ಬೀದರ್: `ಪ್ರಕೃತಿಯನ್ನು ಸಂಸ್ಕೃತಿಯಾಗಿ ಪರಿವರ್ತಿಸಿಕೊಂಡು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ~ ಎಂದು ಬಿ.ವಿ.ಬಿ. ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟರು.
ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ನಗರದ ಬಿ.ವಿ.ಬಿ. ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯನ್ನು ಯಾವುದೇ ಕಾರಣಕ್ಕೂ ವಿಕೃತಿಗೊಳಿಸದೆ, ಅದನ್ನು ಸಂಸ್ಕೃತಿಯಾಗಿ ಬದಲಾಯಿಸಿಕೊಂಡ ರಕ್ಷಣೆ ಮಾಡಲು ಯುವಕರು ಶ್ರಮಿಸಬೇಕು ಎಂದು ತಿಳಿಸಿದರು.

ವಿಶ್ವ ಪರಂಪರೆ ಕಾಪಾಡಲು ಇತಿಹಾಸ ತಾಯಿಬೇರು. ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿಯೊಂದಿಗೆ ವಿಶ್ವ ಪರಂಪರೆ ರಕ್ಷಣೆ ಮಾಡಲು ಇತಿಹಾಸ ಸಹಕಾರಿಯಾಗಿದೆ ಎಂದು ಹೇಳಿದರು.

ವಿಶ್ವ ಪರಂಪರೆಗೆ ಭಾರತದ ಇತಿಹಾಸ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ಸಂಸ್ಕೃತಿಗೆ ಕಲ್ಯಾಣಿ ಚಾಲುಕ್ಯರ ಕೊಡುಗೆ ವಿಷಯ ಕುರಿತು ಉಪನ್ಯಾಸ ನೀಡಿದ ಜಗನ್ನಾಥ ಮೂಲಗೆ ನುಡಿದರು.

ವಿಶ್ವದ ಐತಿಹಾಸಿಕ ಹಾಗೂ ಸಾಹಿತ್ಯ ಪಂಡಿತರ ಅಧ್ಯಯನಕ್ಕಿಂತ ಮೊದಲು ಭಾರತೀಯ ಐತಿಹಾಸಿಕ ಪುಟಗಳಲ್ಲಿ ಖ್ಯಾತಿ ಪಡೆದ ಸಾಹಿತಿಗಳ ಬಗ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.

ಕಲ್ಯಾಣಿ ನಾಡಿನಲ್ಲಿ ಆಳ್ವಿಕೆ ನಡೆಸಿದ ಕಲ್ಯಾಣಿ ಚಾಲುಕ್ಯರ ಕಾಲ ಸುವರ್ಣ ಕಾಲವಾಗಿತ್ತು. 6ನೇ ವಿಕ್ರಮಾಧಿತ್ಯನ ಕುರಿತು ಬಿಲ್ಲಣ ಕವಿ ಬರೆದ `ವಿಕ್ರಮಾಂಕ ಚರಿತ್ರೆ~ ಕೃತಿಯು ವ್ಯಕ್ತಿಗಿಂತ ಸಾಹಿತ್ಯದ ಬಗ್ಗೆ ಹೆಚ್ಚು ವಿವರ ನೀಡುತ್ತದೆ ಎಂದು ತಿಳಿಸಿದರು.

ಪ್ರಾಚಾರ್ಯ ಪ್ರೊ. ಬಿ.ಎಸ್. ಸಜ್ಜನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಂಪರೆ ಕೂಟದ ಸಂಚಾಲಕಿ ಪ್ರೊ. ಎನ್.ಟಿ. ಗಂಗಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಸವರಾಜ ಬಿರಾದಾರ ಸ್ವಾಗತಿಸಿದರು. ಪ್ರೊ. ಅನೀಲಕುಮಾರ ಆಣದೂರೆ ನಿರೂಪಿಸಿದರು. ಪ್ರೊ. ವಿಜಯಕುಮಾರ ಪಾಂಚಾಳ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.