ಚನ್ನರಾಯಪಟ್ಟಣ: ಗ್ರಾಮ ದೇವತೆ ಶೆಟ್ಟಹಳ್ಳಮ್ಮ ದೇವಿಯ ರಥೋತ್ಸ ವವು ಶೆಟ್ಟಿಹಳ್ಳಿ ಗ್ರಾಮದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು.

ಶೆಟ್ಟಹಳ್ಳಮ್ಮ ದೇವಿಯ ಜಾತ್ರಾ ಮಹೋತ್ಸವ ಶುಕ್ರವಾರದಿಂದ ಭಾನುವಾರದವರೆಗೆ ಜರುಗುತ್ತದೆ. ಶುಕ್ರವಾರ ದಿಂಡಗೂರು ಗ್ರಾಮ ದಿಂದ ಶೆಟ್ಟಹಳ್ಳಮ್ಮ, ಸಂತ್ಯಮ್ಮದೇವಿ ಯನ್ನು ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತರ ಲಾಯಿತು. ಹರಕೆ ಹೊತ್ತವರು ಬಾಯಿ ಬೀಗ ಧರಿ ಸಿದ್ದರು. ಸಿಡಿ ಉತ್ಸವ ನಡೆಯಿತು.

ಶನಿವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲಂಕೃತ ರಥದಲ್ಲಿ ದೇವರನ್ನು ಪ್ರತಿಷ್ಟಾಪಿಸುತ್ತಿದ್ದಂತೆ ಭಕ್ತಾಧಿಗಳ ಉದ್ಘೋಷ ಮುಗಿಲು ಮುಟ್ಟಿತು. ತೇರು ಮುಂದಕ್ಕೆ ಸಾಗುತ್ತಿದ್ದಂತೆ ತೇರಿನತ್ತ ಭಕ್ತರು ಬಾಳೆಹಣ್ಣು, ಧವನ ಎಸೆದು ಭಕ್ತಿ ಸಮರ್ಪಿಸಿದರು. ಗ್ರಾಮೀಣ ಸೊಗಡು ಬಿಂಬಿಸುವ ಕಲಾ ತಂಡಗಳ ಮೆರವಣಿಗೆ ರಥೋತ್ಸವಕ್ಕೆ ಮೆರಗು ನೀಡಿತು. ಜೋಗಿಪುರ, ನಂದಿಪುರ, ಅರಳಾಪುರ, ಕೆ. ಕಾಳೇನಹಳ್ಳಿ, ಚಿಕ್ಕಗೊಂಡನಹಳ್ಳಿ, ದಿಂಡಗೂರು ಗ್ರಾಮಸ್ಥರು ಭಾಗವಹಿಸಿದ್ದರು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾನುವಾರ ಶೆಟ್ಟಹಳ್ಳಮ್ಮ ಮತ್ತು ಸಂತ್ಯಮ್ಮ ದೇವಿಯನ್ನು ಪಲ್ಲಕ್ಕಿಯಲ್ಲಿ ಮೆರವ ಣಿಗೆ ಮಾಡಲಾಗುವುದು. ಗ್ರಾಮದ ಕಲಾವಿದರು ರಾತ್ರಿ `ರಾಜ ಸತ್ಯವ್ರತ' ನಾಟಕ ಅಭಿನಯಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.