ಮೈಸೂರು: ಈಗ ಎಲ್ಲ ರಂಗಗಳಲ್ಲಿ ಅಭಿವೃದ್ಧಿಯ ಗಾಳಿ ಜೋರಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಸೇವೆಗಳು ಜನರಿಗೆ ಸಕಾಲದಲ್ಲಿ ಸಿಗಲು ಕರ್ನಾಟಕ ನಾಗರಿಕ ಸೇವಾ ಕಾಯ್ದೆಯು ಸಹಕಾರಿಯಾಗಲಿದೆ ಎಂದು ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) ಚೇರಮನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎಸ್. ರಾಮನಾಥನ್ ಹೇಳಿದರು.

ಜೆಎಸ್ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಐಐಪಿಎ ಮೈಸೂರು ಘಟಕ ಮತ್ತು ಮೈಸೂರು ಗ್ರಾಹಕರ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ `ಸಕಾಲ-2011~(ಕರ್ನಾಟಕ ನಾಗರಿಕ ಸೇವಾ ಖಾತ್ರಿ ) ಕಾಯ್ದೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿದ ಅವರು ಮಾತನಾಡಿದರು.

`ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಎಲ್ಲ ಕೆಲಸಗಳು ಜೋರಾಗಿ ನಡೆಯುತ್ತಿವೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ಶಿಸ್ತು ಮತ್ತು ವೈಜ್ಞಾನಿಕ ಚೌಕಟ್ಟಿನ ಕಾನೂ ನಿನ ಅವಶ್ಯಕತೆ ಇದೆ. ಅಭಿವೃದ್ಧಿಪರ ಹಾಗೂ ವೈಜ್ಞಾ ನಿಕ ಚೌಕಟ್ಟು ಈ ಮೂಲಕ ಸಿಗಲಿದೆ~ ಎಂದರು.
`ಯಾವುದೇ ಕಾನೂನು ಅಥವಾ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಬೇಕಾದರೆ ಕಾನೂನು ಸೇವೆಗಳು ಮತ್ತು ಕಾನೂನು ವೃತ್ತಿಯಲ್ಲಿ ಇರುವವರು ಪರಿಣಾಮಕಾರಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಯುವಜನತೆಯು ಈ ಬಗ್ಗೆ ತಿಳಿವಳಿಕೆ ಪಡೆದು ಸಫಲ ಅನುಷ್ಠಾನಕ್ಕಾಗಿ ಪ್ರಯತ್ನಿಸಬೇಕು~ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಕೃಷ್ಣ ವಟ್ಟಂ, `ಮಾಹಿತಿ ಕಾಯ್ದೆ ಹಕ್ಕು ಈ ದೇಶದ ಕಾನೂನಿನಲ್ಲಿ ಸಾರ್ವಜನಿಕರಿಗೆ ಸಿಕ್ಕ ಬಹುದೊಡ್ಡ ಅಸ್ತ್ರ ಮತ್ತು ಅವಕಾಶ.

ಆ ಮೂಲಕ ಕಾರ್ಯಾಂಗದಲ್ಲಿ ಆಗುವ ಲೋಪದೋಷಗಳನ್ನು ಜನರು ಪ್ರಶ್ನಿಸುವ ಹಕ್ಕು ಪಡೆದಿದ್ದಾರೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇವತ್ತು ತೀವ್ರ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ದುಃಖದ ಸಂಗತಿ. ಹೊಸ ನೀತಿ ನಿಯಮಗಳಿಂದಾಗಿ ಭ್ರಷ್ಟಾಚಾರ ನಿಯಂತ್ರಣವಾಗಬೇಕು~ ಎಂದು ಹೇಳಿದರು.

ಮೈಕ್ಯಾಬ್ಗೆ ಚಾಲನೆ: ಇದೇ ಕಾರ್ಯಕ್ರಮದಲ್ಲಿ ಮೈಸೂರು ನಾಗರಿಕ ಸಲಹಾ ಸಮಿತಿಗೆ (ಮೈಸೂರು ಸಿಟಿಜಿನ್ ಅಡ್ವೈಸರಿ ಬ್ಯುರೋ-ಮೈಕ್ಯಾಬ್) ಚಾಲನೆ ನೀಡಲಾಯಿತು. ಜೆಎಸ್ಎಸ್ ಕಾನೂನು ಮಹಾವಿದ್ಯಾಲಯವು ಮೈಕ್ಯಾಬ್ ಮೂಲಕ ಸಾಮಾನ್ಯ ನಾಗರಿಕರಿಗೆ ಕಾನೂನು ಅರಿವು ನೀಡಲಿದೆ.

ಕಾರ್ಯಾಗಾರಗಳು, ಜಾಗೃತಿ ಶಿಬಿರಗಳು, ವಿಚಾರ ಸಂಕಿರಣಗಳು ಮತ್ತಿತರ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜೆಎಸ್ಎಸ್ ಕಾನೂನು ಮಹಾವಿದ್ಯಾಲಯದೊಂದಿಗೆ ಬೆಂಗಳೂರಿನ ಗ್ರಾಹಕರ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ (ಕ್ರಿಯೆಟ್), ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳೂ ಸಹಯೋಗ ನೀಡಲಿವೆ.

ಮೈಕ್ಯಾಬ್ ಮೂಲಕ ಮೈಸೂರು ನಗರದಲ್ಲಿರುವ ಸಾರ್ವಜನಿಕ ಸೇವಾ ಸಂಸ್ಥೆಗಳ ಕುರಿತು ಮಾಹಿತಿ, ಜನರ ಸಮಸ್ಯೆಗಳ ಡಾಟಾ ಬೇಸ್ ತಯಾರಿಸುವುದು, ಸಹಾಯ ಘಟಕ, ಪ್ರಜಾಪ್ರಭುತ್ವದ ತತ್ವಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಲಿದೆ. ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಜಂಟಿ ಸಹಭಾಗಿತ್ವದಲ್ಲಿ ಮೈಕ್ಯಾಬ್ ಕಾರ್ಯಕ್ರಮಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಐಐಪಿಎ ಚೇರಮನ್ ಪ್ರೊ. ಎಂ. ಉಮಾಪತಿ, ಪ್ರಾಚಾರ್ಯ ಪ್ರೊ. ಕೆ.ಎಸ್. ಸುರೇಶ್, ಮುಡಾ ಆಯುಕ್ತ ಡಾ. ಸಿ.ಜಿ. ಬೆಟಸೂರಮಠ, ಗ್ರಾಹಕ ಕಾರ್ಯಕರ್ತ ಡಾ. ಟಿ.ಎನ್. ಮಂಜುನಾಥ್ ಮತ್ತಿತರರು ಹಾಜರಿದ್ದರು. ಎಂಜಿಪಿ ಅಧ್ಯಕ್ಷೆ ಶ್ರೀಮತಿ ಹರಿಪ್ರಸಾದ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.