ಶನಿವಾರ, ಮೇ 8, 2021
27 °C

ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರ: ಆಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಶಿಕ್ಷಕರು ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಆಶಾ ಪಟ್ಟಣಶೆಟ್ಟಿ ಹೇಳಿದರು.ಇನ್ನರ್ ವೀಲ್ ಸಂಸ್ಥೆ ವತಿಯಿಂದ ಸ್ಥಳೀಯ ರೋಟರಿ ಐ ಕೇರ್ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಿಕ್ಷಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕು. ಸರ್ವಪಲ್ಲಿ ರಾಧಾಕೃಷ್ಣ ನರವರ ತತ್ವಾದರ್ಶಗಳನ್ನು ಪ್ರತಿಯೊ ಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರೇಮಾ ಗುಳಗೌಡರ ಮಾತನಾಡಿ, ಎಲ್ಲರೂ ಶಿಕ್ಷಕರನ್ನು ಗೌರವಯು ತವಾಗಿ ಕಾಣಬೇಕು. ಶಿಕ್ಷಕ ವೃತ್ತಿ ಪವಿತ್ರವಾಗಿದ್ದು ಅದನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು.ಶಾಂತಾ ನಿಂಬಣ್ಣವರ, ಉಮಾ ಕವಳಿಕಾಯಿ, ಸರೋಜಾ ಆಲೂರ, ನಾಗರತ್ನಾ ಪಾಟೀಲ, ಮೀನಾಕ್ಷಿ ಸಜ್ಜನರ ಮತ್ತಿತರರು ಹಾಜರಿದ್ದರು. ಕವಿತಾ ದಂಡಿನ ನಿರೂಪಿಸಿದರು. ಬಿ.ಜಿ. ಅಣ್ಣಗೇರಿ ಗುರುಗಳಿಗೆ ಸನ್ಮಾನ: ಶಿಕ್ಷಕರ ದಿನವನ್ನು ಆಚರಿಸಿದ ಇನ್ನರ್‌ವೀಲ್ ಸಂಸ್ಥೆ ಸದಸ್ಯರು ನಿವೃತ್ತ ಶಿಕ್ಷಕ ಬಿ.ಜಿ. ಅಣ್ಣಿಗೇರಿ ಅವರ ಆಶ್ರಮಕ್ಕೆ ತೆರಳಿ ಸನ್ಮಾನಿಸಿ, ಗೌರವ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ರಾಧಾಕೃಷ್ಣ ನರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಡಾ. ಐ.ಐ. ಪಟ್ಟಣಶೆಟ್ಟಿ ಮಾತನಾಡಿ, ಶಿಕ್ಷಕರು ತನ್ನ ಮಾನವೀಯತೆ, ಹೃದಯ ವಂತಿಕೆಯಿಂದ ಆದರ್ಶ ಎನಿಸಿ ಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕ ರಾದವರು ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಶಕುಂತಲಾ ಸಿಂಧೂರ, ಪ್ರೇಮಾ ಗುಳಗೌಡರ, ನಾಗರತ್ನಾ ಪಾಟೀಲ, ಕವಿತಾ ದಂಡಿನ, ಕಾವ್ಯಾ ದಂಡಿನ, ಪ್ರೇಮಾ ಮೇಟಿ, ಮೀನಾಕ್ಷಿ ಸಜ್ಜನರ, ಶಿಕ್ಷಕ ಕಮತರ, ಐ.ಕೆ. ಕಮ್ಮಾರ, ಸರೋಜಿನಿ ಹಕ್ಕಾಪಕ್ಕಿ, ಪ್ರೇಮಾ ಹಂದಿಗೋಳ, ನಾಗರತ್ನ ಮಾರನಬಸರಿ, ವಿಜಯಲಕ್ಷ್ಮೀ ಹೊಳ್ಳಿಯವರ, ಸುವರ್ಣ ವಸ್ತ್ರದ, ಸೌಮ್ಯ ಕಾಮತ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.