ಬುಧವಾರ, ಜೂನ್ 16, 2021
27 °C

ಸಂವಿಧಾನ ಇತಿಹಾಸ ತಿರುಚುವ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ಸಂವಿಧಾನದ ಕರಡು ರೂಪಿಸಿದ ಡಾ. ಅಂಬೇಡ್ಕರ್ ಅವರ ಪರಿಶ್ರಮವನ್ನು ಅಲ್ಲಗಳೆಯುವ ಹುನ್ನಾರ ನಡೆಯುತ್ತಿರುವ ಬಗ್ಗೆ  ಡಾ. ಸಿ.ಎಸ್. ದ್ವಾರಕಾನಾಥ್ (ಸಂಗತ -ಪ್ರ ವಾ ಮಾರ್ಚ್ 1) ಅವರು ಎಚ್ಚರಿಸಿದ್ದಾರೆ.`ಸಂವಿಧಾನದ ಕರಡು ಪ್ರತಿಯನ್ನು ಬಿ.ಎನ್. ರಾವ್ ಅವರು ರಚಿಸಿದರು. ಅಂಬೇಡ್ಕರ್ ಅವರು ಓದಿದರು~ ಎಂಬ ವಾಕ್ಯಗಳು ಸಂವಿಧಾನ ಕರ್ತೃವಿನ ಪರಿಶ್ರಮವನ್ನು ಅಣಕಿಸುವ ಪ್ರಯತ್ನ. ಅವರ ಪರಿಶ್ರಮವನ್ನು ಹೀಗೆ ಲೇವಡಿ ಮಾಡುವವರದು ನೀಚ ಮನಸ್ಸು.ನಮ್ಮ ದೇಶದ ಒಂದು ವರ್ಗ ಇಂತಹ ಕುತಂತ್ರವನ್ನು ಬಹಳ ಹಿಂದಿನಿಂದ ಮಾಡುತ್ತ ಬಂದಿದೆ. ಸಂವಿಧಾನದ ಇತಿಹಾಸವನ್ನೇ ತಿರುಚುವ ಈ ಕೃತ್ಯವನ್ನು ಎಲ್ಲರೂ ಖಂಡಿಸಬೇಕು. ಸಂವಿಧಾನದಿಂದ ಅಂಬೇಡ್ಕರ್ ಅವರನ್ನು ಪ್ರತ್ಯೇಕಿಸುವ ಹುನ್ನಾರದ ವಿರುದ್ಧ ಸರ್ಕಾರ  ಕ್ರಮ ತೆಗೆದುಕೊಳ್ಳಬೇಕು.ತರಬೇತಿಗಾಗಿ ಸಿದ್ಧಪಡಿಸಿದ ಕೈಪಿಡಿಯನ್ನು ಸರ್ಕಾರ ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಅಂಬೇಡ್ಕರ್ ಅವರ ಪರಿಶ್ರಮವನ್ನು ಮರೆಮಾಚುವುದರ ಹಿಂದೆ ಒಳ್ಳೆಯ ಉದ್ದೇಶ ಇರಲಾರದು.ಕೈಪಿಡಿ ಸಿದ್ಧಪಡಿಸಿದ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಸುಳ್ಳು ಮಾಹಿತಿ ನೀಡಿದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕು. ಇಂತಹ ಅಹಿತಕರ ಪ್ರಸಂಗಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.