ಚಿಕ್ಕಮಗಳೂರು: ಚಿಕ್ಕಮಗಳೂರು ಮೋಟಾರು ಸ್ಪೋರ್ಟ್ಸ್ ಕ್ಲಬ್ ಮತ್ತು ಕೆಫೆ ಕಾಫಿ ಡೇ ಆಶ್ರಯದಲ್ಲಿ ಇಲ್ಲಿನ ಅಂಬರ್ವ್ಯಾಲಿ ವಸತಿ ಶಾಲೆ ಮೈದಾನ ದಲ್ಲಿ ಗುರುವಾರ ಆರಂಭವಾದ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಷಿಪ್ನಲ್ಲಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ. ಮೊದಲ ದಿನದ ಪ್ರೇಕ್ಷಕ ರಂಜನೆಯ ಸೂಪರ್ ಸ್ಪೆಷಲ್ ಸ್ಟೇಜ್ ಅಂಕುಡೊಂಕಿನ ಟ್ರ್ಯಾಕ್ನಲ್ಲಿ ಅಮೋಘ ಚಾಲನಾ ಕೌಶಲ್ಯ ಪ್ರದರ್ಶಿಸಿದ ದೆಹಲಿಯ ಜೆಸಿಟಿ ತಂಡದ ಚಾಲಕ ಸಮೀರ್ ಥಾಪರ್ ಮತ್ತು ಸಹ ಚಾಲಕ ಗುರಿಂದರ್ ಸಿಂಗ್ ರ್ಯಾಲಿಯ ಶರವೇಗದ ಚಾಲಕರಾಗಿ ಹೊರಹೊಮ್ಮಿದರು.

ಮಿಸ್ತುಬಿಷಿ ಲ್ಯಾನ್ಸರ್ ಇವೊ ಎಕ್ಸ್ ಕಾರು ಚಲಾಯಿಸಿದ ಪರಿಣಿತ ಚಾಲಕ ಥಾಪರ್ ಕೇವಲ 2 ನಿಮಿಷ 33.9 ಸೆಕೆಂಡ್ಗಳಲ್ಲಿ 2.50 ಕಿ.ಮೀ. ದೂರದ ಗುರಿ ಮುಟ್ಟಿ ಪ್ರೇಕ್ಷಕರ ಮನಗೆದ್ದರು.

ಕಾಫಿ ಕಣಿವೆಯಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ನಡುವೆ ಫೋಗ್ಸ್ವ್ಯಾಗನ್ ಆರ್2 ಕಾರು ಚಾಲನೆ ಮಾಡಿದ ಮಾಜಿ ವಿಶ್ವ ಚಾಂಪಿಯನ್ ಮಲೇಷ್ಯಾದ ಕರಮ್ಜಿತ್ ಸಿಂಗ್ (ಸಹ ಚಾಲಕ ಜಗದೇವ್ ಸಿಂಗ್) 2 ನಿಮಿಷ 42.8 ಸೆಕೆಂಡುಗಳಲ್ಲಿ ಗುರಿ ಸೇರಿ ಎರಡನೇ ಅತಿ ವೇಗದ ಚಾಲಕ ಎನಿಸಿಕೊಂಡರು.

ದೆಹಲಿಯ ಗೌರವ್ ಗಿಲ್ (ಸಹ ಚಾಲಕ ಮೂಸಾ ಷರೀಫ್) ಮಹಿಂದ್ರಾ ಎಕ್ಸ್ಯುವಿ 500 ಕಾರಿನಲ್ಲಿ ತೋರಿದ ಚಾಲನಾ ಕೌಶಲ್ಯ (ಗುರಿ ತಲುಪಲು ತೆಗೆದುಕೊಂಡ ಅವಧಿ 2 ನಿ, 46.1ಸೆ) 2014ರಲ್ಲಿ ನಡೆಯಲಿರುವ ಏಷ್ಯಾ ಕಪ್ ರ್ಯಾಲಿ ಮೇಲೆ ಕಣ್ಣಿಟ್ಟಿರುವಂತೆ ಕಾಣಿಸಿತು. ಮತ್ತೊಬ್ಬ ಚಾಲಕ ಮೈಸೂರಿನವರೇ ಆದ ಲೋಹಿತ್ ವಿ. ಅರಸ್ (ಸಹ ಚಾಲಕ ಬೋನಿ ಥಾಮಸ್) ಈ ಬಾರಿ ಮಹಿಂದ್ರಾ ಎಕ್ಸ್ಯುವಿ 500 ಕಾರು ಚಲಾಯಿಸಿ ಎಸ್ಯುವಿಎನ್ಆರ್ಸಿ ವಿಭಾಗದಲ್ಲಿ ಮೂರನೇಯವರಾಗಿ ಗುರಿ (2: 50.7)ಸೇರಿದರು.

ಈ ವರ್ಷದ ಕಳೆದ ನಾಲ್ಕು ಸುತ್ತಿನ ರ್ಯಾಲಿಯಲ್ಲಿ ಅಗ್ರಸ್ಥಾನ ಕಾಯ್ದು ಕೊಂಡು ರ್ಯಾಲಿಯ ಸಮಗ್ರ ಚಾಂಪಿಯನ್ಷಿಪ್ ಗೆದ್ದುಕೊಂಡಿರುವ ಕೋಲ್ಕತ್ತಾದ ಅಮರ್ಜಿತ್ ಘೋಷ್ ಅಂತಿಮ ಸುತ್ತಿನ ರ್ಯಾಲಿಯಿಂದ ಹೊರಗುಳಿದಿರುವುದು ಪ್ರೇಕ್ಷಕರಿಗೆ ಕೊಂಚ ನಿರಾಸೆ ಮೂಡಿಸಿತು.

ಶುಕ್ರವಾರ ಬೆಳಿಗ್ಗೆ ನಗರದ ಎಬಿಸಿ ಕಂಪನಿ ಆವರಣದಿಂದ ಆರಂಭವಾಗುವ ಪ್ರಮುಖ ಹಂತದ ರ್ಯಾಲಿ ಅಪ್ಪಟ ಮಲೆನಾಡಿನ ಆಲದಗುಡ್ಡೆ, ಬಸ್ಕಲ್, ಚೀಕನಹಳ್ಳಿ, ಚಟ್ನಹಳ್ಳಿ, ಕಮ್ಮರಗೋಡು ಕಾಫಿ ತೋಟಗಳಲ್ಲಿ ನಡೆಯಲಿದೆ.

ಐಎನ್ಆರ್ಸಿ ಓವರ್ಆಲ್: ಸಿರಿಸ್ಚಂದ್ರನ್/ನಿಖಿಲ್ ಪೈ (ಸ್ಲೈಡ್ವೇಸ್ ಇಂಡಸ್ಟ್ರಿಸ್, ವೋಕ್ಸ್ ವ್ಯಾಗನ್ ಪೋಲೊ)–1(02:45.3), ಅರ್ಜುನ್ ರಾವ್/ಸತೀಸ್ ರಾಜಗೋಪಾಲ್ (ವೋಕ್ಸ್ ವ್ಯಾಗನ್ ಪೋಲೊ)–2 (02:45.7), ಗಿರಿಜಾಶಂಕರ ಜೋಷಿ/ ಚಂದ್ರಮೌಳಿ (ಮಿಸ್ತುಬಿಷಿ ಸಿಡಿಯಾ)–3 (02:46.0).
ಐಎನ್ಆರ್ 2000ಸಿಸಿ: ಗಿರಿಜಾಶಂಕರ ಜೋಷಿ/ ಚಂದ್ರಮೌಳಿ (ಮಿಸ್ತುಬಿಷಿ ಸಿಡಿಯಾ)–1 (02:46.0), ವಿಕ್ರಮ್ ದೇವದಾಸನ್/ಅಶ್ವಿನ್ನಾಯಕ್ (ಮಿಸ್ತುಬಿಷಿ ಸಿಡಿಯಾ)–2 (02:46.2), ರಾಹುಲ್ ಕಾಂತರಾಜ್/ವಿವೇಕ್ ಭಟ್ (ಮಿಸ್ತುಬಿಷಿ ಸಿಡಿಯಾ)–3 (02:46.5),
ಐಎನ್ಆರ್ಸಿ 1600 ಸಿಸಿ: ಸಿರಿಸ್ಚಂದ್ರನ್/ನಿಖಿಲ್ ಪೈ (ಸ್ಲೈಡ್ವೇಸ್ ಇಂಡಸ್ಟ್ರಿಸ್, ವೋಕ್ಸ್ ವ್ಯಾಗನ್ ಪೋಲೊ)–1(02:45.3), ಅರ್ಜುನ್ ರಾವ್/ಸತೀಸ್ ರಾಜಗೋಪಾಲ್ (ವೋಕ್ಸ್ ವ್ಯಾಗನ್ ಪೋಲೊ)–2 (02:45.7), ಫಲ್ಗುಣ ಅರಸ್/ ಡಿ.ಎಸ್.ಅನೂಪ್ಕುಮಾರ್ (ವೋಕ್ಸ್ ವ್ಯಾಗನ್ ಪೋಲೊ)–3 (02:47.8).

ಐಎನ್ಆರ್ಸಿ ಜೆಐಎನ್ಆರ್ಸಿ: ಅನಿರುದ್ಧ ರಂಜನೇಕರ್/ನಿತಿನ್ ಜಾಕೋಬ್ ((ಸ್ಲೈಡ್ವೇಸ್ ಇಂಡಸ್ಟ್ರಿಸ್, ವೋಕ್ಸ್ ವ್ಯಾಗನ್ ಪೋಲೊ)–1(02:51.3), ಕೆ.ಸಿ.ಆದಿತ್/ ಕೆ.ಎನ್.ಹರೀಶ್ (ಹೋಂಡಾ ಸಿಟಿ)–2 (02:52.4), ಎಂ.ಕೆ.ಸುಹೆಮ್/ಜೀವರತಿನಂ (ಮಾರುತಿ ಬೆಲೆನೊ)–3 (02:53.4).
ಎಸ್ಯುವಿ ಆರ್ಸಿ: ಗೌರವ್ಗಿಲ್/ಮೂಸಾ ಷರೀಫ್ (ಮಹೀಂದ್ರ ಅಡ್ವೆಂಚರ್ ರ್ಯಾಲಿ, ಎಕ್ಸ್ಯುವಿ 500)–1 (02:46.1), ಸನ್ನಿ ಸಿಧು/ಪಿ.ವಿ.ಎಸ್.ಮೂರ್ತಿ (ಮಹೀಂದ್ರ ಅಡ್ವೆಂಚರ್ ರ್ಯಾಲಿ, ಎಕ್ಸ್ಯುವಿ 500)–2 (02:49.9), ಲೋಹಿತ್ ಅರಸ್/ ಬೋನಿ ಥಾಮಸ್ (ಮಹೀಂದ್ರ ಅಡ್ವೆಂಚರ್ ರ್ಯಾಲಿ, ಎಕ್ಸ್ಯುವಿ 500)–3 (02:50.7).

ಐಆರ್ಸಿ: ಸಮೀರ್ ಥಾಪರ್/ಗುರಿಂದರ್ ಸಿಂಗ್ ಮಾನ್ (ಜೆಸಿಟಿ ರ್ಯಾಲಿಯಿಂಗ್, ಮಿಸ್ತುಬಿಷಿ ಇವೊ ಎಕ್ಸ್)–1 (02:39.3), ಕರಮ್ಜಿತ್ ಸಿಂಗ್/ಜಗದೇವ್ ಸಿಂಗ್ ಸ್ಲೈಡ್ವೇಸ್ ಇಂಡಸ್ಟ್ರಿಸ್, ವೋಕ್ಸ್ ವ್ಯಾಗನ್ ಪೋಲೊ ಆರ್2)–2 (02:42.8), ಪ್ರಖ್ಯಾತ್ ಶಿರೋಳ್/ಡಾ.ಎಸ್.ದಿನೇಶ್ (ಮಿಸ್ತುಬಿಷಿ ಸಿಡಿಯಾ)–3 (02:54.4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.