ಬುಧವಾರ, ಜನವರಿ 22, 2020
28 °C

ಸರ್ಕಾರದ ಅಡ್ಡಿ: ಇಜಾಜ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್/ ವಾಷಿಂಗ್ಟನ್ (ಪಿಟಿಐ): ಮೆಮೊಗೇಟ್ ಹಗರಣದ ರೂವಾರಿ ಪಾಕಿಸ್ತಾನ ಮೂಲದ ಅಮೆರಿಕದ ಉದ್ಯಮಿ ಮನ್ಸೂರ್ ಇಜಾಜ್ ಖಾನ್, ಈ ಪ್ರಕರಣದಲ್ಲಿ ತಾವು ಸುಪ್ರೀಂ  ಕೋರ್ಟ್ ಮುಂದೆ ಸಾಕ್ಷಿ ಹೇಳದಂತೆ ತಡೆಯಲು ಪಾಕಿಸ್ತಾನ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.ಈ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದೆ. ಸುಪ್ರೀಂ ಕೋರ್ಟ್ ನಿಯೋಜಿಸಿದ ನ್ಯಾಯಾಂಗ ಆಯೋಗದ ಮುಂದೆ ತಾವು ಹೇಳಿಕೆ ನೀಡದಂತೆ ತಡೆಯಲು ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಸಂಚು ನಡೆಸಿದ್ದಾರೆ. ಪಾಕಿಸ್ತಾನಕ್ಕೆ ಬಂದ ಮೇಲೆ ದೇಶದಿಂದ ಹೊರಹೋಗದಂತೆ ತಡೆಯಲು ಸಂಸದೀಯ ಸಮಿತಿಯ ಮೇಲೆ ಒತ್ತಡ ತಂದಿದ್ದಾರೆ ಎಂದೂ ದೂರಿದ್ದಾರೆ.

 

ಪ್ರತಿಕ್ರಿಯಿಸಿ (+)