ಶನಿವಾರ, ಏಪ್ರಿಲ್ 10, 2021
33 °C

ಸಂಭ್ರಮದ ಹೋಳಿಗೆ ಹಲವು ಬಣ್ಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಹುಣ್ಣಿಮೆಯ ದಿನವಾದ ಶನಿವಾರ ನಗರದಲ್ಲಿ ಬಣ್ಣಗಳ ಸಾಮ್ರಾಜ್ಯವೇ ನಿರ್ಮಾಣವಾಗಿತ್ತು. ‘ಹ್ಯಾಪಿ ಹೋಲಿ’ ಶುಭಾಷಯದ ಮಾತುಗಳು ಅನುರಣಿಸಿದ್ದವು.ಹೋಳಿ ಹಬ್ಬದ ದಿನವಾದ ಶನಿವಾರ ನಗರದ ಪ್ರಮುಖ ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ನೂರಾರು ಮಂದಿ ಬಾಲಕ-ಬಾಲಕಿಯರು, ಯುವಕರು, ಯುವತಿಯರು ಹತ್ತಾರು ಬಣ್ಣಗಳಲ್ಲಿ ನೆಂದು ಸಂಭ್ರಮಿಸಿದರು. ಪರಸ್ಪರ ಬಣ್ಣ ಎರಚಿ ಖುಷಿಪಟ್ಟರು. ಎಳೆಯ ಮಕ್ಕಳೂ ಕೂಡ ಬಣ್ಣಗಳಲ್ಲಿ ಮಿಂದದ್ದು ವಿಶೇಷವಾಗಿತ್ತು. ಅಲ್ಲಲ್ಲಿ ಪೋಷಕರು ಕೂಡ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮವನ್ನು ಹೆಚ್ಚಿಸಿದರು.ಕೆಟ್ಟದ್ದರ ಮೇಲೆ ಒಳಿತಿನ ಜಯಕ್ಕೆ ಮತ್ತು ಸಾಮರಸ್ಯಕ್ಕೆ ಸಂಕೇತವಾದ ಕದಿರು ಹುಣ್ಣಿಮೆಯ ದಿನ ಹಲವು ಕೋಮು, ಸಮುದಾಯಗಳ ಮಂದಿ ಒಟ್ಟಿಗೇ ಮಿಂದು ಸಾಮರಸ್ಯ ಪ್ರಕಟಿಸಿದರು. ಬಜರಂಗ ದಳ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆಯಿಂದಲೇ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು.ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಬಾವುಟ ಪ್ರದರ್ಶಿಸಿದರು. ಬಾವುಟ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಗರ ಠಾಣೆಯ ಸಿಬ್ಬಂದಿ ಜೊತೆ ಕೆಲವರು ವಾಗ್ವಾದ ನಡೆಸಿದರು.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.