ಭಾನುವಾರ, ಮೇ 16, 2021
24 °C

ಸಮಾಜ ವಿರೋಧಿ ಕೃತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರಿನಲ್ಲಿ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿಯವರ ಮೇಲೆ ಸಗಣಿ ಬಳಿದು ಅವಮಾನಿಸಿರುವುದು ಖಂಡನೀಯ ಸಂಗತಿ.ತಮ್ಮ ನಿರ್ಭೀತ ವೈಚಾರಿಕ ಚಿಂತನೆಗಳ ಕಾರಣಕ್ಕಾಗಿ ಬಹಳ ಕಾಲದಿಂದಲೂ ಹಲವು ಬಗೆಯ ಹಲ್ಲೆಗಳಿಗೆ ಒಳಗಾಗಿರುವ ಪಟ್ಟಾಭಿಯವರನ್ನು ಈ ರೂಪದಲಿ ಅವಮಾನಿಸಿರುವುದು ಅವರ ಮೇಲಿನ ದೈಹಿಕ ಹಲ್ಲೆಗೆ ಸಮನಾಗಿದೆ.ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಬಜರಂಗದಳದ ಕಾರ್ಯಕರ್ತರು ಈ ಪ್ರಕರಣದಲ್ಲಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡು ನೀಡಿರುವ ಹೇಳಿಕೆ ಗಮನಿಸಿದರೆ ಅವರಿಗೆ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣಗಳಾದ ಮುಕ್ತ ಚಿಂತನೆ, ಅಭಿಪ್ರಾಯ ಭೇದ ಮುಂತಾದವುಗಳ ಪ್ರಾಥಮಿಕ ಜ್ಞಾನವೂ ಇಲ್ಲವೆನಿಸುತ್ತಿದೆ. ಮತ್ತು ಅವರ ವಿರೋಧ ಎಷ್ಟು ಉದ್ದೇಶಪೂರ್ವಕ ಎಂಬುದು ಸ್ಪಷ್ಟವಾಗುತ್ತದೆ.ಬಜರಂಗದಳದ ವಿಚಾರಧಾರೆಯನ್ನು ಬೆಂಬಲಿಸುವ ತಮ್ಮದೇ ಪಕ್ಷದ ನಾಯಕರು ಬ್ರಹ್ಮಾಂಡ ಭ್ರಷ್ಟತೆ, ಸ್ವಜನ ಪಕ್ಷಪಾತ, ಅತ್ಯಾಚಾರ, ವಿಧಾನ ಸೌಧದಲ್ಲಿ ನೀಲಿಚಿತ್ರ ವೀಕ್ಷಣೆಯಂಥ ನಿರ್ಲಜ್ಜ ಕಾನೂನುಬಾಹಿರ ವರ್ತನೆಗಳಲ್ಲಿ ಮುಳುಗಿಹೋಗಿದ್ದರೂ ಅವರ ಬಗ್ಗೆ ಚಕಾರವೆತ್ತದೆ, ತನಗೆ ಸರಿಯೆನಿಸಿದ ವಿಚಾರಗಳನ್ನು ಹೇಳಿದ ಮಾತ್ರಕ್ಕೆ ಪಟ್ಟಾಭಿಯಂಥವರನ್ನು ಹೀಗೆ ಸಾರ್ವಜನಿಕವಾಗಿ ಅವಮಾನಿಸಿರುವುದು ಸಂಘ ಪರಿವಾರದ  ವಿವೇಕಹೀನ ಚಿಂತನೆಗೆ ಸಾಕ್ಷಿ.ಇಂಥ ಕೃತ್ಯ ಎಸಗುವವರನ್ನು ಸಮಾಜ ವಿರೋಧಿಗಳೆಂದು ಪರಿಗಣಿಸಿ ಅವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.