ಹೊಸಪೇಟೆ: ಪ್ರತಿಯೊಂದು ಸಂಘಟನೆ ಗಳು ತಮ್ಮ ಸಮಾಜದ ಎಲ್ಲರೂ ಶಿಕ್ಷಣ ಪಡೆಯುವಂತೆ ನೋಡಿಕೊಳ್ಳಬೇಕು ಆ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾ ಣಕ್ಕೆ ಕಾರಣವಾಗಿಬೇಕು ಎಂದು ಕಾನೂನು ಸಚಿವ ಎಸ್. ಸುರೇಶಕುಮಾರ ತಿಳಿಸಿದರು.

ಸ್ಥಳೀಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಹೊಸಪೇಟೆ ತಾಲ್ಲೂಕು ಬ್ರಾಹ್ಮಣ ಸಂಘದ ಆಶ್ರಯದಲ್ಲಿ ನೂತನವಾಗಿ ಆರಂಭ ವಾದ ಬ್ರಾಹ್ಮಣ ಯುವ ವೇದಿಕೆ ಮತ್ತು ಆಚಾರ್ಯ ಚಾಣುಕ್ಯ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘಗಳ ಉದ್ಘಾಟನಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಘಟನೆಗಳು ತಮ್ಮ ಸಮಾಜದ ಎಲ್ಲಾ ವರ್ಗದ ಜನರ ಕ್ಷೇಮಾಭಿವೃದ್ಧಿಗೆ ಶ್ರಮಿಸಬೇಕು ನೈತಿಕತೆಯನ್ನು ಎತ್ತಿಹಿಡಿಯುವ ಕೆಲಸ ಸಂಘಟನೆಗಳಿಂದ ಆಗಬೇಕು ಎಂದರು.

ಸಮಾರಂಭದಲ್ಲಿ ಪಾಲ್ಗೊಂಡ ಜೆಡಿಎಸ್ ನಾಯಕ ವೈಎಸ್ವಿ ದತ್ತಾ ಮಾತನಾಡಿ ನಾವು ನಮ್ಮ ಸಂಸ್ಕೃತಿಯನ್ನು ಗೌರವಿಸುವ ಜೊತೆಗೆ ಎಲ್ಲಾ ಸಮುದಾಯಗಳ ಒಳಿತಿಗಾಗಿ ಶ್ರಮಿಸುವ ಮೂಲಕ ಬ್ರಾಹ್ಮಣ ಎಂದರೆ ಸಮಾಜ ಸುಧಾರಕ ಎಂಬುವುದನ್ನು ಸಾಬೀತು ಪಡಿಸಬೇಕು ಎಂದರು.

ಆಶೀರ್ವಚನ ನೀಡಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ನಮ್ಮ ಆಂತರಿಕ ಕಲಹಗಳು ಹಿಂದೂ ಸಮಾಜದ ಮೇಲೆ ದಾಳಿ ಮಾಡುವಂತೆ ಮಾಡಿ ಹಿಂದೂ ಸಮಾಜದ ಅಸ್ಥಿತ್ವಕ್ಕೆ ಅಡ್ಡಿಯಾಗಿವೆ. `ನಮ್ಮ ಸಂಘಟನೆಯಿಂದ ದಲಿತ ಸಂಘಟನೆಗಳವರೆಗೂ ಎಲ್ಲ ಸಮುದಾಯಗಳನ್ನು ಸಂಘಟಿಸಿ ಹಿಂದು ತ್ವದ ರಕ್ಷಣೆಗೆ ಬ್ರಾಹ್ಮಣ ಸಂಘಟನೆ ನಾಯಕತ್ವ ವಹಿಸುವಂತಾಗಬೇಕು~ ಇತಂಹ ಜವಾಬ್ದಾರಿ ನಿರ್ವಹಿಸಲು ನಾವು ಸಮರ್ಥರು ಎಂದರು.

ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯ ದರ್ಶಿ ಎ.ಎಸ್.ಜಯಸಿಂಹ, ಟಿಟಿಡಿ ದಾಸ ಸಾಹಿತ್ಯ ಸಂಚಾಲಕ ಜಿ.ರಾಮ ರಾವ್, ನಿರ್ದೇಶಕ ಬ.ಲ.ಸುರೇಶ, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ದೀಪಕ್ಕುಮಾರಸಿಂಗ್, ಚಿತ್ರನಟ ಅಜಯರಾವ್, ಡಾ.ಕೃಷ್ಣಕಟ್ಟಿ, ಚಂದ್ರಶೇಖರ ಗುಡಿ, ಯುವ ವೇದಿಕೆಯ ಅಧ್ಯಕ್ಷ ನರಸಿಂಹಮೂರ್ತಿ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಾರಿ ದೀಕ್ಷಿತ್ ಅನಂತ ಪದ್ಮನಾಭ, ಸೇರಿದಂತೆ ಇತರರು ಹಾಜರಿದ್ದರು.
ಹೊಸಪೇಟೆ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಸೀನಂ ಭಟ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸನ್ಮಾನ ಮೈಸೂರು ರಾಮಚಂದ್ರ ಆಚಾರ್ಯ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.