ಸಂಶೋಧನ ಕೇಂದ್ರಕ್ಕೆ ಚಾಲನೆ

ಸೋಮವಾರ, ಜೂಲೈ 22, 2019
27 °C

ಸಂಶೋಧನ ಕೇಂದ್ರಕ್ಕೆ ಚಾಲನೆ

Published:
Updated:

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರತ್ತ ಮತ್ತು ವ್ಹಿಟ್ನಿ ಯೂನೈಟೆಡ್‌ನ ತಾಂತ್ರಿಕ ಕಾರ್ಪೊರೇಷನ್ ಕಂಪೆನಿ ಸ್ಥಾಪಿಸಿರುವ ಸಂಶೋಧನ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಲಾಯಿತು.ಭಾರತದಲ್ಲಿ ಟರ್ಬೈನ್ ಜೆಟ್ ಎಂಜಿನ್ ತಾಂತ್ರಿಕತೆಯ ಕುರಿತು ಸಂಶೋಧನೆ ನಡೆಸಲು ಈ ಕೇಂದ್ರವನ್ನು ತೆರೆಯಲಾಗಿದೆ. ಕಂಪೆನಿಯು ವಿನ್ಯಾಸ ಮತ್ತು ಅಭಿವೃದ್ಧಿ ಅಷ್ಟೇ ಅಲ್ಲದೆ, ಪರಿಸರ ಸ್ನೇಹಿ ಗ್ಯಾಸ್ ಟರ್ಬೈನ್ ಎಂಜಿನ್‌ಗಳ ಉತ್ಪಾದನೆಗೆ ಒತ್ತು ನೀಡಲಿದೆ.`ಭಾರತೀಯ ವಿಜ್ಞಾನ ಸಂಸ್ಥೆಯು ನಮ್ಮ ಸಂಶೋಧನೆಗೆ ಅನುಕೂಲವಾಗುವಂತಹ ಅನೇಕ ಅತ್ಯುತ್ತಮವಾದ ತಾಂತ್ರಿಕತೆಯನ್ನು ಒಳಗೊಂಡಿದೆ. ಮುಂದಿನ ಪೀಳಿಗೆಗೆ ಪರಿಸರ ಸ್ನೇಹಿ ಮತ್ತು ಮುಂದುವರಿದ ತಂತ್ರಜ್ಞಾನವನ್ನು ಕೊಡುಗೆಯಾಗಿ ನೀಡಲು ಇದು ಸಹಕಾರಿಯಾಗುತ್ತದೆ~ ಎಂದು ಕಂಪೆನಿಯ ಉಪಾಧ್ಯಕ್ಷ ಅಲ್ಲಾನ್ ಬ್ರಾಕೆಟ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry