ಗುರುವಾರ , ಮೇ 13, 2021
34 °C

ಸನದುದಾನ ಮಹಾ ಸಮ್ಮೇಳನ 27ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಕುಂಬ್ರದ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ವತಿಯಿಂದ ನಡೆಸಲ್ಪಡುವ ಜಾಮಿಯಾ ಅಲ್ ಕೌಸರ್ ಶರೀಅತ್ ಕಾಲೇಜಿನ ದಶಮಾನೋತ್ಸವ ಮತ್ತು ಪ್ರಥಮ ಸನದುದಾನ ಮಹಾ ಸಮ್ಮೇಳನ ಇದೇ 27ರಿಂದ 29ರವರೆಗೆ ಕುಂಬ್ರ ಶರೀಅತ್ ಕಾಲೇಜು ವಠಾರದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ ಆಕರ್ಷಣ್ ತಿಳಿಸಿದರು.ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 27 ರಂದು ಮಧ್ಯಾಹ್ನ ಉದ್ಘಾಟನಾ ಸಮಾರಂಭ ನಡೆಯಲಿದೆ. ಪುತ್ತೂರು ಮುದರ‌್ರಿಸ್ ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಉದ್ಘಾಟಿಸುವರು. ಬಳಿಕ `ಕೆಐಸಿ ಗಲ್ಫ್ ಸಂಗಮ~ ನಡೆಯುವುದು. ಕೆಐಸಿಯ ಯು.ಎ.ಇ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷ ಮೊಯಿದೀನ್ ಕುಟ್ಟಿ ದಿಬ್ಬಾ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಸಮಿತಿಯ ಗೌರವ ಸಲಹೆಗಾರ ನೌಷಾದ್ ಫೈಝಿ ದುಬೈ ಉದ್ಘಾಟಿಸುವರು ಎಂದು ಅವರು ಹೇಳಿದರು. 28ರಂದು ನಡೆಯುವ ಸಮಾವೇಶವನ್ನು ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಉದ್ಘಾಟಿಸುವರು, ಸಮಸ್ತ ಕೇಂದ್ರ ಮುಸಾವರ ಸದಸ್ಯ ಎಂ.ಎ.ಖಾಸಿಂ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಬಳಿಕ ಅಲ್‌ಹಾಜ್ ಅತ್ತಿಪಟ್ಟ ಉಸ್ತಾದ್ ಅವರ ನೇತೃತ್ವದಲ್ಲಿ ದ್ಸಿಕ್ರ್ ದುಅಃ ಆಧ್ಮಾತ್ಮಿಕ ಮಜ್ಲಿಸ್ ನಡೆಯುವುದು ಎಂದುರು.29ರಂದು ಪೂರ್ವಾಹ್ನ ನಡೆಯುವ `ಸ್ನೇಹ ಸಂಗಮ~ ಕಾರ್ಯಕ್ರಮವನ್ನು ಬೆಳ್ತಂಗಡಿಯ ಉಮರ್ ಕುಂಞಿ ಮುಸ್ಲಿಯಾರ್ ಉದ್ಘಾಟಿಸುವರು. `ಉಲಮಾ  ಕನ್ವೆಂಶನ್~ ಕಾರ್ಯಕ್ರಮವನ್ನು ಅಬ್ದುಲ್ ಖಾದಿರ್ ಮುಸ್ಲಿಯಾರ್ ಪೈಯ್ಯಕ್ಕಿ ಉದ್ಘಾಟಿಸುವರು ಎಂದರು. ಸಂಜೆ ಇಸ್ಲಾಮಿಕ್ ರೀಸರ್ಚ್ ಸೆಂಟರಿಗೆ  ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಶಿಲಾನ್ಯಾಸ ನೆರವೇರಿಸುವರು.ಸಮಾರೋಪ ಸಮಾರಂಭವನ್ನು ಸಯ್ಯದ್ ಹಮೀದ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸುವರು. ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಸನದುದಾನ ಭಾಷಣ ಮಾಡುವರು. ಮಾಜಿ ಸಚಿವ ರೋಶನ್ ಬೇಗ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು.ಬಿ.ಎ.ರಹಿಮಾನ್ ಬಪ್ಪಳಿಗೆ, ಅಬ್ದುಲ್ ರಹಿಮಾನ್ ಅಝಾದ್, ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಎಸ್.ಎಂ. ಬಾವಾ ಕೂರ್ನಡ್ಕ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಸುದ್ದಿಗೋಷ್ಠಿಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.