ಶನಿವಾರ, ಏಪ್ರಿಲ್ 17, 2021
28 °C

ಸಮೀಕ್ಷೆ ಬಿಡುಗಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ 2007-08ರಲ್ಲಿ ಸಮೀಕ್ಷೆ ಮಾಡ ಲಾಗಿರುವ ದೇವದಾಸಿ ಮಹಿಳೆಯರ ಹೊಸ ಸರ್ವೆ ಪಟ್ಟಿಯನ್ನು ಅನು ಮೋದನೆ ಮಾಡಿ ಕೂಡಲೆ ಬಿಡುಗಡೆ ಮಾಡುವಂತೆ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಬಿ.ಮಾಳಮ್ಮ ಆಗ್ರಹಿಸಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ಸಂಘದ ರಾಜ್ಯ ಸಮಿತಿಯ ನೇತೃತ್ವ ದಲ್ಲಿ ನಡೆಸಿರುವ ಹೋರಾಟದ ಫಲವಾಗಿ 2008ರಲ್ಲಿ ರಾಜ್ಯ ದಾದ್ಯಂತ ಇರುವ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ನಡೆಸಲಾಗಿದೆ. ಆದರೆ ಹೊಸ ಸರ್ವೆ ಪಟ್ಟಿಯನ್ನು ಅನುಮೋದನೆ ಮಾಡಿ ಬಿಡುಗಡೆ ಮಾಡಲು ಸರ್ಕಾರ ವಿಳಂಬ  ಮಾಡುತ್ತಿದೆ ಎಂದು ದೂರಿದರು.



ಸಮಾಜದ ಅನಿಷ್ಟ ದೇವದಾಸಿ ಪದ್ಧತಿಗೆ ಬಡ ದಲಿತ ಮಹಿಳೆಯರು ಬಲಿಯಾಗಿದ್ದಾರೆ. ಇವರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಶ್ರೇಯೋಭಿವೃದ್ಧಿಗೆ ಪಿಂಚಣಿ, ಭೂಮಿ, ನಿವೇಶನ, ವಸತಿ, ಬಿಪಿಎಲ್ ಪಡಿತರ ಚೀಟಿ ಬಡ್ಡಿ ರಹಿತ ಸಾಲದಂತಹ ಸೌಲಭ್ಯಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.ಸರ್ಕಾರ ಹೊಸ ಸರ್ವೆ ಪಟ್ಟಿಯನ್ನು ಬಿಡುಗಡೆ ಮಾಡದೆ ಇರುವುದರ ಹಿಂದೆ ದೇವದಾಸಿ ಮಹಿಳೆಯರನ್ನು ಸೌಲಭ್ಯಗಳಿಂದ ವಂಚಿತಗೊಳಿಸುವ ಹುನ್ನಾರವಿದೆ ಎಂದು ಕಿಡಿ ಕಾರಿದರು.



ದೇವದಾಸಿ ಮಹಿಳೆಯರ ಮದುವೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಇನ್ನುಳಿದ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 14ರಿಂದ 18ರವರೆಗೆ ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಸಂಘದ ಆಯಾ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.