ಮಂಗಳವಾರ, ಜೂನ್ 15, 2021
27 °C

ಸಂಯುಕ್ತ ಶಿಕ್ಷಣ ಪದ್ಧತಿ ಉತ್ತಮ: ಸೆಲ್ವಿದಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಯುಕ್ತ ಶಿಕ್ಷಣ ಪದ್ಧತಿ ಉತ್ತಮ: ಸೆಲ್ವಿದಾಸ್

ಮೈಸೂರು: ಪ್ರಾಥಮಿಕ ಶಾಲಾ ಹಂತದಿಂದಲೇ ಸಂಯುಕ್ತ ಶಿಕ್ಷಣ ಪದ್ಧತಿ ಇರಬೇಕು. ಇದರಿಂದ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಪರಸ್ಪರ ಉತ್ತಮ ಬಾಂಧವ್ಯ ಮತ್ತು ಭಾವನೆ ಗಳೊಂದಿಗೆ ಬೆಳೆಯುತ್ತಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಸೆಲ್ವಿದಾಸ್ ಅಭಿಪ್ರಾಯಪಟ್ಟರು.ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ಸಂಸ್ಥೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, `ಭಾರತದ ಸಮಾಜದಲ್ಲಿ ಎಲ್ಲ ಹಂತದಲ್ಲಿ ಲಿಂಗ ಅಸಮಾನತೆಗಳಿವೆ. ಇದನ್ನು ತೊಡೆದು ಹಾಕಲು ಶಾಲಾ ಹಂತದಿಂದಲೇ ಪ್ರಯ ತ್ನಗಳು ಆಗಬೇಕು.

 

ಇದರ ಬಗ್ಗೆ ಪ್ರತಿಯೊಬ್ಬ ಪ್ರಜ್ಞಾ ವಂತರು ಜಾಗೃತ ರಾಗಬೇಕು.  ವಿಶೇಷವಾಗಿ ಮಹಿಳೆ ಯರಿಗೆ ರಾಜಕೀಯ ವಲಯದಲ್ಲಿ ಅವಕಾಶ ಕಲ್ಪಿಸಬೇಕು. ಈ ಮೂಲಕ 2015 ರ ಹೊತ್ತಿಗೆ ಸಮಾನ ಸಹಭಾ ಗಿತ್ವ ಸಾಧಿಸಬೇಕು~ ಎಂದು ಹೇಳಿದರು.`ಬಹಳಷ್ಟು ಯುವತಿಯರು ಮತ್ತು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಇವತ್ತು ಲೈಂಗಿಕ ತಿಳಿವಳಿಕೆಯಿಲ್ಲದೇ ತಪ್ಪು ಮಾಡಿ ಪಶ್ಚಾತ್ತಾಪದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಲೈಂಗಿಕ ವಿಜ್ಞಾನದ ಅವಶ್ಯಕ ಮಾಹಿತಿಯನ್ನು ಅವರಿಗೆ ನೀಡಬೇಕು. ತಿಳಿವಳಿಕೆ ಇದ್ದರೆ ತಪ್ಪು ಮಾಡುವವರ ಸಂಖ್ಯೆಯೂ ಕಡಿಮೆಯಾಗುತ್ತದೆ. ಕೌಟುಂಬಿಕ ದೌರ್ಜನ್ಯ ಗಳು ಹೆಚ್ಚುತ್ತಿ ರುವುದು ಆತಂಕಕಾರಿ ಬೆಳವಣಿಗೆ ಯಾಗಿದೆ.ಹೆಣ್ಣು ಭ್ರೂಣಹತ್ಯೆಗಳು ಮೊದಲಿಗಿಂತಲೂ ಈಗ ಕಡಿಮೆ ಯಾಗಿರುವುದು ಸಮಾಧಾನಕರ. ರಾಜಕೀಯ, ಔದ್ಯೋಗಿಕ, ಕೌಟುಂಬಿಕ ವಲಯಗಳಲ್ಲಿ ಇವತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ರಕ್ಷಣೆಯ ಅವಶ್ಯಕತೆ ಇದೆ~ ಎಂದರು.`ಗೃಹ ವಿಜ್ಞಾನ ಶಿಕ್ಷಣವು ಈಗ ಮೊದಲಿನಂತೆ ಅಡುಗೆ ಮನೆ ಚಟುವಟಿಕೆ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದೊಂದು ವಿಜ್ಞಾನ ಮತ್ತು ಸಂಶೋ ಧನಾ ಕಾರ್ಯಗಳು ಹೆಚ್ಚಾಗುತ್ತಿವೆ. ಇದು ಉತ್ತಮ ಬೆಳವಣಿಗೆ~ ಎಂದರು.ಕಾರ್ಯಕ್ರಮದಲ್ಲಿ ಅಭಿಮುಖಿ ಮಹಿಳಾ ಅಧ್ಯಯನದ ವಿಶೇಷ ಸಂಚಿಕೆಯನ್ನು ಪ್ರೊ.ರಾಮೇಶ್ವರಿ ವರ್ಮ ಬಿಡುಗಡೆ ಮಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ  ಕಾರ್ಯನಿರ್ವ ಹಣಾಧಿಕಾರಿ ಜಿ.ಸತ್ಯವತಿ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ ಪ್ರೊ. ಸುಮಿತ್ರಾ ಬಾಯಿ ಮತ್ತಿತರರು ಹಾಜ ರಿದ್ದರು.  ಡಾ.ಎಸ್.ಎಂ.ಮಂಗಳ ಪ್ರಾಸ್ತಾವಿಕ ಮಾತಾನಾಡಿದರು. ರೂಪ ಬರ್ನಾ ಡಿರ್ನರ್ ನಿರೂಪಿಸಿದರು. ಕವಿತ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.