ಮುಂಬೈ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕಗಳ ಶತಕದ ಸಾಧನೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ನೂರು ಚಿನ್ನದ ನಾಣ್ಯಗಳನ್ನು ನೀಡಿ ಸನ್ಮಾನಿಸಲಿದೆ.

ಈ ನಾಣ್ಯಗಳ ಒಟ್ಟು ಮೌಲ್ಯ 23ರಿಂದ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ನಿರ್ಧಾರವನ್ನು ಎಂಸಿಎ ಅಧ್ಯಕ್ಷ ಹಾಗೂ ಕೇಂದ್ರ ಸಚಿವರೂ ಆಗಿರುವ ವಿಲಾಸ್ರಾವ್ ದೇಶಮುಖ್ ಅವರ ನೇತೃತ್ವದಲ್ಲಿ ನಡೆದ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

`ವಿಲಾಸ್ರಾವ್ ಅವರು ಬ್ಯಾಟಿಂಗ್ ಚಾಂಪಿಯನ್ ಸಚಿನ್ ಅವರಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ್ದಾರೆ. ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲು ದಿನ ನಿಗದಿಪಡಿಸುವಂತೆ ಕೋರಿದ್ದಾರೆ. ಇದಕ್ಕೆ ತೆಂಡೂಲ್ಕರ್ ಸಮ್ಮತಿ ಸೂಚಿಸಿದ್ದಾರೆ~ ಎಂದು ಎಂಸಿಎ ಜಂಟಿ ಕಾರ್ಯದರ್ಶಿ ನಿತಿನ್ ದಲಾಲ್ ತಿಳಿಸಿದ್ದಾರೆ.
ನೆನಪುಗಳು ಅಮರ: `ಸಮಯ ಮುಂದೋಡುತ್ತಿರುತ್ತದೆ. ಆದರೆ ನೆನಪುಗಳು ಅಮರ. 2011ರ ಏಪ್ರಿಲ್ 2 ಎಂಥ ಅದ್ಭುತ ದಿನ!~

-ವಿಶ್ವಕಪ್ ಗೆಲುವಿನ ವರ್ಷಾಚರಣೆ ಸಂಬಂಧ ಟ್ವಿಟರ್ನಲ್ಲಿ ಈ ರೀತಿಯ ಸಂಭ್ರಮವನ್ನು ಸಚಿನ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

`ನಾವು ವಿಶ್ವಕಪ್ ಗೆದ್ದು ಒಂದು ವರ್ಷವಾಯಿತು. ಇದನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಆ ಕನಸು ನನಸಾಗಲು ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರೂ ಅದ್ಭುತ ಕೊಡುಗೆ ನೀಡಿದ್ದರು~ ಎಂದು ವೀರೇಂದ್ರ ಸೆಹ್ವಾಗ್ ಕೂಡ ಟ್ವಿಟರ್ ಮೂಲಕ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.