ಭಾನುವಾರ, ಜೂನ್ 13, 2021
22 °C

ಸದ್ದಿಲ್ಲದೆ ತವರಿಗೆ ಮರಳಿದ ಟೀಮ್ ಇಂಡಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ) : ಟೀಮ್ ಇಂಡಿಯಾ ಆಟಗಾರರು ಭಾನುವಾರ ಸ್ವದೇಶಕ್ಕೆಮರಳಿದ್ದಾರೆ.  ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸೋತು ಹಾಗೂ ತ್ರಿಕೋನ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದ ಭಾರತದ ತಂಡದ ಆಟಗಾರರು ಸದ್ದಿಲ್ಲದೆ ಮನೆಗೆ ಮರಳಿದ್ದಾರೆ.

ಭಾರತ ತಂಡದ ಆಟಗಾರರಾದ ಮಹೇಂದ್ರ ಸಿಂಗ್ ದೋನಿ, ವಿರಾಟ್ ಕೊಹ್ಲಿ,ವಿರೆಂದ್ರ ಸೆವಾಗ್, ಗೌತಮ್ ಗಂಭೀರ್, ಸುರೆಶ್ ರೈನಾ, ಪ್ರವೀನ್ ಕುಮಾರ್, ಮತ್ತು ರಾಹುಲ್ ಶರ್ಮ, ರವರು  ಸಿಂಗಾಪುರ ಮಾರ್ಗವಾಗಿ ನವದೆಹಲಿಯ ಇಂದಿರಾ ಗಾಂಧಿ  ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ  ಭಾನುವಾರ ಮುಂಜಾನೆ(ಬಂದ್ದಿಳಿದರು) ತಲುಪಿದರು. ನಿಗಧಿತ ಸಮಯಕ್ಕಿಂತ ತಡವಾಗಿ ಬಂದ ಆಟಗಾರರು  ಮಾಧ್ಯಮದವರೊಂದಿಗೆ ಮಾತನಾಡದೆ ತೆರಳಿದರು.

ನೇರವಾಗಿ ಮುಂಬೈಗೆ ಬಂದ ತೆಂಡೂಲ್ಕರ್, ಜಹೀರ್, ಉಮೇಶ್ ಯಾದವ್, ಛತ್ರಪತಿ ಶಿವಾಜಿ ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ತಲುಪಿದರು ಹಾಗೂ ಸ್ವೀನ್ನರ್ ರವೀಚಂದ್ರನ್ ಅಶ್ವಿನ್, ಚೆನೈಗೆ ಭಾನುವಾರ ತಲುಪಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.