ಮಂಗಳವಾರ, ಮೇ 24, 2022
25 °C

ಸತ್ಕಾರ್ಯವೇ ದೇವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್ಲ: ‘ಸತ್ಕಾರ್ಯಗಳೇ ದೇವರು, ಧಾರ್ಮಿಕ ಕಾರ್ಯಕ್ರಮಗಳು ಔಪಚಾರಿಕೆಗೆ ಸೀಮಿತವಾಗದೇ ಮನಸ್ಸುಗಳನ್ನು ಅರಳಿಸಿ ಬದುಕಿನ ಸೂತ್ರಗಳನ್ನು ಜಾಗೃತಗೊಳಿಸುವಂತಾಗಬೇಕು’ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ನುಡಿದರು.ಹಾನಗಲ್ಲ ತಾಲ್ಲೂಕಿನ ಸಾಂವಸಗಿಯಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಧಾರ್ಮಿಕ ಸಭೆಯ ಸಮ್ಮುಖ ವಹಿಸಿ ಅವರು ಆಶೀರ್ವಚನ ನೀಡಿದರು.

ಧಾರ್ಮಿಕ ವಿಶ್ವವಿದ್ಯಾಲಯಗಳಾದ ಮಠ, ಮಂದಿರಗಳು ಜ್ಞಾನ ವಿಕಾಸದ ಸಮರ್ಥ ಸಾಧಕ ಕೇಂದ್ರಗಳಾಗಿವೆ ಎಂದು ನುಡಿದರು.ಸಾನ್ನಿಧ್ಯ ವಹಿಸಿ ಮಾತನಾಡಿದ ಬಾಲೇಹೊಸೂರ ಶ್ರೀ ದಿಂಗಾಲೇಶ್ವರ ಸ್ವಾಮಿಜಿ, ವಿದೇಶಿಯರಿಗೆ ಭಾರತದ ಸಾಂಸ್ಕೃತಿಕ ಮೌಲ್ಯಗಳು, ಮಾನವೀಯ ಬದುಕು ಆಕರ್ಷಿಸಿದೆ.  ನಾಡು ನುಡಿ ಧರ್ಮ ಸಂಸ್ಕೃತಿಯನ್ನು ನಮ್ಮ ಬದುಕಿನ ಉನ್ನತಿಗಾಗಿ ರಕ್ಷಿಸಿಕೊಳ್ಳಬೇಕಾಗಿದೆ. ಮಹಾಪುರುಷರ ಆದರ್ಶಗಳು ಸದಾ ಕಾಲಕ್ಕೂ ನಮ್ಮ ಬದುಕಿಗೆ ಮಾರ್ಗದರ್ಶನ ಮಾಡಬಲ್ಲವುಗಳಾಗಿವೆ ಎಂದರು.ಗೊಟಗೋಡಿಕೊಪ್ಪ ಮುಕ್ತಿ ಮಠದ ತಪೋರತ್ನ ಶಿವಸಿದ್ಧಸೋಮೇಶ್ವರ ಶಿವಾಚಾರ್ಯ ಶ್ರಿಗಳು ಮಾತನಾಡಿ, ಧರ್ಮದ ಸಾರ ಅರಿತು ನಡೆಯಬೇಕು. ಬುದ್ಧಿ ಜೀವಿಗಳೆಂಬ ಹೆಸರಿನಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಕೊಲ್ಲಬಾರದು ಎಂದರು.ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಮಹಾಸ್ವಾಮಿಗಳು, ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದ ಉತ್ತರಾಧಿಕಾರ ಶಿವಬಸವದೇವರು ಸಮ್ಮುಖ ವಹಿಸಿದ್ದರು.ವಿಧಾನಸಭೆ ಮಾಜಿ ಉಪಸಭಾಪತಿ ಮನೊಹರ ತಹಸೀಲ್ದಾರ, ತಾ.ಪಂ ಸದಸ್ಯೆ ಸುಮಂಗಲಾ ದೊಡ್ಡಮನಿ, ಗ್ರಾ.ಪಂ ಅಧ್ಯಕ್ಷ ರಮೇಶಗೌಡ ಪಾಟೀಲ, ಕಸಾಪ ಜಿಲ್ಲಾ ಕಾರ್ಯದರ್ಶಿ ನಾಗರಾಜ ದ್ಯಾಮನಕೊಪ್ಪ, ಪ್ರಧಾನ ಅರ್ಚಕ ವೇದಮೂರ್ತಿ ಸಂಗಯ್ಯನವರು, ಜರ್ಮನಿ ದೇಶದ ಗೃಂಥಿ, ರಾಜೂ ಪೇಟಕರ, ನಾಗೇಂದ್ರ ತುಮರಿಕೊಪ್ಪ, ಸೋಮಶೇಖರ ಕೊತಂಬರಿ ಉಪಸ್ಥಿತರಿದ್ದರು. ಈರಣ್ಣ ದೊಡ್ಡಮನಿ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ದೊಡ್ಡಮನಿ ನಿರೂಪಿಸಿದರು. ರವಿ ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.