ಸೋಮವಾರ, ಮೇ 17, 2021
27 °C

ಸಂಭ್ರಮ - ಧನ್ಯತೆಯ ಹೊನಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಟ್ಟಣ್ಣ ಕಣಗಾಲ್ ಅವರೊಂದಿಗೆ ನಾನು ಕೆಲಸ ಮಾಡಿಲ್ಲ. ಆದರೆ ಒಂದು ದಿನ ಮದರಾಸಿನ ಹೋಟೆಲೊಂದರಲ್ಲಿ ಭೇಟಿ ಮಾಡಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ನೀಡಬೇಕೆಂದು ಕೇಳಿಕೊಂಡೆ.ಅದಕ್ಕವರು, ನಿನಗೆ ಸ್ವತಂತ್ರ ನಿರ್ದೇಶಕನಾಗುವ ಯೋಗ್ಯತೆ ಇದೆ ಎಂದು ಹೇಳಿ ಕಳುಹಿಸಿದರು. ಅಂದು ಅವರ ಹಾರೈಕೆ ಪಡೆದ ನಾನು ಇಂದು ಅವರ ಹೆಸರಿನ ಪ್ರಶಸ್ತಿ ಪಡೆಯುತ್ತಿದ್ದೇನೆ. ಪುಟ್ಟಣ್ಣನಂಥ ನಿರ್ದೇಶಕರು ಮತ್ತೆ ಕನ್ನಡದಲ್ಲಿ ಹುಟ್ಟಲೇ ಇಲ್ಲ.ಭಾರ್ಗವ, ಪುಟ್ಟಣ ಕಣಗಾಲ್ ಪ್ರಶಸ್ತಿ ಪುರಸ್ಕೃತರುನಟನಾಗಿ, ನಿರ್ದೇಶಕ ಮತ್ತು ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ನನಗಾಗಿರುವ 52 ವರ್ಷಗಳ ಅನುಭವವನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿದ್ದು ಸಂತಸವಾಗಿದೆ. ನನಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ರಾಜ್‌ಕುಮಾರ್ ಅವರ ಹೆಸರಿನ ಪ್ರಶಸ್ತಿ ಸಿಕ್ಕಿರುವುದು ನನ್ನ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.

 

ಅವರೊಂದಿಗೆ ಎರಡು ದಶಕಗಳ ಒಡನಾಟ ನನ್ನದು. ಅವರ ಮಾರ್ಗದರ್ಶನದಲ್ಲಿ ನಾನು ಬೆಳೆದೆ ಎನ್ನಬಹುದು. ಸರ್ಕಾರ, ಸಮಿತಿ ಸದಸ್ಯರು ,ಕನ್ನಡ ಜನಸ್ತೋಮಕ್ಕೆ ನಾನು ಋಣಿ.ಎಸ್. ಶಿವರಾಂ, ಡಾ.ರಾಜ್‌ಕುಮಾರ್ ಪ್ರಶಸ್ತಿ ಪುರಸ್ಕೃತರುತುಂಬಾ ಖುಷಿಯಾಗುತ್ತಿದೆ. `ಪೃಥ್ವಿ~ಯಂತಹ ಸಮಕಾಲೀನ ಸಾಮಾಜಿಕ ವಸ್ತುವನ್ನಿಟ್ಟುಕೊಂಡು ಮಾಡಿದ ಚಿತ್ರದ ನಟನೆಗೆ  ಪ್ರಶಸ್ತಿ ಲಭಿಸಿರುವುದು ಹೆಮ್ಮೆ ಎನಿಸುತ್ತಿದೆ. `ಮಿಲನ~ ಚಿತ್ರದ ಬಳಿಕ ಮತ್ತೊಮ್ಮೆ ರಾಜ್ಯ ಪ್ರಶಸ್ತಿ ಸಿಕ್ಕಿದೆ.

ಇದರ ಶ್ರೇಯಸ್ಸು ನಿರ್ದೇಶಕ ಜೇಕಬ್ ವರ್ಗಿಸ್ ಅವರಿಗೆ ಸಲ್ಲಬೇಕು. ನಿರ್ದೇಶಕರು ಹಾಗೂ ನಿರ್ಮಾಪಕರಾದ ಕುಮಾರ್ ಮತ್ತು ಸೂರಪ್ಪ ಬಾಬು ಅವರಿಗೆ ನನ್ನ ಕೃತಜ್ಞತೆಗಳು.ಪುನೀತ್ ರಾಜ್‌ಕುಮಾರ್, ಅತ್ಯುತ್ತಮ ನಟ`ಸೂಸೈಡ್~ ಚಿತ್ರದ ನಟನೆಗಾಗಿ ನನಗೆ ಪ್ರಶಸ್ತಿ ಸಿಗುತ್ತದೆ ಅಂದುಕೊಂಡಿರಲೇ ಇಲ್ಲ. ಸ್ಪರ್ಧೆ ಜಾಸ್ತಿ ಇದೆ ಎಂದುಕೊಂಡಿದ್ದೆ. ಆದರೆ, ನನಗೆ ಪ್ರಶಸ್ತಿ ಅನಿರೀಕ್ಷಿತವಾಗಿ ಸಿಕ್ಕಿರುವುದರಿಂದ ತಡೆಯಲಾರದಷ್ಟು ಸಂತೋಷವಾಗಿದೆ. ಪ್ರಶಸ್ತಿ ಬರಬೇಕು ಎಂದಿದ್ದರೆ ಅದು ಹೇಗಾದರೂ ಬಂದೇ ಬರುತ್ತದೆ ಎನ್ನುವುದು ಸಾಬೀತಾಗಿದೆ.ಕಲ್ಯಾಣಿ, ಅತ್ಯುತ್ತಮ ನಟಿ`ಸೂಪರ್~ ಚಿತ್ರ ಮಾಡುವಾಗ ಉಪೇಂದ್ರ ಪಟ್ಟ ಶ್ರಮ, ಅವರು ತೊಡಗಿಸಿಕೊಂಡ ರೀತಿ ಇನ್ನೂ ನನ್ನ ಕಣ್ಮುಂದೆ ಇದೆ. ಚಿತ್ರಕ್ಕೆ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಉಪೇಂದ್ರ ಅವರಿಗೇ ಸಲ್ಲಬೇಕು. ಪ್ರಶಸ್ತಿಗೆ ಅರ್ಹ ಚಿತ್ರ ಎಂಬ ಭಾವನೆ ಇದ್ದರೂ, ತೀವ್ರ ಪೈಪೋಟಿ ಇದ್ದಿದ್ದರಿಂದ ಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ. ಉಪೇಂದ್ರ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.ರಾಕ್‌ಲೈನ್ ವೆಂಕಟೇಶ್, ಪ್ರಥಮ ಅತ್ಯುತ್ತಮ ಚಿತ್ರ `ಸೂಪರ್~ನ ನಿರ್ಮಾಪಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.