ನವದೆಹಲಿ (ಪಿಟಿಐ): ನಿಷೇಧದ ಭೀತಿಗೆ ಒಳಗಾಗಿದ್ದ ಭಾರತೀಯ ಒಲಿಂಪಿಕ್ ಸಂಸ್ಥೆಯು (ಐಒಎ) ಕೊನೆಗೂ ತನ್ನ ಸಂವಿಧಾನಕ್ಕೆ ತಿದ್ದು ಪಡಿ ತಂದಿದೆ. ಈ ಮೂಲಕ ಅಂತ ರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಒತ್ತಡಕ್ಕೆ ಮಣಿದಿದೆ.

ಮಹತ್ವದ ಈ ತಿದ್ದುಪಡಿ ತಂದಿರುವ ಕಾರಣ ಭ್ರಷ್ಟಾಚಾರ ಒಳಗೊಂಡಂತೆ ಇತರ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವವರು ಇನ್ನು ಮುಂದೆ ಸಂಸ್ಥೆಯ ಚುನಾವ ಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅಷ್ಟು ಮಾತ್ರವಲ್ಲದೇ, ಐಒಸಿ ಮಾನ್ಯತೆಯನ್ನು ಉಳಿಸಿಕೊಳ್ಳುವತ್ತ ಐಒಎ ಮೊದಲ ಹೆಜ್ಜೆ ಇಟ್ಟಿದೆ. ಭಾನುವಾರ ಇಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಸ್ಥೆಯು ಈ ನಿರ್ಧಾರ ತೆಗೆದುಕೊಂಡಿದೆ.

‘ಡಿಸೆಂಬರ್ 10ರೊಳಗೆ ತಿದ್ದು ಪಡಿ ತರಬೇಕು, ಇಲ್ಲದಿದ್ದರೆ ಡಿ.10 ಹಾಗೂ 11ರಂದು ನಡೆಯಲಿರುವ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಐಒಎ ಮಾನ್ಯತೆಯನ್ನು ರದ್ದುಗೊಳಿಸಲಾಗುವುದು’ ಎಂದು ಐಒಸಿ ಎಚ್ಚರಿಕೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.