ಪಣಜಿ (ಪಿಟಿಐ) : ಪ್ರವಾಸೋದ್ಯಮ ಸಚಿವ ಸಾಲ್ಡಾನ ಅವರ ಹಠಾತ್ ನಿಧನದಿಂದ ಬುಧವಾರ ನಡೆಯಬೇಕಿದ್ದ ಗೋವಾ ರಾಜ್ಯ ಬಜೆಟ್ ಮಂಡನೆಯನ್ನು 26ಕ್ಕೆ ಮುಂದೂಡಲಾಗಿದೆ.

ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು, ಬಜೆಟ್ ಮುಂದೂಡಿಕೆ ವಿಷಯವನ್ನು ರಾಜ್ಯಪಾಲ ಶಂಕರನಾರಾಯಣ ಅವರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.
ಅರಣ್ಯ ಮತ್ತು ಪರಿಸರ ಖಾತೆಯ ಸಚಿವರೂ ಆಗಿದ್ದ ಅವರು ತೀವ್ರ ಹೃದಯಾಘಾತದಿಂದ ಬುಧವಾರ ಬೆಳಿಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಗೋವಾದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವುದಾಗಿ ಸಾಲ್ಡಾನ ಹೇಳಿದ್ದರು.

ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.