ಜಮಖಂಡಿ: ತೇರದಾಳ ಪಟ್ಟಣದಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಸರಕಾರಿ ಜಮೀನಿನ (ರಿ.ಸ,ನಂ. 210ರ )ಗುಂಡ ಬಾವಿಯನ್ನು ಜೆಸಿಬಿಯಿಂದ ಮುಚ್ಚಿ, ಕೆರೆಯ ಒಡ್ಡನ್ನು ಹರಿದು ಮತ್ತು ಜಾಲಿ ಗಿಡಗಳನ್ನು ಕಡೆವಿ ಅತಿಕ್ರಮಣ ಮಾಡುವ ಯತ್ನ ಶುಕ್ರವಾರ ರಾತ್ರಿ ನಡೆದಿದೆ.

ಈ ಕುರಿತು ಮಾಹಿತಿ ದೊರೆತ ಮೇಲೆ ಪುರಸಭೆ ಮುಖ್ಯಾಧಿಕಾರಿ ಜಿ.ಎಚ್. ಕಾಸೆ ಅವರು ಪುರಸಭೆ ಸದಸ್ಯ ಮಹಾದೇವ ಯಂಡಿಗೇರಿ, ಬಿಜೆಪಿ ಯುವ ಧುರೀಣರಾದ ಪರಪ್ಪ ಗೌಡರ, ಶೀತಲ ಘೂಳನ್ನವರ ಜೊತೆಗೆ ಶನಿವಾರ ಸಂಜೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅತೀಕ್ರಮಣಕ್ಕೆ ನಡೆದ ಯತ್ನವನ್ನು ದೃಢಪಡಿಸಿಕೊಂಡರು.

ಅತಿಕ್ರಮಣಕಾರರಾದ ತಮ್ಮಣ್ಣ ಅರಳಿಮಟ್ಟಿ (ಗಿಡಗಳನ್ನು ಕೆಡವಿದ) ಹಾಗೂ ಸಿದ್ದಪ್ಪ ಅರಳಿಮಟ್ಟಿ (ಒಡ್ಡು ಒಡೆದ) ಅವರನ್ನು ಕರೆಯಿಸಿ ವಿಚಾರಣೆ ನಡೆಸಿ ಅತಿಕ್ರಮಣವಾದ ಬಗ್ಗೆ ಖಾತರಿ ಪಡಿಸಿಕೊಂಡು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಅತಿಕ್ರಮಣಕಾರರು ಪರಪ್ಪ ಗೌಡರ ಜೊತೆಗೆ ಮಾತಿನ ಚಕಮಕಿಗೆ ಇಳಿದರು. ಸರಕಾರಿ ಜಮೀನು ಅತಿಕ್ರಮಣ ಮಾಡುವುದು ಮತ್ತು ಗಿಡಗಳನ್ನು ಕಡಿದು ಕೆಡವುದು ಅಪರಾಧ ಆಗುತ್ತದೆ ಎಂದು ಅರಣ್ಯ ರಕ್ಷಕ ಎಂ.ಬಿ. ಘೋಡಘೇರಿ ತಿಳಿಸಿದರು. ಈ ಕುರಿತು ಮೇಲಾಧಿಕಾರಿಗಳ ಗಮನ ಸೆಳೆದು ಅಪರಾಧಿಗಳ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದರು. ಪುರಸಭೆಯ ಕಿರಿಯ ಎಂಜನಿಯರ ಎಸ್.ಡಿ. ಜಾಧವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.