ನವದೆಹಲಿ: ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರಿಗೆ ಬ್ರಿಟನ್ ಸರಕಾರ ವೀಸಾ ನಿರಾಕರಿಸಿದೆ. ಲಂಡನ್ನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಖಾನ್ ವೀಸಾ ಅರ್ಜಿ ಸಲ್ಲಿಸಿದ್ದರು.

ತನಗೆ ಬ್ರಿಟನ್ ವೀಸಾ ನಿರಾಕರಿಸಿರುವ ವಿಷಯವನ್ನು ಟ್ವೀಟ್ ಮಾಡಿರುವ ಖಾನ್ ಈ ಟ್ವೀಟ್ ನಲ್ಲಿ ಭಾರತದಲ್ಲಿರುವ ಬ್ರಿಟನ್ ಹೈಮಿಷನ್, ಲಂಡನ್ನಲ್ಲಿರುವ ಭಾರತೀಯ ಹೈ ಕಮಿಷನ್ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಟ್ಯಾಗ್ ಮಾಡಿದ್ದಾರೆ.

1970ರಿಂದ ತಾನು ಪ್ರತೀ ವರ್ಷ ಬ್ರಿಟನ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತೇನೆ. ಆದರೆ ತನಗೆ ಈ ವರ್ಷ ವೀಸಾ ನಿರಾಕರಿಸಿರುವುದು ಬೇಸರವನ್ನುಂಟು ಮಾಡಿದೆ. ಜಗತ್ತಿನಲ್ಲಿ ಶಾಂತಿ ಸಮಾಧಾನವನ್ನು ಪಸರಿಸುವ ಕಲಾವಿದರಿಗೆ ವೀಸಾ ನಿರಾಕರಿಸಿರುವುದು ದುಃಖದ ಸಂಗತಿ ಎಂದು ಖಾನ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.