ಹಿರಿಯೂರು: ಅಗತ್ಯವಿರುವ ಪ್ರತಿಯೊಬ್ಬರಿಗೂ ಸಾಲ ಸಿಗಬೇಕೆಂದರೆ, ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಬೇಕು ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಕರೆ ನೀಡಿದರು.

ನಗರದಲ್ಲಿ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬುಧವಾರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಟ್ರ್ಯಾಕ್ಟರ್ ಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು.

ರಾಜ್ಯಕ್ಕೆ ಮುಂಗಾರು ಮಳೆ ಕಾಲಿಟ್ಟಿದೆ. ಒಂದೆರಡು ದಿನಗಳಲ್ಲಿ ಈ ಭಾಗದಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ. ಬ್ಯಾಂಕ್ನಿಂದ ಪಡೆಯುವ ಸಾಲವನ್ನು ಬಿತ್ತನೆ ಕಾರ್ಯಗಳಿಗೆ, ಕೃಷಿ ಚಟುವಟಿಕೆ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಕೃಷಿ ಚಟುವಟಿಕೆ ನಡೆಸಲು ಕೂಲಿಗಳ ಸಮಸ್ಯೆ ಇರುವ ಕಾರಣ ಯಾಂತ್ರಿಕ ಬೇಸಾಯತ್ತ ಅನಿವಾರ್ಯವಾಗಿ ಹೋಗಬೇಕಿದೆ. ಹೀಗಾಗಿ, ಬ್ಯಾಂಕ್ ವತಿಯಿಂದ ಟ್ರ್ಯಾಕ್ಟರ್ ಸಾಲ ಕೊಡಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎಚ್.ಎಸ್. ಸಿದ್ದನಾಯಕ ಮಾತನಾಡಿ, ವೈದ್ಯನಾಥನ್ ವರದಿ ಪ್ರಕಾರ, ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಆಗದಿರುವ ಕಾರಣದಿಂದ ಸಂಘದಲ್ಲಿ ಹೇಳಿಕೊಳ್ಳುವಂತಹ ಚಟುವಟಿಕೆಗಳು ನಡೆಯುತ್ತಿಲ್ಲ. ಸರ್ಕಾರ ತಕ್ಷಣ ಸಂಘಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ವೈ.ಎಸ್. ಅಶ್ವತ್ಥಕುಮಾರ್ ಮಾತನಾಡಿ, ಸಂಘಗಳಲ್ಲಿ ಹಣವಿದ್ದರೆ ಅಗತ್ಯ ಇರುವವರಿಗೆ ನೆರವು ನೀಡಬಹುದು. ಸಹಕಾರ ಸಂಘಗಳಿಗೆ ಉತ್ತೇಜನ ನೀಡಬೇಕು ಎಂದು ಕೋರಿದರು.

ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಸವರಾಜು, ಮೇಲ್ವಿಚಾರಕ ಮಂಜುನಾಥ್, ಶಿವರುದ್ರಪ್ಪ, ರಂಗನಾಥ್ ಕಾರ್ಯಕ್ರಮದಲ್ಲಿ ಪಾಲ್ಗೊಂದ್ದರು. ಎಸ್.ಎಸ್. ರಂಗಪ್ಪ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.