೇಕವನ್ನು ಅರ್ಪಿಸಿದರು. ಇದಕ್ಕೂ ಮುನ್ನ ಕಂಪ್ಲಿಯಿಂದ ಆಗಮಿಸಿದ ತಾಷಾಡ್ರಮ್ಸ್ ಮೆರವಣಿಗೆ ವಿಶೇಷವಾಗಿದ್ದರೆ, ಪೋಕ್ರಾಗಳ ಜರಬ್ ಕಾರ್ಯಕ್ರಮ ವಿಶೇಷವಾಗಿತ್ತು. ಪ್ರವಾದಿ ಪೈಗಂಬರ್ ಅವರ ನಾತ್ ಮತ್ತು ಸಲಾಮ್ ಕಾರ್ಯಕ್ರಮ ನಡೆಯಿತು.ದರ್ಗಾದ ಮುಂಭಾಗದಲ್ಲಿ ಜನತೆಗೆ ಅನುಕೂಲವಾಗಲೆಂದು ತಾತ್ಕಾಲಿಕ ಆಸ್ಪತ್ರೆಯನ್ನು ಗ್ರಾ.ಪಂ. ಅಧ್ಯಕ್ಷ ಧನಂಜಯ, ತಾ.ಪಂ. ಸದಸ್ಯೆ ಲಕ್ಷ್ಮೆರವಿಶಂಕರ್ ಉದ್ಘಾಟಿಸಿದರು. ಟ್ರಸ್ಟ್ ಕಾರ್ಯದರ್ಶಿ ಅಬ್ಬಾಸ್ ಹಾಜಿ, ಇಸಾಕ್ ಹಾಜಿ, ಸಯ್ಯಾದ್ ಯುಸುಫ್, ಬ್ರಾದರ್‌ಸಾಬ್, ಹಿಲಾಯಿ ಸಾಬ್, ಸರ್ದಾರ್ ಪಾಷ, ಷಕೀಲ್, ಡಾ.ಪ್ರೇಮಾನಂದ್, ಡಾ.ಜ್ಞಾನೇಶ್, ಪರಿಸರ ನೈರ್ಮಲ್ಯದ ಆರೋಗ್ಯ ನಿರೀಕ್ಷಕ ದಕ್ಷಿಣಾಮೂರ್ತಿ ಉಪಸ್ಥಿತರಿದ್ದರು.ದರ್ಗಾ ಸಮಿತಿಯವರು ಹಾಗೂ ಕೆಲವು ಭಕ್ತರು ಊಟದ ವ್ಯವಸ್ಥೆ ಮಾಡಿದ್ದರು. ಗ್ರಾ.ಪಂ.ಯಿಂದ ಕುಡಿಯುವ ನೀರಿನ ವ್ಯವಸ್ಥೆಮಾಡಲಾಗಿತ್ತು. ಸಾರಿಗೆ ಇಲಾಖೆಯಿಂದ ಸಾಕಷ್ಟು ಬಸ್ಸ್ ವ್ಯವಸ್ಥೆ ಮಾಡಿದ್ದಾರೆ. ಡಿವೈಎಸ್‌ಪಿ ರಶ್ಮಿ ನೇತೃತ್ವದಲ್ಲಿ ಪೊಲೀಸ್ ಬಂದೂಬಸ್ತ್ ವ್ಯವಸ್ಥೆಗೊಳಿಸಲಾಗಿತ್ತು.18ರ ಬೆಳಿಗ್ಗೆ ಅರಬ್ಬಿ ಕಾಲೇಜಿನ ಮಕ್ಕಳಿಂದ ಭಾಷಣ ಮತ್ತು ದೇವರಗೀತೆ ನಡೆ ಯಲಿದ್ದು ರಾತ್ರಿ ಕವ್ವಾಲಿ ಏರ್ಪಡಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.