ಸೋಮವಾರ, ಮೇ 25, 2020
27 °C

ಸಮಾನತೆ ಸರ್ಕಾರದ ಧ್ಯೇಯವಾಗಲಿ: ಪೇಜಾವರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಎಲ್ಲ ಜಾತಿ, ಧರ್ಮಗಳನ್ನು ಸರ್ಕಾರ ಸಮಾನವಾಗಿ ಕಾಣಬೇಕು. ಅವಕಾಶಗಳು ಎಲ್ಲರಿಗೂ ಸಮಾನವಾಗಿ ದೊರೆಯಬೇಕು. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ಭೇದಭಾವ ಮಾಡಬಾರದು ಎಂದು ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದರು. ನಗರದಲ್ಲಿ ಶನಿವಾರ ಜಯದೇವ ಮುರುಘರಾಜೇಂದ್ರ ಶ್ರೀಗಳ 54ನೇ ಸ್ಮರಣೋತ್ಸವದಲ್ಲಿ ‘ಧರ್ಮ ಮತ್ತು ರಾಜಕಾರಣ’ ಕುರಿತು ಅವರು ಮಾತನಾಡಿದರು.ಎಲ್ಲ ವ್ಯವಹಾರಗಳಿಗೂ ಧರ್ಮ ಚೈತನ್ಯದ ಸಾರ. ಎಲ್ಲ ಕ್ಷೇತ್ರಗಳಿಗೆ ಅನ್ವಯಿಸುವ ನೈತಿಕ ಮೌಲ್ಯಗಳೇ ಧರ್ಮ. ಮಠಾಧೀಶರು ರಾಜಕಾರಣದಿಂದ ದೂರ ಇರಬೇಕು. ಧರ್ಮ ರಾಜಕಾರಣದಲ್ಲಿ ಬೆರೆಯದೇ ರಾಜಕಾರಣಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವಾಗಬೇಕು ಎಂದು ಸೂಚಿಸಿದರು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ಇತರ ಸಂಸ್ಥೆಗಳ ನಡುವೆ ಭೇದ ಮಾಡಬಾರದು. ಅಲ್ಪಸಂಖ್ಯಾತರಿಗೆ ಧಾರ್ಮಿಕ ಯಾತ್ರೆ ಕೈಗೊಳ್ಳಲು ಸರ್ಕಾರ ಧನಸಹಾಯ ನೀಡುವಂತೆ ಕಾಶಿ, ವಾರಣಾಸಿಗಳಿಗೆ ಹೋಗಲು ಹಿಂದುಗಳಿಗೂ ಧನ ಸಹಾಯ ನೀಡಬೇಕು ಎಂದು ಅಭಿಪ್ರಾಯಪಟ್ಟರು. ವಿದೇಶಗಳಲ್ಲಿ ಸಂಗ್ರಹಿಸಿರುವ ಅಕ್ರಮ ಹಣವನ್ನು ತರುವ ಪ್ರಯತ್ನವನ್ನು ರಾಜಕಾರಣಿಗಳು ಮಾಡಬೇಕು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.