ಬುಧವಾರ, ಮೇ 12, 2021
24 °C

ಸರ್ಕಾರದ ನಿರ್ಧಾರ ಸ್ವಾಗತಾರ್ಹ

-ಎಸ್. ಎಲ್. ತಲ್ಲೂರ,ನೇಗಿನಹಾಳ Updated:

ಅಕ್ಷರ ಗಾತ್ರ : | |

ಕೆಪಿಎಸ್‌ಸಿ ನಡೆಸಿರುವ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಗಳಲ್ಲಿ ಅವ್ಯವಹಾರ ಕುರಿತಾದ ವರದಿಗಳಿಗೆ ಸ್ಪಂದಿಸಿರುವ ಸರ್ಕಾರ, ನೇಮಕಾತಿ ಪಟ್ಟಿಗೆ ತಡೆ ನೀಡಲು ನಿರ್ಧರಿಸಿರುವ ಕ್ರಮ ಸ್ವಾಗತಾರ್ಹವಾದುದಾಗಿದೆ. ವಿದ್ಯಾವಂತರು ಸರ್ಕಾರದ ಮೇಲಿಟ್ಟಿರುವ ನಂಬಿಕೆ ಇದರಿಂದ ಇನ್ನೂ ಹೆಚ್ಚಾಗಿದೆ. ಆದರೆ ಆ ನಂಬಿಕೆ ಉಳಿಸಿಕೊಳ್ಳುವುದು ಸರ್ಕಾರದ ಮೇಲಿರುವ ಜವಾಬ್ದಾರಿಯಾಗಿದೆ.ಅದರಂತೆ ಕೆ.ಎ.ಎಸ್. ನೇಮಕಾತಿಗಿಂತಲೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ನೇರ ನೇಮಕಾತಿಯ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಸಂದರ್ಭದಲ್ಲಿಯೂ ಕೂಡಾ 50 ಹಾಗೂ 150 ಅಂಕಗಳನ್ನು ನೀಡುವಲ್ಲಿ ವ್ಯತ್ಯಾಸಗಳಾಗಿವೆ. 2006 ರಲ್ಲಿ ಅಧಿಸೂಚಿತ 558 ಹುದ್ದೆಗಳು, 2007 ರಲ್ಲಿ ಅಧಿಸೂಚಿತ 629 ಪ್ರೌಢಶಾಲಾ ಮುಖ್ಯ ಶಿಕ್ಷಕರ ನೇರ ನೇಮಕಾತಿಯ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಗಳಿಗೆ ಕ್ರಮವಾಗಿ 2009ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಹಾಗೂ 2010 ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಂದರ್ಶನ ನಡೆಸಲಾಗಿತ್ತು.ಇದರಲ್ಲಿನ ಅಂಕಗಳ ನೀಡಿಕೆಯ ವ್ಯತ್ಯಾಸದಿಂದಾಗಿ ಹಲವಾರು ಪ್ರತಿಭಾವಂತ ಬಿ.ಇಡಿ ಪದವೀಧರರು ಅನ್ಯಾಯಕ್ಕೊಳಗಾಗಿದ್ದಾರೆ. ಸರ್ಕಾರ ಇದನ್ನು ಸೇರಿಸಿ ತನಿಖೆಗೆ ಒಳಪಡಿಸಿ ಅರ್ಹರಿಗೆ ನ್ಯಾಯ ದೊರಕಿಸಿ ಕೊಡಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.