ಗುರುವಾರ , ಜೂನ್ 4, 2020
27 °C

ಸತ್ಯನಾರಾಯಣ ಮಿಸ್ಟರ್ ಜಯಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತ್ಯನಾರಾಯಣ ಮಿಸ್ಟರ್ ಜಯಕರ್ನಾಟಕ

ಕನಕಪುರ: ಜಯಕರ್ನಾಟಕ ಸಂಘಟನೆ ಇತ್ತೀಚೆಗೆ ಪಟ್ಟಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ `ಮಿಸ್ಟರ್ ಜಯಕರ್ನಾಟಕ ದೇಹಾದಾಢ್ಯ~ ಸ್ಪರ್ಧೆಯಲ್ಲಿ ದಾವಣಗೆರೆಯ ಸತ್ಯನಾರಾಯಣ `ಮಿಸ್ಟರ್ ಜಯಕರ್ನಾಟಕರಾಗಿ~ ಆಯ್ಕೆಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೆ.ಲವೀನ್ ಉತ್ತಮ ಪ್ರದರ್ಶನಕರಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.   ಸ್ಪರ್ಧೆಯನ್ನು ತೂಕಕ್ಕೆ ಅನುಗುಣವಾಗಿ 8 ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಯಿತು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕು ಮತ್ತು ಐದನೇ  ಸ್ಥಾನವನ್ನು ನೀಡಲಾಯಿತು. 55ಕೆ.ಜಿ. ವಿಭಾಗದಲ್ಲಿ ಬೆಳಗಾಂನ ಪ್ರಮೋದ್ ಪೊನ್ನಚ್ಚಿ ಪ್ರಥಮ, ತೌಸಿಪ್ ಮುಜವರ್ ದ್ವಿತೀಯ, ದಾವಣಗೆರೆ ಸಂಜಯ್.ಕೆ ತೃತೀಯ, ಉಡುಪಿ ರಾಜೇಂದ್ರ - ನಾಲ್ಕನೇ ಸ್ಥಾನ ಹಾಗೂ ಬೆಳಗಾವಿ ರಾಜಕುಮಾರ್ ಐದನೇ ಸ್ಥಾನ ಪಡೆದುಕೊಂಡರು.  60 ಕೆ. ಜಿ. ವಿಭಾಗದಲ್ಲಿ ಬೆಳಗಾಂನ ಪ್ರತಾಪ್ ಕಲ್‌ಕುಂದಿಕರ್(ಪ್ರಥಮ), ಉಡುಪಿಯ ಸಂದೀಪ್ ಪಾಲನ್(2), ಹರೀಶ್(3), ಶಶಿಕಾಂತ್(4), ಧಾರವಾಡದ ಮಹಮ್ಮದ್ ರಫೀಕ್(5). 65 ಕೆ.ಜಿ. ವಿಭಾಗದಲ್ಲಿ ಬೆಳಗಾಂನ ವಿಜಯ್‌ಗೌಡ(ಪ್ರಥಮ), ದಕ್ಷಿಣ ಕನ್ನಡದ ರಮೇಶ್ ಕೆ.ಆರ್(2), ಉಡುಪಿಯ ವರದರಾಜ್(3), ದಾರವಾಡದ ಸಾಧಿಕ್ ಮುಲ್ಲಾ(4), ಬೆಂಗಳೂರಿನ ಅಸ್ಲಾಂ(5), 70 ಕೆ.ಜಿ. ವಿಭಾಗದಲ್ಲಿ ದಾವಣಗೆರೆ ಹಜರತ್ ಆಲಿ(1), ಉಡುಪಿಯ ರಾಘವೇಂದ್ರ(2), ಬೆಳಗಾಂನ ಗಜಾನನ ಎಂ.(3) ಧಾರವಾಡದ ರಿಯಾಜ್ ಮಹಮ್ಮದ್(4), ಪಾರ್ಥ.ಪಿ.(5) 75.ಕೆ.ಜಿ. ವಿಭಾಗದಲ್ಲಿ ಉಡುಪಿಯ ಆನಂದ್(1), ಬೆಂಗಳೂರಿನ ಬಸವರಾಜು(2), ಬೆಳಗಾಂನ ಪಂಕಜ್ ರುತ್ಕೇಟಿ(3), ಧಾರವಾಡದ ಲೋಕೆಶ್.ವಿ(4). ಉಡುಪಿಯ ವಿಶ್ವನಾಥ್(5), 80 ಕೆ.ಜಿ. ವಿಭಾಗದಲ್ಲಿ ಉಡುಪಿಯ ಅನಿಲ್(1), ದಾರವಾಡದ ಕೌಶಿಕ್.ಕೆ, ಉಡುಪಿಯ ನಿತ್ಯಾನಂದ, ಮೈಸೂರಿನ ವಗೀಶ್.ಜೆ, ಬೆಂಗಳೂರಿನ ಧರ್ಮರಾಜ್.ಎಂ, 80 ಕೆ.ಜಿ. ಗೂ ಹೆಚ್ಚಿನ ವಿಭಾಗದಲ್ಲಿ ದಾವಣಗೆರೆ ಸತ್ಯಾನಾರಾಯಣ(1), ದಕ್ಷಿಣ ಕನ್ನಡದ ಲವೀನ್.ಕೆ(2), ಉಡುಪಿಯ ಅಶೋಕ್ ಬನಗೆರ(3), ಬೆಂಗಳೂರಿನ ಆರ್.ಸುರೇಶ್(4) ಮತ್ತು ಮಂಜುನಾಥ್.ಕೆ.ಆರ್(5)  ಕ್ರೀಡೆಯಲ್ಲಿ ಸ್ಥಳೀಯರಿಗೆ ಅವಕಾಶ ಕಲ್ಪಿಸಿಕೊಡಲು ತಾಲ್ಲೂಕು ಮಟ್ಟದ ಸ್ಪರ್ಧೆಯನ್ನು ನಡೆಸಲಾ ಯಿತು. ಅವಿನಾಶ್ (ಪ್ರಥಮ), ಮುಜಾಹಿದ್ ಪಾಶ (ದ್ವಿತಿಯ), ಶೇಖರ್ (ತೃತಿಯ), ಕಾಳಪ್ಪ .ಎಂ (ನಾಲ್ಕು) ಮತ್ತು ಅಕಮಲ್ ಪಾಶ ಐದನೆ ಸ್ಥಾನವನ್ನು ಗಳಿಸಿದ್ದಾರೆ.  ಸ್ಪರ್ಧಾ ವಿಜೇತರಿಗೆ ಶಾಸಕ ಡಿ.ಕೆ.ಶಿವಕುಮಾರ್, ಚಿತ್ರನಟರಾದ ದುನಿಯಾ ವಿಜಿ, ನೆನಪಿರಲಿ ಪ್ರೇಮ್, ಪ್ರೇಮಿಸಂ ಚೇತನ್‌ಚಂದ್ರ, ಮಿಸ್ಟರ್ ಇಂಡಿಯಾ ಖ್ಯಾತಿಯ ಪಾನಿಪುರಿ ಕಿಟ್ಟಿ, ಪ್ರಸಾದ್, ಚಲನಚಿತ್ರ ನಿರ್ಮಾಪಕ ಆರ್.ಶ್ರಿನಿವಾಸ್ ಸೇರಿದಂತೆ ವಿವಿಧ ಗಣ್ಯರು ಬಹುಮಾನ ವಿತರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.