ಮಂಗಳೂರು: ಮಂಗಳೂರು ಸುತ್ತಮುತ್ತ ಸೂಕ್ತ ಬೆಲೆಗೆ ಸಿಗುವಂತಹ ಸುಮಾರು 75 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸಣ್ಣ ಉದ್ದಿಮೆಗಳಿಗೆ ಒದಗಿಸಲು ಸರ್ಕಾರ ಚಿಂತಿಸುತ್ತಿದೆ. ಜತೆಗೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಭೂಮಿ ಒದಗಿಸುವವರಿಂದಲೂ ಭೂಮಿ ಪಡೆದು (ಭೂ ಬ್ಯಾಂಕ್) ಉದ್ಯಮಗಳಿಗೆ ಒದಗಿಸಲಾಗುವುದು.

ಹೆಚ್ಚಿನ ದರ ನಿಗದಿಪಡಿಸಿದರೆ ಜಮೀನು ಖರೀದಿ ಸಾಧ್ಯವಿಲ್ಲ ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್.ವಿಶ್ವನಾಥ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಜೂನ್ ಮೊದಲ ವಾರ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಗಾಗಿ ಜಿಲ್ಲೆಗೆ ಆಗಮಿಸಿದ ಅವರು ಗುರುವಾರ ಸಂಜೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಈ ವಿಷಯ ತಿಳಿಸಿದರು.

ಮೇ 8ರಂದು ಮಂಗಳೂರಿನಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಆಸಕ್ತಿ ತೋರಿಸುವವರೊಂದಿಗೆ ಒಪ್ಪಂದ (ಇಒಐ) ಮಾಡಿಕೊಳ್ಳಲಾಗುವುದು ಎಂದರು. ಸುಳ್ಯದಲ್ಲಿ ರೂ 50 ಕೋಟಿ ವೆಚ್ಚದಲ್ಲಿ ಸಿದ್ಧ ಉಡುಪು ತಯಾರಿಕಾ ಘಟಕ ಸ್ಥಾಪಿಸಲಿರುವ ಅರವಿಂದ ರೆಫೆರಲ್ಸ್ ಸಂಸ್ಥೆ ಜತೆಗೆ ಸರ್ಕಾರ ಇಒಐಗೆ ಸಹಿ ಹಾಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.