ಗುರುವಾರ , ಮೇ 13, 2021
19 °C

ಸಮ್ಮೇಳನಕ್ಕೆ ದೇಶನೂರು ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಲಹೊಂಗಲ: ಆಂಗ್ಲರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡಿದ, ಪ್ರಪ್ರಥಮ ವೀರರಾಣಿ ಕಿತ್ತೂರ ಚೆನ್ನಮ್ಮಾಜಿಯ `ಕಿತ್ತೂರ ಸಂಸ್ಥಾನ'ದ ಐತಿಹಾಸಿಕ ಹಿನ್ನೆಲೆಯ ದೇಶನೂರು ಗ್ರಾಮ  ತಾಲ್ಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ.ಪ್ರೊ.ಸಿ.ವಿ.ಜ್ಯೋತಿ, ಜಾನಪದ ಹಾಗೂ ದೂರದರ್ಶನ ಕಲಾವಿದ ಸಿ.ಕೆ. ಮೆಕ್ಕೇದ ನೇತೃತ್ವದಲ್ಲಿ 1999ರಲ್ಲಿ ತಿರುಳ್ಗನ್ನಡ ನಾಡು ಒಕ್ಕುಂದದಲ್ಲಿ ನಾಲ್ಕನೇ ಜಿಲ್ಲಾ ಸಾಹಿತ್ಯ ಸಮ್ಮೇಳನ, ಡಾ.ಬಸವರಾಜ ಜಗಜಂಪಿ ನೇತೃತ್ವದಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ 2011ರಲ್ಲಿ ಏಳನೇ ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಜರುಗಿರುವುದು ಸ್ಮರಣೀಯವಾಗಿದೆ.  ನೇಕಾರಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬನೆಯಾಗಿರುವ ಜೊತೆಗೆ ಕೃಷಿ ಅವಲಂಬಿತ ಕುಟುಂಬಗಳನ್ನು ಹೊಂದಿರುವ, ಅಂದಾಜು ಏಳು ಸಾವಿರ ಜನಸಂಖ್ಯೆ, ಗ್ರಾ.ಪಂ. ಆಡಳಿತ ವ್ಯಾಪ್ತಿಯಲ್ಲಿ ದೇಶನೂರ, ಮೊಹರೆ, ಕೊಳಾನಟ್ಟಿ ಗ್ರಾಮಗಳು ಸೇರಿದ್ದು, 2011-12 ನೇ ಸಾಲಿನಲ್ಲಿ `ಸುವರ್ಣ ಗ್ರಾಮ' ಯೋಜನೆಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಸಿದ್ಧಲಿಂಗೇಶ್ವರ ವಿರಕ್ತಮಠ ಆವರಣದಲ್ಲಿ ಬೃಹತ್ ಮಂಟಪ, ಪುಸ್ತಕ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಡಲಾಗಿದ್ದು, ಆರು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.`ಪ್ರಪ್ರಥಮ ಸಾಹಿತ್ಯ ಸಮ್ಮೇಳನ ದೇಶನೂರಿನಲ್ಲಿ ನಡೆಯುತ್ತಿರುವುದು ಹೆಮ್ಮಯ ವಿಷಯವಾಗಿದ್ದು, ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗಲಿದೆ ಎನ್ನುವ ಭರವಸೆ ಹೊಂದಿದ್ದೇವೆ' ಎಂದು ಪದವೀಧರ ಸಂಜು ಹಡಗಿನಹಾಳ ಹೇಳುತ್ತಾರೆ.

ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿರುವುದು ಈ ಭಾಗದ ಚಿತ್ರಕಲಾವಿದರಿಗೆ ಹೆಚ್ಚಿನ ಹುರುಪನ್ನು ತಂದು ಕೊಟ್ಟಿದೆ ಎಂದು ನೇಸರಗಿ ಭಾಗದ ಯುವ ಕಲಾವಿದ ಎಫ್.ಬಿ.ಸೋಮಣ್ಣವರ ಹೆಮ್ಮೆಯಿಂದ ಹೇಳುತ್ತಾರೆ.

ಮಾರ್ಗ ಸೂಚಿಬೈಲಹೊಂಗಲದಿಂದ 17 ಕಿ.ಮೀ. ನೇಸರಗಿ, ನೇಸರಗಿಯಿಂದ 5ಕಿ.ಮೀ. ದೇಶನೂರ ಗ್ರಾಮವಿದೆ. ಬೆಳಗಾವಿಯಿಂದ ದೇಶನೂರ ಕ್ರಾಸ್ 27 ಕಿ.ಮೀ., ದೇಶನೂರ ಕ್ರಾಸ್‌ದಿಂದ 3 ಕಿ.ಮೀ. ದೇಶನೂರ. ಬೈಲಹೊಂಗಲ, ನೇಸರಗಿ ಹಾಗೂ ಬೆಳಗಾವಿಯಿಂದ ಸಾರಿಗೆ ಹಾಗೂ ಖಾಸಗಿ ವಾಹನಗಳ ಸೌಲಭ್ಯವಿದ್ದು, ಬನ್ನಿ ಎಲ್ಲರೂ ಸೇರಿ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ದೇಶನೂರ ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಸ್ವಾಗತಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.