ಸೋಮವಾರ, ಜನವರಿ 20, 2020
19 °C

ಸಂಸ್ಕಾರದಿಂದ ಸಂಸಾರ ಉಳಿಸಿ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ಸಮಾಜದಲ್ಲಿ ಸಂಸ್ಕಾರದ ಕೊರತೆ ಅಧಿಕವಾಗಿದ್ದು, ನಾಡಿನ ಮಠಗಳು ಸಂಸ್ಕಾರ ನೀಡಿ, ಸಂಸಾರ ಉಳಿಸುವ ಕಾಯಕ ಮಾಡಬೇಕಿದೆ ಎಂದು ಸದಾಶಿವಪೇಟೆ ವಿರಕ್ತಮಠದ ಗದಿಗೇಶ್ವರ ಸ್ವಾಮೀಜಿ ತಿಳಿಸಿದರು.ಸ್ಥಳೀಯ ಕಲ್ಮಠ ಪ್ರಭು ಶಿವಯೋಗಿಗಳ ಆರನೇ ಪುಣ್ಯರಾಧನೆ ಅಂಗವಾಗಿ ಶ್ರೀಮಠದಲ್ಲಿ ಜರುಗಿದ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಸ್ತುತ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ದೇಸಿ ಸಂಸ್ಕೃತಿಯನ್ನು ಕಳೆದುಕೊಳ್ಳಲಾಗುತ್ತಿದೆ. ಇದರ ಬಗ್ಗೆ ಎಚ್ಚರವಹಿಸುವುದು ಅವಶ್ಯ ಎಂದು ಹೇಳಿದರು.ಉಪನ್ಯಾಸಕ ಡಾ. ಮೃತ್ಯುಂಜಯ ರುಮಾಲೆ ಮಾತನಾಡಿ, ಎಲ್ಲ ಕಾಲಕ್ಕೂ ಹೊಂದಿಕೊಂಡು ವಿಚಾರಗಳನ್ನು ಪ್ರಸ್ತುತಪಡಿಸುವುದೇ ವೀರಶೈವ ಲಿಂಗಾಯಿತ ಧರ್ಮದ ವೈಶಿಷ್ಟ್ಯ. ಆಧುನಿಕ ಸಮಸ್ಯೆ, ವಿದ್ಯಾಮಾನಗಳಿಗೆ ಅರ್ಥಪೂರ್ಣವಾಗಿ ಸ್ಪಂದಿಸುವುದೇ ನಿಜವಾದ ಧರ್ಮದ ತಿರಳು ಎಂದು ಅಭಿಪ್ರಾಯಪಟ್ಟರು.ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿಗಳು, ಕಂಪ್ಲಿ ಕಲ್ಮಠದ ಅಭಿನವ ಪ್ರಭುಮಹಾಸ್ವಾಮೀಜಿ, ಗುಡ್ಡದ ಅನ್ವೇರಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ಗುಂಡಸಗಿ ವಿರಕ್ತಮಠದ ಕುಮಾರ ಸ್ವಾಮೀಜಿ, ಮೈನಳ್ಳಿ ಸಿದ್ಧೇಶ್ವರ ಶಿವಾಚಾರ್ಯರು, ಸುಳೇಕಲ್ಲು ಭುವನೇಶ್ವರ‌್ಯಯ್ಯ ತಾತಾ ಅವರು ಆಶೀರ್ವಚನ ನೀಡಿದರು.ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿ ಸಿದ್ಧಯ್ಯಸ್ವಾಮಿ, ಕಲ್ಮಠದ ಅಧ್ಯಕ್ಷ ಅರವಿ ಬಸವನಗೌಡ, ಕಲ್ಮಠದ ಕಾರ್ಯಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಗುರುಸಿದ್ಧೇಶ್ವರ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಎಂ. ರಾಜೇಂದ್ರಕುಮಾರ ಸ್ವಾಮೀಜಿ, ಯು. ದೊಡ್ಡಬಸಪ್ಪ, ಜಿ.ಜಿ. ಚಂದ್ರಣ್ಣ, ಎಸ್.ಎಂ. ನಾಗರಾಜ, ನಾಗರಾಜರೆಡ್ಡಿ, ಕಾಮರೆಡ್ಡಿ ಚಂದ್ರಶೇಖರ, ಎ. ರವೀಂದ್ರ, ವೆಂಕನಗೌಡ, ಬಸವನಗೌಡ, ಟಿ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.ಜಿ.ಜಿ. ಚಂದ್ರಣ್ಣ ಸ್ವಾಗತಿಸಿದರು. ಮುಖ್ಯ ಶಿಕ್ಷಕ ವಿ.ಎಂ. ಬಸವರಾಜ ಕಾರ್ಯಕ್ರಮ ನಿರೂಪಿಸಿದರು. ಎಸ್. ಎಂ. ನಾಗರಾಜಸ್ವಾಮಿ ವಂದಿಸಿದರು.

ಪ್ರತಿಕ್ರಿಯಿಸಿ (+)