ಭಾನುವಾರ, ಏಪ್ರಿಲ್ 18, 2021
27 °C

ಸಂಭ್ರಮದ ನೋಪಿ ಗೌರಿಹಬ್ಬ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭರಮಸಾಗರ: ಗ್ರಾಮದಲ್ಲಿ ಶುಕ್ರವಾರ ಸಂಭ್ರಮದಿಂದ ನೋಪಿಗೌರಿ (ಕೇದಾರಗೌರಿ) ಹಬ್ಬ ಆಚರಿಸಲಾಯಿತು.ನಾಲ್ಕು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ವಿವಿಧ ಧಾರ್ಮಿಕ ವಿಧಿಗಳನ್ನು ಆಚರಿಸಲಾಯಿತು. ಹಬ್ಬಕ್ಕೂ ಮುನ್ನಾ ಮನೆಗಳನ್ನು ಸಂಪ್ರದಾಯದಂತೆ ಸುಣ್ಣ ಬಳಿದು ಶುಚಿಗೊಳಿಸ ಲಾಗುತ್ತದೆ.ಮಂಗಳವಾರದಿಂದ ಆರಂಭಗೊಂಡ ಹಬ್ಬದಲ್ಲಿ ಮೊದಲನೆ ದಿನ ಗಂಗಾಪೂಜೆ ನೆರವೇರಿಸಿ ಮರಳಿನ ಗೌರಿ ಮೂರ್ತಿ ತಂದು ಮನೆಗಳಲ್ಲಿ ಪ್ರತಿಷ್ಠಾಪಿಸಿ, ಹಿರಿಯರ ಪೂಜೆ ಮಾಡಿದ ನಂತರ ಬಾಗಿನ ಎತ್ತುವ ಕಾರ್ಯ ನೆರವೇರಿತು. ಎರಡನೇ ದಿನ ಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಮೂರನೆ ದಿನ ಕುಟುಂಬದ ಸದಸ್ಯರು ನೋಪಿದಾರ ಧರಿಸಿ ಪೂಜೆ ಮಾಡುತ್ತಾರೆ. ಸಂಪ್ರದಾಯದಂತೆ ಶುಕ್ರವಾರ ಗೌರಿ ವೃತ ಆಚರಣೆಯಲ್ಲಿ ತೊಡಗಿಕೊಂಡ ಮಹಿಳೆಯರು ಮೆರವಣಿಗೆ ಮೂಲಕ ಇಲ್ಲಿನ ದೊಡ್ಡಕೆರೆಗೆ ತೆರಳಿ ಪೂಜೆ ನೆರವೇರಿಸಿ ಗೌರಿಯನ್ನು ಗಂಗೆಗೆ ವಿಸರ್ಜಿಸಿದರು. ಸಮಾಳ, ಡೊಳ್ಳು ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.