ದೇವನಹಳ್ಳಿ: ಎಲ್ಲಾ ಸಮುದಾಯದಲ್ಲಿಯೂ ಶೋಷಿತರಿದ್ದು, ಈ ಶೋಷಿತ ವರ್ಗ ಸ್ವಾಭಿಮಾನದಿಂದ ಬದುಕದಿದ್ದರೆ ಪ್ರಜಾಪ್ರಭುತ್ವದ ಪ್ರಗತಿ ಸಾಧ್ಯವಿಲ್ಲ ಎಂದು ಸಾಹಿತಿ ಡಾ. ಎಲ್. ಹನುಮಂತಯ್ಯ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಶನಿವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 121ನೇ ಹಾಗೂ ಬಾಬು ಜಗಜೀವನ್ ರಾಮ್ ಅವರ 105ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದಲ್ಲಿ ಸಮಾನತೆಯ ಉಲ್ಲೇಖವಿದ್ದರೆ ಸಾಲದು. ಅದು ಪೂರ್ಣ ಜಾರಿಯಾಗಬೇಕು. ಸರ್ಕಾರವು ಶಿಕ್ಷಣಕ್ಕೆ ಪ್ರಾಮುಖ್ಯ ನೀಡುತ್ತಿದ್ದರೂ ದೇಶದಲ್ಲಿ 40ಕೋಟಿ ಮಂದಿ ಅನಕ್ಷರಸ್ಥರಿದ್ದಾರೆ. ಸಮುದಾಯಗಳ ಅಭಿವೃದ್ಧಿಗೆ ಸರ್ಕಾರದ ಅನುದಾನವನ್ನು ನಂಬಿ ಕೂರಬಾರದು. ಶೋಷಿತರು ತಮ್ಮಲ್ಲಿ ಸ್ವಾಭಿಮಾನವನ್ನು ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಗಜೀವನ್ ರಾಮ್ ಅವರು ಕೃಷಿ ಸಚಿವರಾಗಿದ್ದ ವೇಳೆ ದೇಶದಲ್ಲಿ ಬರ ಪರಿಸ್ಥಿತಿ ಉಂಟಾಗಿತ್ತು. ಈ ಸಂದರ್ಭದಲ್ಲಿ ಅವರು ಕೈಗೊಂಡ ಸುಧಾರಣೆ ಮತ್ತು ಕ್ರಮಗಳು ಶ್ಲಾಘನೀಯ. ವೈಜ್ಞಾನಿಕ ಕೃಷಿ ಪದ್ಧತಿಯು ದೇಶದಲ್ಲಿ ಮೊಳಕೆಯೊಡೆಯಲು ಜಗಜೀವನ್ ರಾಮ್ ಅವರೇ ಕಾರಣ ಎಂದು ಹೇಳಿದರು.

ಶಾಸಕ ಕೆ.ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಜಿ.ಚಂದ್ರಣ್ಣ ಮತ್ತು ಮುನಿ ನರಸಿಂಹಯ್ಯ ಮಾತನಾಡಿದರು.

ತಹಶೀಲ್ದಾರ್ ಎಲ್.ಸಿ.ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಪುರಸಭೆ ಅಧ್ಯಕ್ಷೆ ರತ್ನಮ್ಮ, ತಾ.ಪಂ.ಅಧ್ಯಕ್ಷ ಬಿ.ಕೆ.ಶಿವಪ್ಪ, ಜಿ.ಪಂ.ಸದಸ್ಯ, ಬಿ.ರಾಜಣ್ಣ, ಎಂ.ಬೀರಪ್ಪ, ಮಾಜಿ ಶಾಸಕ ಪಿ.ಸಿ.ಮುನಿಶ್ಯಾಮಪ್ಪ, ಮರಿಯಪ್ಪ, ಕಿಮ್ಸ ಅಧ್ಯಕ್ಷ ಬಿ.ಮುನೇಗೌಡ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ನಾಗೇಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಚಿನ್ನಪ್ಪ, ಎಸ್ಟಿ ಘಟಕ ಅಧ್ಯಕ್ಷ ವೆಂಕಟೇಶ್, ದಸಂಸ ಜಿಲ್ಲಾ ಸಂಚಾಲಕ ಕಾರಹಳ್ಳಿ ಶ್ರಿನಿವಾಸ್, ತಾಲ್ಲೂಕು ಸಂಚಾಲಕ ತಿಮ್ಮರಾಯಪ್ಪ, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಮಾರಪ್ಪ, ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಜಿ.ನಾರಾಯಣ ಸ್ವಾಮಿ, ಡಿ.ಆರ್.ನಾರಾಯಣ ಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಪಿಳ್ಳಮುನಿಶ್ಯಾಮಪ್ಪ ಇತರರು ಇದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಎಂ.ರಾಮಚಂದ್ರಪ್ಪ, ಗೋಪಾಲ್, ಬುಳ್ಳಹಳ್ಳಿ ರಾಜಪ್ಪ, ಡಾ. ಕೆ.ಜಗದೀಶ್ವರ್, ಎಂ.ನಾರಾಯಣಪ್ಪ, ವೀರಭದ್ರಪ್ಪ, ಚನ್ನಪ್ಪಯ್ಯ, ಎಚ್.ಕೆ.ವೆಂಕಟೇಶಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಪ್ರವಾಸಿ ಮಂದಿರದಿಂದ ವಿವಿಧ ಜನಪದ ಕಲಾ ತಂಡಗಳು ಪಟ್ಟಣದ ಡಾ. ಅಂಬೇಡ್ಕರ್ ಪುತ್ಥಳಿವರೆಗೆ ಮೆರವಣಿಗೆ ನಡೆಸಿದವು.

ವಿವಿಧೆಡೆ ಜಯಂತಿ ಆಚರಣೆ
ಆನೇಕಲ್: ತಾಲ್ಲೂಕಿನಾದ್ಯಂತ ಡಾ.ಬಿ.ಆರ್.ಅಂಬೇಡ್ಕರ್ ಅವರ 121ನೇ ಜನ್ಮದಿನಾಚರಣೆಯನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.

ಅಂಬೇಡ್ಕರ್ ಅವರ ಭಾವಚಿತ್ರವನ್ನು ಮುತ್ತಿನ ಪಲ್ಲಕ್ಕಿಯಲ್ಲಿಟ್ಟು ಕರ್ನಾಟಕ ಜನಾಂದೋಲನಾ ಸಂಘಟನೆಯ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.

ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಕರ್ಪೂರು, ಹೆನ್ನಾಗರ, ಹಾರೋಹಳ್ಳಿ, ಅತ್ತಿಬೆಲೆ, ಹೆಚ್.ಹೊಸಹಳ್ಳಿ, ಗೆರಟಿಗನಬೆಲೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಅರವಟ್ಟಿಗೆ, ಅನ್ನದಾನ ನಡೆಸುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಯುವ ಕಾಂಗ್ರೆಸ್ ಸಮಿತಿ: ಆನೇಕಲ್ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ದಿನಾಚರಣೆಯ ಪ್ರಯುಕ್ತ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಮಚಂದ್ರ ಉದ್ಘಾಟಿಸಿದರು.

ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದರೆ ಸಾಲದು ಜೊತೆಗೆ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.

ಯುವ ಕಾಂಗ್ರೆಸ್ ಉಪಾಧ್ಯಕ್ಷ ಎ.ಎನ್.ನರೇಂದ್ರ ಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಲಿಂಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರಾಜಣ್ಣ, ಮುಖಂಡರಾದ ರಾಕೇಶ್, ಕೇಶವ ಮೂರ್ತಿ, ಸಿ.ಕೆ.ಚಿನ್ನಪ್ಪ, ಅಚ್ಯುತರಾಜು, ಬಿ.ಪಿ.ರಮೇಶ್ ಇತರರು ಹಾಜರಿದ್ದರು.

ಪ್ರಜಾ ವಿಮೋಚನಾ ಚಳವಳಿ (ಸಮತಾವಾದ): ಸಂಘಟನೆಯ ಕಚೇರಿಯಲ್ಲಿ ಪಿವಿಸಿ (ಎಸ್)ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ವಿಭಾಗೀಯ ಅಧ್ಯಕ್ಷ ಇಂಡ್ಲವಾಡಿ ಬಸವರಾಜು, ಅರೇಹಳ್ಳಿ ಅಶ್ವತ್ಥ್, ಕೊಪ್ಪ ರಾಮಾಂಜನಿ, ಆರ್.ವೆಂಕಟೇಶ್, ರಾಮಸಾಗರ ಯಲ್ಲಪ್ಪ, ಆದೂರು ಲೋಕೇಶ್, ಎಸ್.ಬಾಬು, ಚಂದ್ರಾರೆಡ್ಡಿ ಇತರರು ಹಾಜರಿದ್ದರು.

ಕರ್ನಾಟಕ ಜನಾಂದೋಲನಾ ಸಂಘಟನೆ:
ಸಂಘಟನೆಯ ವತಿಯಿಂದ ಏಳು ಪಲ್ಲಕ್ಕಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕುಳ್ಳರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಮರಿಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್, ಆನಂದ ಚಕ್ರವರ್ತಿ, ಬೆಳ್ಳತ್ತೂರು ವೆಂಕಟೇಶ್, ಕೆ.ಸಿ.ನಾಗರಾಜು, ಬೆಟ್ಟಪ್ಪ, ದೊಡ್ಡಹಾಗಡೆ ಕೃಷ್ಣಪ್ಪ, ಎಲ್ಐಸಿ ವೆಂಕಟೇಶ್, ಮುನಿರಾಮ್ ಮತ್ತಿತರರು ನೇತೃತ್ವ ವಹಿಸಿದ್ದರು.

ಗಣ್ಯರ ತತ್ವ: ಅರಿವು ಮೂಡಿಸಿ
ದೇವನಹಳ್ಳಿ: ಬಲಿಷ್ಠ ಪ್ರಜಾಪ್ರಭುತ್ವದ ಹರಿಕಾರ ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಅವರ ಆದರ್ಶ ಮತ್ತು ತತ್ವಗಳ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಮುಖ್ಯ ಶಿಕ್ಷಕ ಆರ್.ನಟೇಶ್ ತಿಳಿಸಿದರು. ತಾಲ್ಲೂಕಿನ ಆಲೂರು ದುದ್ದನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಬಿಆರ್ ಅಂಬೇಡ್ಕರ್ ಜನ್ಮದಿನಾಚಾರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಕ ಶೋಷಿತ ಸಮುದಾಯಕ್ಕೆ ನೀಡಿದ ಗಣ್ಯರ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಪ್ರತಿ ಮಗು ಶಿಕ್ಷಣ ಪಡೆದಾಗ ಅನಕ್ಷರತೆ ಹೋಗಲಾಡಿಸಲು ಸಾಧ್ಯ ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಎ.ಸತೀಶ್ ಮಾತನಾಡಿ, ರಾಷ್ಟ್ರ ನಾಯಕರ ದಿನಾಚರಣೆಯಿಂದ ವಿದ್ಯಾರ್ಥಿಗಳಲ್ಲಿ ಅಭಿಮಾನ ಹೆಚ್ಚಲಿದೆ ಎಂದರು. ಗ್ರಾ.ಪಂ ಸದಸ್ಯ ವಿ.ಮುನಿರಾಜು, ವಿಎಸ್ಎಸ್ಎನ್ ಬ್ಯಾಂಕ್ ಮಾಜಿ ಅಧ್ಯಕ್ಷ ರಂಗಸ್ವಾಮಿ, ಶಿಕ್ಷಕಿ ಶಶಿಕಲಾ, ಕಮಲಾ, ವಿನೋದ, ಮುಖಂಡ ಬೀಸೆಗೌಡ, ವಿಜಯಲಕ್ಷ್ಮಿ, ಬಿ.ಗಂಗಾಧರಯ್ಯ ಇದ್ದರು.

ಕೃಷಿ ಇಲಾಖೆ ಸಹಾಯಕ ತಿಮ್ಮರಾಯ ಸ್ವಾಮಿ, ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿದರು. ಮುಖಂಡ ಚಂದ್ರಶೇಖರ್ ವಿದ್ಯಾರ್ಥಿಗಳೆಲ್ಲರಿಗೂ ಸಮವಸ್ತ್ರ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.