ಗುರುವಾರ , ಏಪ್ರಿಲ್ 22, 2021
28 °C

ಸತ್ಯಬೋಧರ ಆರಾಧನಾ ಮಹೋತ್ಸವ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ಸತ್ಯಬೋಧ ಸ್ವಾಮಿಗಳ 226 ನೇ ಆರಾಧನಾ ಮಹೋತ್ಸವ ಹಾಗೂ ಜನ್ಮ ತ್ರಿಶತಮಾನೋತ್ಸವ ಕಾರ್ಯಕ್ರಮ ಸವಣೂರಿನ ಮೂಲ ಬೃಂದಾವನ ಮಠದಲ್ಲಿ ಶನಿವಾರದಿಂದ ಆರಂಭಗೊಂಡಿದೆ. ಶ್ರೀಮಠದ ಪೂಜಾಪರ್ಯಾಯಸ್ಥರಾದ ಗುರುರಾಜಾಚಾರ್ಯ ರಾಯಚೂರ ಹಾಗೂ ಪಂ.ರಂಗಾಚಾರ್ಯ ಗುತ್ತಲ ಅವರ ನೇತೃತ್ವದಲ್ಲಿ ಮೂರು ದಿನಗಳ ಆರಾಧನಾ ಮಹೋತ್ಸವ ಆರಂಭಗೊಂಡಿದೆ. ಕಾರ್ಯಕ್ರಮದ ಅನ್ವಯ ಪಂ. ರಂಗಾಚಾರ್ಯ ಗುತ್ತಲ ಅವರ ನೇತೃತ್ವದಲ್ಲಿ ಧನ್ವಂತರಿ ಹೋಮ ಹಾಗೂ ಬೃಹತಿ ಸಹಸ್ರಯಾಗವನ್ನು ಕೈಗೊಂಡು ಪೂರ್ಣಾಹುತಿ ಸಲ್ಲಿಸಲಾಯಿತು.ಪಂ. ವಾದಿರಾಜಾಚಾರ್ಯ ಚಂದಿ, ಆನಂದಾಚಾರ್ಯ ಅಧ್ಯಾಪಕ, ಅಡವಿ ಅಚಾರ್ಯರು, ಪಾಂಡುರಂಗಿ ಆಚಾರ್ಯರು, ತಿವಿಕ್ರಮಾಚಾರ್ಯ ಬಿದರಳ್ಳಿ, ರಾಮಾಚಾರ್ಯ ನಾಮಾವಳಿ, ಭೀಮಾಚಾರ್ಯ ರಾಯಚೂರ, ಗೋಪಾಲಾಚಾರ್ಯ ರಾಯಚೂರ ಸೇರಿದಂತೆ ಹಲವಾರು ಪಂಡಿತರು, ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸೋಮವಾರ ಉತ್ತರಾರಾಧನೆ ಅಂಗವಾಗಿ ಪಂ. ಸತ್ಯಧ್ಯಾನಾಚಾರ್ಯ ಕಟ್ಟಿ ಅವರಿಂದ ಬ್ರಹ್ಮಸೂತ್ರ ಭಾಷ್ಯ ಸಮನ್ವಯ ಅಧ್ಯಯನ ಮಂಗಳ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.