ನವದೆಹಲಿ(ಪಿಟಿಐ): 2013-14ರ `ಮಾರುಕಟ್ಟೆ ವರ್ಷ'ದಲ್ಲಿ (ಆಕ್ಟೋಬರ್-ಸೆಪ್ಟೆಂಬರ್ ಅವಧಿ) ದೇಶದ ಸಕ್ಕರೆ ಉತ್ಪಾದನೆ ಶೇ 10ರಷ್ಟು ಕಡಿಮೆ ಆಗಲಿದೆ ಎಂದು ಕೇಂದ್ರ ಆಹಾರ ಖಾತೆ ಸಚಿವ ಕೆ.ವಿ.ಥಾಮಸ್ ಹೇಳಿದರು.

ಕಳೆದ ಸಾಲಿನಲ್ಲಿ ಕೆಲವು ರಾಜ್ಯಗಳಲ್ಲಿ ಬರ ಇದ್ದ ಕಾರಣ ಕಬ್ಬು ಬೆಳೆ ಎಕರೆವಾರು ಇಳುವರಿ ತಗ್ಗಲಿದೆ. ಹಾಗಾಗಿ ಆಕ್ಟೋಬರ್ನಲ್ಲಿ ಆರಂಭಗೊಳ್ಳುವ ಮಾರುಕಟ್ಟೆ ವರ್ಷದಲ್ಲಿ ಒಟ್ಟು 2.20 ಕೋಟಿ ಟನ್ನಷ್ಟು ಸಕ್ಕರೆಯಷ್ಟೇ ಉತ್ಪಾದನೆ ಆಗುವ ನಿರೀಕ್ಷೆ ಇದೆ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ವಿವರಿಸಿದರು.

ಹಾಗೆಂದು ಆತಂಕ ಪಡುವ ಅಗತ್ಯವಿಲ್ಲ. 2.20 ಕೋಟಿ ಟನ್ ಸಕ್ಕರೆಯೇ ದೇಶದ ಒಟ್ಟು ಬೇಡಿಕೆ ಪೂರೈಸಲು ಸಾಕಾಗಲಿದೆ. ಜತೆಗೆ ಹಿಂದಿನ ವರ್ಷದ ದಾಸ್ತಾನು ಸಹ ಮಾರುಕಟ್ಟೆ ಸರಬರಾಜು ಕೊರತೆಯಾಗದಂತೆ ನೋಡಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. 2012-13ನೇ ಮಾರುಕಟ್ಟೆ ವರ್ಷದಲ್ಲಿ ದೇಶದಲ್ಲಿ ಒಟ್ಟು 2.45 ಕೋಟಿ ಟನ್ ಸಕ್ಕರೆ ಉತ್ಪಾದನೆ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.